ಈ ವಸ್ತು ನಿಮ್ಮ ಜೇಬಲ್ಲಿದ್ದರೆ, ಸಮಸ್ಯೆಗಳು ನಿಮ್ಮ ಹತ್ತಿರವೂ ಸುಳಿಯೋದಿಲ್ಲ

First Published | Jan 6, 2024, 4:11 PM IST

ವ್ಯಕ್ತಿಯ ಅನೇಕ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ವಾಸ್ತು ಶಾಸ್ತ್ರ ಹೊಂದಿದೆ. ಇಲ್ಲಿ ಅನೇಕ ಪರಿಹಾರಗಳನ್ನು ಉಲ್ಲೇಖಿಸಲಾಗಿದೆ. ಅವುಗಳನ್ನು ಪಾಲಿಸಿದ್ರೆ ಸಣ್ಣ ಸಮಸ್ಯೆಯೂ ನಿಮ್ಮ ಬಳಿ ಸುಳಿಯೋದಿಲ್ಲ. 
 

ವಾಸ್ತು ಶಾಸ್ತ್ರದಲ್ಲಿ (Vastu Tips) ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತೆ. ಕೆಲವು ವಸ್ತುಗಳಿಂದಲೇ ಸಮಸ್ಯೆ ಬಗೆಹರಿಯುತ್ತೆ ಎನ್ನಲಾಗುತ್ತದೆ. ಕೆಲವೊಂದು ಸಣ್ಣ ವಸ್ತುಗಳನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ಒಬ್ಬ ವ್ಯಕ್ತಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ವಾಸ್ತು ಪ್ರಕಾರ ಯಾವ ವಸ್ತುಗಳನ್ನು ಜೇಬಿನಲ್ಲಿ ಇಡಬೇಕು ಅನ್ನೋದನ್ನು ತಿಳಿಯೋಣ. 

ಪ್ರತಿಯೊಬ್ಬ ವ್ಯಕ್ತಿಯ ಜೇಬಿನಲ್ಲಿ (pocket) ಏನಾದರೂ ಇರುತ್ತದೆ. ಹೀಗಿರುವಾಗ ವಾಸ್ತುವಿನಲ್ಲಿ ಉಲ್ಲೇಖಿಸಲಾದ ಈ ವಸ್ತುಗಳನ್ನು ನೀವು ನಿಮ್ಮ ಜೇಬಲ್ಲಿ ಇಟ್ಟುಕೊಂಡರೆ, ಜೀವನದಲ್ಲಿ ಪ್ರಯೋಜನಗಳನ್ನು ನೋಡಬಹುದು. ಒಬ್ಬ ವ್ಯಕ್ತಿಯು ತನ್ನ ಜೇಬಿನಲ್ಲಿ ಇಟ್ಟುಕೊಳ್ಳಬೇಕಾದ ವಸ್ತುಗಳು ಯಾವುವು ಎಂದು ತಿಳಿಯೋಣ.

Tap to resize

ನಿಮ್ಮ ಜೇಬನ್ನು ಖಾಲಿ ಇಡಬೇಡಿ
ಒಬ್ಬ ತನ್ನ ಜೇಬನ್ನು ಎಂದಿಗೂ ಖಾಲಿಯಾಗಿ ಇಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ನಂಬಲಾಗಿದೆ. ಹಾಗೆ ಮಾಡುವುದರಿಂದ ವ್ಯಕ್ತಿಗೆ ಹಣದ ನಷ್ಟವಾಗಬಹುದು. ಆದ್ದರಿಂದ ನಿಮ್ಮ ಜೇಬಿನಲ್ಲಿ ಪರ್ಸ್ ಇರಿಸಿಕೊಳ್ಳಿ.

ಯಶಸ್ಸನ್ನು ಪಡೆಯುವಿರಿ
ನೀವು ಪ್ರತಿದಿನ ಲವಂಗವನ್ನು (clove) ನಿಮ್ಮ ಜೇಬಿನಲ್ಲಿ ಇಟ್ಟುಕೊಂಡರೆ, ಅದು ಯಶಸ್ಸನ್ನು ಸಾಧಿಸುವ ಅವಕಾಶಗಳನ್ನು ನೀಡುತ್ತದೆ. ಹಾಗಾಗಿ ಮನೆಯಿಂದ ಹೊರಡುವ ಮೊದಲು ಯಾವಾಗಲೂ 2 ಲವಂಗಗಳನ್ನು ನಿಮ್ಮ ಜೇಬಿನಲ್ಲಿ ಇರಿಸಿಕೊಳ್ಳಿ.

ಅದೃಷ್ಟ ಸಿಗಲಿದೆ
ಯಾವಾಗಲೂ ನವಿಲು ಗರಿಗಳು (peacock feather) ಮತ್ತು ಒಂದು ರೂಪಾಯಿ ನಾಣ್ಯವನ್ನು ನಿಮ್ಮ ಜೇಬಿನಲ್ಲಿ ಇರಿಸಿಕೊಳ್ಳಿ. ಹೀಗೆ ಮಾಡುವುದರಿಂದ, ನಕಾರಾತ್ಮಕ ಶಕ್ತಿಯು (Negative Energy) ನಿಮ್ಮಿಂದ ದೂರ ಉಳಿಯುತ್ತದೆ. ಅಲ್ಲದೆ, ವ್ಯಕ್ತಿಯು ಅದೃಷ್ಟವನ್ನು (Luck) ಪಡೆಯುತ್ತಾನೆ.

ಬೆಳ್ಳಿ ನಾಣ್ಯ
ನಿಮ್ಮ ಜೇಬಿನಲ್ಲಿ ಬೆಳ್ಳಿ ನಾಣ್ಯವನ್ನು (silver coin) ಇಟ್ಟುಕೊಳ್ಳುವುದು ಸಿಕ್ಕಿ ಹಾಕಿಕೊಂಡ ಹಣವನ್ನು ಮರಳಿ ಪಡೆಯುವ ಸಾಧ್ಯತೆ ಹೆಚ್ಚಿಸುತ್ತದೆ. ಇದರೊಂದಿಗೆ, ಶ್ರೀ ಯಂತ್ರವನ್ನು ಜೇಬಿನಲ್ಲಿ ಇಟ್ಟುಕೊಳ್ಳುವುದು ಸಹ ತುಂಬಾ ಶುಭವೆಂದು ಪರಿಗಣಿಸಲಾಗಿದೆ.

ನೀವು ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ
ನೀವು ಯಾವುದೇ ಪ್ರಮುಖ ಕೆಲಸ ಅಥವಾ ಸಂದರ್ಶನಕ್ಕಾಗಿ ಹೊರಗೆ ಹೋಗುತ್ತಿದ್ದರೆ, ಮನೆಯಿಂದ ಹೊರಡುವ ಮೊದಲು, ಮೂರು ತಾಮ್ರದ ನಾಣ್ಯಗಳನ್ನು ಕೆಂಪು ದಾರದಿಂದ ಸುತ್ತಿ ಮತ್ತು ಅವುಗಳನ್ನು ನಿಮ್ಮ ಬಲ ಜೇಬಿನಲ್ಲಿ ಇರಿಸಿ. ಇದು ಆ ಕಾರ್ಯದಲ್ಲಿ ಯಶಸ್ಸನ್ನು(success)  ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
 

Latest Videos

click me!