Friday Vastu: ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಶುಕ್ರವಾರ ಸಂಜೆ ಈ ಕೆಲಸ ಮಾಡಿ

Published : May 29, 2026, 05:03 PM IST

Friday Vastu: ಶುಕ್ರವಾರ ಲಕ್ಷ್ಮಿ ದೇವಿಗೆ ಅರ್ಪಿತವಾಗಿದೆ, ಶುಕ್ರವಾರದಂದು ಕೆಲವು ವಾಸ್ತು ಸಲಹೆಗಳನ್ನು ಅಳವಡಿಸಿಕೊಳ್ಳುವುದರಿಂದ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಬಹುದು. ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ನೀವು ಮಾಡಬೇಕಾದ ಕೆಲಸಗಳಿವು. 

PREV
15
ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಹೀಗೆ ಮಾಡಿ

ಧಾರ್ಮಿಕ ನಂಬಿಕೆಗಳ ಪ್ರಕಾರ, ಲಕ್ಷ್ಮಿ ದೇವಿಯು ವಾಸಿಸುವ ಮನೆಯಲ್ಲಿ ಸಂಪತ್ತು, ಸಮೃದ್ಧಿ ಮತ್ತು ಸಂತೋಷ ಇರುತ್ತದೆ. ಆದ್ದರಿಂದ, ಪ್ರತಿಯೊಬ್ಬರೂ ಲಕ್ಷ್ಮಿ ದೇವಿಯು ಯಾವಾಗಲೂ ತಮ್ಮ ಮನೆಯಲ್ಲಿ ನೆಲೆಸಬೇಕು, ಮನೆ ಮಂದಿ ಮೇಲೆ ಆಕೆಯ ಆಶೀರ್ವಾದ ಇರಬೇಕು ಎಂದು ಬಯಸುತ್ತಾರೆ. ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ವಾಸ್ತು ಶಾಸ್ತ್ರವು ಕೆಲವು ಕ್ರಮಗಳನ್ನು ತಿಳಿಸಿವೆ. ಅವುಗಳನ್ನು ನೀವು ಅನುಸರಿಸಿ.

25
ಶುಕ್ರವಾರ ಈ ಕೆಲಸಗಳನ್ನು ಮಾಡಿ

ವಾಸ್ತು ಶಾಸ್ತ್ರದ ಪ್ರಕಾರ, ಶುಕ್ರವಾರ ಸಂಜೆ ಮನೆಯ ಮುಖ್ಯ ದ್ವಾರದಲ್ಲಿ ತುಪ್ಪದ ದೀಪವನ್ನು ಹಚ್ಚುವುದರಿಂದ ಲಕ್ಷ್ಮಿ ದೇವಿ ತುಂಬಾನೆ ಸಂತೋಷಗೊಳ್ಳುತ್ತಾಳೆ, ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ. ಮುಖ್ಯ ದ್ವಾರದಲ್ಲಿ ದೀಪವನ್ನು ಹಚ್ಚುವುದರಿಂದ ಮನೆಯೊಳಗೆ ಸಕಾರಾತ್ಮಕತೆ ಯಾವಾಗಲೂ ನೆಲೆಸುತ್ತದೆ.

35
ದೀಪವನ್ನು ಯಾವ ದಿಕ್ಕಿನಲ್ಲಿ ಬೆಳಗಿಸಬೇಕು?

ಶುಕ್ರವಾರದಂದು ದೀಪವನ್ನು ಹಚ್ಚುವುದೇನೋ ಸರಿ. ಆದರೆ ನೀವು ಸರಿಯಾದ ದಿಕ್ಕಿನಲ್ಲಿ ಬೆಳಗಿದರೆ ಮಾತ್ರ ಪ್ರಯೋಜನ ಸಿಗುತ್ತದೆ ಎನ್ನುವುದು ನೆನಪಿರಲಿ. ವಾಸ್ತು ಪ್ರಕಾರ, ಮನೆಯ ಈಶಾನ್ಯ ದಿಕ್ಕು ಅಥವಾ ಈಶಾನ್ಯ ಮೂಲೆ ದೀಪ ಹಚ್ಚಲು ಅತ್ಯಂತ ಮಂಗಳಕರವಾದ ಜಾಗವಾಗಿದೆ. ಈ ದಿಕ್ಕಿನಲ್ಲಿ ದೀಪವನ್ನು ಬೆಳಗಿಸುವುದರಿಂದ ಮನೆಗೆ ಸಂತೋಷ ಮತ್ತು ಸಮೃದ್ಧಿ ಬರುತ್ತದೆ. ಅಷ್ಟೇ ಅಲ್ಲ ನಿಮ್ಮ ಎಲ್ಲಾ ಆರ್ಥಿಕ ಸಂಕಷ್ಟವನ್ನು ತಡೆಯುತ್ತದೆ.

45
ಲಕ್ಷ್ಮಿ ದೇವಿಯನ್ನು ಹೇಗೆ ಮೆಚ್ಚಿಸುವುದು?

ಶುಕ್ರವಾರ ಸಂಜೆ, ಲಕ್ಷ್ಮಿ ದೇವಿಯ ಮುಂದೆ ತುಪ್ಪದ ದೀಪವನ್ನು ಹಚ್ಚಿ ಕಮಲದ ಹೂವನ್ನು ಅರ್ಪಿಸಿ. ನಂತರ "ಓಂ ಶ್ರೀಂ ಮಹಾಲಕ್ಷ್ಮಿಯೈ ನಮಃ" ಎಂಬ ಮಂತ್ರವನ್ನು ಕನಿಷ್ಠ 108 ಬಾರಿ ಪಠಿಸಿ. ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತವೆ.

55
ಈ ವಿಷಯಗಳನ್ನು ನೆನಪಿನಲ್ಲಿಡಿ

ಶುಕ್ರವಾರ ಸಂಜೆ ನೀವು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಬಯಸಿದರೆ, ದೀಪದಲ್ಲಿ ಶುದ್ಧ ತುಪ್ಪ ಅಥವಾ ಎಳ್ಳೆಣ್ಣೆಯನ್ನು ಬಳಸುವುದನ್ನ ಮರಿಯಬೇಡಿ. ಒಮ್ಮೆ ಬೆಳಗಿದ ನಂತರ ದೀಪವನ್ನು ಆರಲು ಬಿಡಬೇಡಿ. ಶುಕ್ರವಾರ ಮನೆಯಲ್ಲಿ ಜಗಳಗಳು ಅಥವಾ ಘರ್ಷಣೆಗಳನ್ನು ತಪ್ಪಿಸಿ ಮತ್ತು ನಕಾರಾತ್ಮಕ ಸಂಭಾಷಣೆಗಳನ್ನು ತಪ್ಪಿಸಿ. ಯಾವ ಮನೆಯಲ್ಲಿ ಪಾಸಿಟಿವಿಟಿ ಹೆಚ್ಚಾಗಿರುತ್ತದೆಯೋ? ಪ್ರೀತಿ ತುಂಬಿರುತ್ತದೆಯೋ? ಅಲ್ಲಿ ಯಾವತ್ತೂ ಲಕ್ಷ್ಮೀ ವಾಸ ಮಾಡುತ್ತಾಳೆ.

Read more Photos on
click me!

Recommended Stories