Feng Shui: ಮನಿ ಪ್ಲಾಂಟ್ ಇದ್ದರೂ ಸಹ ನಿಮ್ಮ ಮನೆಯಲ್ಲಿ ಹಣ ಉಳಿಯುವುದಿಲ್ಲವೇ? ಹಾಗಿದ್ರೆ ಮನಿ ಪ್ಲಾಂಟ್‌ನ ಪಾತ್ರೆಯಲ್ಲಿ ಈ ಒಂದು ವಸ್ತುವನ್ನು ಇಟ್ಟು ನೋಡಿ. ಏಳು ತಲೆಮಾರಿನವರೆಗೂ ಸಾಕಾಗುವಷ್ಟು ದುಡ್ಡು ನಿಮ್ಮ ಬಳಿ ಇರುತ್ತದೆ. ಅದಕ್ಕಾಗಿ ಯಾವ ವಸ್ತುವನ್ನು ಇಡಬೇಕು ನೋಡಿ.
ನಾವೆಲ್ಲರೂ ನಮ್ಮ ಮನೆಗಳಲ್ಲಿ ಸಮೃದ್ಧಿಯನ್ನು ಹೆಚ್ಚಿಸಲು ಮನಿ ಪ್ಲಾಂಟ್ ನೆಡುತ್ತೇವೆ, ಆದರೆ ಆ ಸಸ್ಯವನ್ನು ಇಟ್ಟುಕೊಂಡ ತಕ್ಷಣ ಅದು ‘ಮನಿ ಮ್ಯಾಗ್ನೆಟ್' ಆಗಿ ಬದಲಾಗುವುದಿಲ್ಲ ಎಂದು ನಿಮಗೆ ತಿಳಿದಿದೆಯೇ? ನೀವು ಅದರ ಸುಪ್ತ ಶಕ್ತಿಯನ್ನು ಸಕ್ರಿಯಗೊಳಿಸದ ಹೊರತು, ಸಂಪತ್ತು ನಿಮ್ಮ ಮನೆಯಲ್ಲಿ ಉಳಿಯುವುದಿಲ್ಲ. ಸಂಪತ್ತು ಹೆಚ್ಚಾಗೋದು ಇಲ್ಲ.
26
ಮನಿಪ್ಲಾಂಟ್’ಗೆ ಹಾಕಿ ಈ ವಸ್ತು
ಫೆಂಗ್ ಶೂಯಿ ಮತ್ತು ಕ್ರಿಸ್ಟಲ್ ಥೆರಪಿಯಲ್ಲಿ ಹೇಳುವಂತೆ ಒಂದು ಹೊಳೆಯುವ ವಸ್ತುವನ್ನು ಮನಿ ಪ್ಲಾಂಟ್ ಬಳಿ ಅಥವಾ ಅದರ ಕುಂಡದೊಳಗೆ ಇರಿಸಿದಾಗ ಮನೆಯ "ಸಂಪತ್ತಿನ ಮೂಲೆ’ ಆಕ್ಟಿವ್ ಆಗುತ್ತದೆ. ಇದರಿಂದ ಹಣ ನಿಮ್ಮ ಬಳಿ ಚುಂಬಕದಂತೆ ಆಕರ್ಷಿತವಾಗುತ್ತದೆ.
36
'ಪೈರೈಟ್ ಕ್ರಿಸ್ಟಲ್' ಮ್ಯಾಜಿಕ್
ಈ ಮ್ಯಾಜಿಕಲ್ ಮತ್ತು ಚಿನ್ನದಂತೆ ಹೊಳೆಯುವ ಕ್ರಿಸ್ಟಲ್ ನ್ನು ಪೈರೈಟ್ ಕ್ರಿಸ್ಟಲ್ ಎಂದು ಕರೆಯಲಾಗುತ್ತದೆ. ನೋಡಲು ಇದು ಹಳದಿ ಬಣ್ಣದಲ್ಲಿದ್ದು, ಹೆಚ್ಚು ಹೊಳೆಯುತ್ತದೆ. ಇದು ನಿಜವಾದ ಚಿನ್ನವನ್ನು ಹೋಲುತ್ತದೆ. ಅದಕ್ಕಾಗಿಯೇ ಫೆಂಗ್ ಶೂಯಿಯಲ್ಲಿ ಇದನ್ನು "ಫೂಲ್ಸ್ ಗೋಲ್ಡ್" ಎಂದೂ ಕರೆಯಲಾಗುತ್ತದೆ.
