ಒಗ್ಗರಣೆಗೆ ಮಾತ್ರ ಬೆಳ್ಳುಳ್ಳಿ ಬಳಸ್ತಿದ್ದೀರಾ? ಅದಕ್ಕೆ ದರಿದ್ರತನ ನಿಮ್ಮನ್ನ ಕಾಡ್ತಿರೋದು?

Published : Jun 01, 2026, 11:10 AM IST

ವಾಸ್ತು ಶಾಸ್ತ್ರದ ಪ್ರಕಾರ, ಬೆಳ್ಳುಳ್ಳಿಯನ್ನು ಬಳಸಿ ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ನಿವಾರಿಸಬಹುದು ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸಬಹುದು. ವಾಸ್ತು ಪ್ರಕಾರ ಬೆಳ್ಳುಳ್ಳಿ ಬಳಕೆಯಿಂದ ದರಿದ್ರತನ ದೂರವಾಗಿ ಲಕ್ಷ್ಮೀದೇವಿಯ ಆಶೀರ್ವಾದ ಸಿಗುತ್ತದೆ.

PREV
15
ಬೆಳ್ಳುಳ್ಳಿ ವಾಸ್ತು ಶಾಸ್ತ್ರ

ಬೆಳ್ಳುಳ್ಳಿ ಪರಿಮಳ ಇಡೀ ಮನೆ ಆವರಿಸುತ್ತಿದೆ ಅಂದ್ರೆ ಅಡುಗೆ ಸಿದ್ಧವಾಗುತ್ತಿದೆ ಎಂದರ್ಥ. ಕೆಲವರು ಬೆಳ್ಳುಳ್ಳಿ ಸೇವನೆ ಮಾಡಲ್ಲ. ಒಂದಿಷ್ಟು ಮಂದಿಗೆ ಬೆಳ್ಳುಳ್ಳಿ ಇಲ್ಲದ ಅಡುಗೆ ಅಂದ್ರೆ ಊಟವೇ ಮಾಡಲ್ಲ. ವಾಸ್ತು ಶಾಸ್ತ್ರದಲ್ಲಿ ಬೆಳ್ಳುಳ್ಳಿ ಬಗ್ಗೆ ಉಲ್ಲೇಖವಿದೆ. ಈ ಬೆಳ್ಳುಳ್ಳಿಯನ್ನು ವಾಸ್ತು ಶಾಸ್ತ್ರದ ಪ್ರಕಾರ ಹೇಗೆ ಬಳಕೆ ಮಾಡಬೇಕು ಎಂಬುದನ್ನು ವಿವರಿಸಲಾಗಿದೆ.

25
ನಕಾರಾತ್ಮಕ ಶಕ್ತಿ ನಿವಾರಣೆಗೆ ಬೆಳ್ಳುಳ್ಳಿ

ಬೆಳ್ಳುಳ್ಳಿಯಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ಹೊರಗೆ ಹಾಕಬಹುದು. ಕ್ರಮಬದ್ಧವಾಗಿ ಬೆಳ್ಳುಳ್ಳಿ ಬಳಕೆ ಮಾಡಿದ್ರೆ ನಿಮ್ಮನ್ನು ಕಾಡುತ್ತಿರೋ ದರಿದ್ರತನ ದೂರವಾಗುತ್ತದೆ. ಹಾಗೆಯೇ ಲಕ್ಷ್ಮೀದೇವಿಯ ಆಶೀರ್ವಾದ ಸಿಗಲಿದೆ. ಈ ಲೇಖನದಲ್ಲಿ ಬೆಳ್ಳುಳ್ಳಿ ಹೇಗೆ ಬಳಸಬೇಕು ಎಂಬುದರ ಮಾಹಿತಿ ಇಲ್ಲಿದೆ.

35
ಮುಖ್ಯದ್ವಾರದ ಬಳಿ ಬೆಳ್ಳುಳ್ಳಿ ಇರಿಸಿ

ಶನಿವಾರದಂದು ಬೆಳಗ್ಗೆ ಬೆಳ್ಳುಳ್ಳಿ ಗಡ್ಡೆ ಅಥವಾ ಒಂದು ಎಸಳನ್ನು ಮುಖ್ಯದ್ವಾರದ (ಗೇಟ್) ಬಳಿ ಯಾರಿಗೂ ಕಾಣಿಸದಂತೆ ಇರಿಸಬೇಕು. ಹೀಗೆ ಮಾಡೋದರಿಂದ ನಿಂತು ಹೋಗಿರುವ ಆದಾಯದ ಹರಿವು ಹೆಚ್ಚಾಗುತ್ತದೆ. ನಿಮಗೆ ಬಹುದಿನಗಳಿಂದ ಬರಬೇಕಾದ ಹಣವು ನಿಮ್ಮ ಕೈ ಸೇರುತ್ತದೆ. ಇದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

45
ಬೆಳ್ಳುಳ್ಳಿಗೆ ಕುಂಕುಮ

ಮಂಗಳವಾರದಂದು ಬೆಳ್ಳುಳ್ಳಿ ಕುಂಕುಮ ಹಚ್ಚಿ ಅದನ್ನು ಮನೆಯ ಛಾವಣಿ ಮೇಲೆ ಎಸೆಯಿರಿ. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೊರಗೆ ಹೋಗುತ್ತವೆ. ಹಾಗೆಯೇ ಮನೆಯಲ್ಲಿರುವ ದುರಾದೃಷ್ಟವೂ ದೂರವಾಗುತ್ತದೆ. ಬೆಳ್ಳುಳ್ಳಿಗೆ ಕುಂಕುಮ ಹಚ್ಚಿ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಮನೆಯ ಮೇಲೆ ಎಸೆಯಬೇಕು. ಈ ಒಂದು ಕೆಲಸದಿಂದ ಅನಗತ್ಯ ವೆಚ್ಚಗಳ ಕಡಿಮೆಯಾಗಿ ಹಣದ ಉಳಿತಾಯವಾಗುತ್ತದೆ.

55
ಬೆಳ್ಳುಳ್ಳಿ ಮೇಲೆ 'ಓಂ' ಅಂತಾ ಬರೀರಿ

ಬೆಳ್ಳುಳ್ಳಿ ಮೇಲೆ ಓಂ ಅಂತ ಬರೆದು ಅದನ್ನು ಹಣ ಇರಿಸೋ ತಿಜೋರಿಯಲ್ಲಿರಿಸಬೇಕು. ಹೀಗೆ ಮಾಡೋದರಿಂದ ಹಣ ಮತ್ತು ಚಿನ್ನಾಭರಣಗಳು ಮನೆಯಲ್ಲಿಯೇ ಭದ್ರವಾಗಿ ಉಳಿಯುತ್ತದೆ. ಬೆಳ್ಳುಳ್ಳಿಯಿಂದಾಗಿ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸಿರುತ್ತಾಳೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.

Read more Photos on
click me!

Recommended Stories