ಪೈರೈಟ್ ಕ್ರಿಸ್ಟಲ್ ನ ವಿಶಿಷ್ಟ ಸಂಯೋಜನೆಯಿಂದಾಗಿ, ಇದು ಬ್ರಹ್ಮಾಂಡದಿಂದ ಸಂಪತ್ತು, ಸಮೃದ್ಧಿ ಮತ್ತು ಹೊಸ ಅವಕಾಶಗಳನ್ನು ಆಕರ್ಷಿಸುತ್ತದೆ. ನೀವು ಅದನ್ನು ಮನಿ ಪ್ಲಾಂಟ್‌ನ 'ವುಡ್ ಎನರ್ಜಿ' ಅಂಶದೊಂದಿಗೆ ಸೇರಿಸಿದಾಗ, ಹಣದ ಒಳಹರಿವು ಹತ್ತು ಪಟ್ಟು ಹೆಚ್ಚಾಗುತ್ತದೆ.
56
ಇದನ್ನು ಇಡುವ ಸರಿಯಾದ ವಿಧಾನ ಯಾವುದು?
ನೀವು ಮೊದಲಿಗೆ ಒಂದು ಪೈರೈಟ್ ಕ್ರಿಸ್ಟಲ್ ಖರೀದಿಸಿ. ಒಂದು ಸಣ್ಣ ತುಂಡನ್ನು ಅಥವಾ ಕಚ್ಚಾ ಪೈರೈಟ್‌ನ ಕೆಲವು ಸಣ್ಣ ಕಣಗಳನ್ನು ಖರೀದಿಸಿ. ಅದನ್ನು ನಿಮ್ಮ ಮನಿ ಪ್ಲಾಂಟ್‌ನ ಕುಂಡದ ಮಣ್ಣಿನ ಮೇಲ್ಮೈಯಲ್ಲಿ, ಸಸ್ಯದ ಮುಖ್ಯ ಬೇರಿನ ಬಳಿ ಇರಿಸಿ. ಸಸ್ಯವು ನೀರಿನಲ್ಲಿ ಬೆಳೆಯುತ್ತಿದ್ದರೆ, ಅದನ್ನು ಬಾಟಲಿಯ ಬಳಿ ಇರಿಸಿ.
66
ಪೈರೈಟ್ ಇಲ್ಲದಿದ್ದರೆ ಇದನ್ನಿಡಿ
ನಿಮ್ಮ ಬಳಿ ಪೈರೈಟ್ ಇಲ್ಲದಿದ್ದರೆ, ಮನಿ ಪ್ಲಾಂಟ್‌ನ ಪಾತ್ರೆಯಲ್ಲಿ ಕ್ಲಿಯರ್ ಸ್ಫಟಿಕ ಶಿಲೆಯನ್ನು ಇರಿಸಿ. ಫೆಂಗ್ ಶೂಯಿಯಲ್ಲಿ, ಇದನ್ನು 'ಮಾಸ್ಟರ್ ಹೀಲರ್' ಎನ್ನುತ್ತಾರೆ. ಇದು ಸಸ್ಯದ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸಂಪತ್ತಿನ ಒಳಹರಿವಿಗೆ ಅಡ್ಡಿಯಾಗುವ ಪ್ರತಿಯೊಂದು ಅಡಚಣೆಯನ್ನು ಸಂಪೂರ್ಣವಾಗಿ ನಿವಾರಿಸುತ್ತದೆ.