ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗ್ಬೇಕು ಅಂದ್ರೆ ಬ್ರಹ್ಮ ಮುಹೂರ್ತದಲ್ಲಿ ಈ ಕೆಲಸ ಮಾಡಿ

First Published | Jul 28, 2024, 2:56 PM IST

ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಬೇಕಾ? ಹಾಗಿದ್ರೆ ಬೆಳಗ್ಗೆ ಎದ್ದು ಈ ಮೂರು ಕೆಲಸ ಮಾಡಿ. ಇದ್ರಿಂದ ನೀವು ಶೀಘ್ರದಲ್ಲೇ ಶ್ರೀಮಂತರಾಗ್ತೀರಿ. ಅದಕ್ಕಾಗಿ ನೀವು ಮಾಡಬೇಕಾಗಿರೋದು ಏನು ಅನ್ನೋದನ್ನ ನೋಡೋಣ. 
 

ಯಾವ ವ್ಯಕ್ತಿ ಬೆಳಗ್ಗೆ ಸಮಯಕ್ಕೆ ಸರಿಯಾಗಿ ಎದ್ದೇಳುತ್ತಾರೆ, ಅವರಿಗೆ ಜೀವನದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸಬೇಕಾಗಿ ಬರೋದಿಲ್ಲ. ಬೆಳಗ್ಗೆ ಎದ್ದು ಯಾವ ಕೆಲಸವನ್ನ ಮಾಡೊದ್ರಿಂದ ನಿಮಗೆ ಧನ ಲಾಭ ಆಗುತ್ತೆ ಅನ್ನೋದನ್ನ ತಿಳಿಯೋಣ. 

ಈ ಭೂಮಿ ಮೇಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಅದರಲ್ಲೂ ಮಿಡಲ್ ಕ್ಲಾಸ್ ಜನ ಹಣಕಾಸಿನ ಸಮಸ್ಯೆಯನ್ನ ತುಂಬಾನೆ ಎದುರಿಸುತ್ತಲೇ ಇರುತ್ತಾರೆ. ನೀವು ಸಹ ಹಣದ ಸಮಸ್ಯೆಯನ್ನು ಎದುರಿಸುತ್ತಿದ್ರೆ, ಬೆಳಗ್ಗೆ ಎದ್ದು ಈ ಶುಭ ಕಾರ್ಯವನ್ನ ಮಾಡಬೇಕು. ಇದ್ರಿಂದ ನಿಮ್ಮ ಹಣದ ಸಮಸ್ಯೆ (money problem) ನಿವಾರಣೆಯಾಗಿ, ನಿಮಗೆ ಧನ ಲಾಭ ಆಗುತ್ತೆ. 
 

Tap to resize

ಪ್ರತಿದಿನ ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ (bramha muhurta) ಎದ್ದೇಳೋದನ್ನ ಶುಭ ಎನ್ನಲಾಗುತ್ತೆ. ಇದ್ರಿಂದ ದೇಹಕ್ಕೆ ಸಕಾರಾತ್ಮಕ ಶಕ್ತಿ ಸಿಗುತ್ತೆ. ಇದರಿಂದಾಗಿ ದಿನವಿಡೀ ಆ ವ್ಯಕ್ತಿ ಎನರ್ಜಿಟಿಕ್ ಆಗಿರೋದಕ್ಕೆ ಸಾಧ್ಯವಾಗುತ್ತೆ. ಮಾನಸಿಕವಾಗಿಯೂ ನೆಮ್ಮದಿಯಿಂದ ಇರೋದಕ್ಕೆ ಸಾಧ್ಯವಾಗುತ್ತೆ. 
 

ಧ್ಯಾನ ಮಾಡಿ 
ಬೆಳಗ್ಗೆ ಎದ್ದ ಕೂಡಲೇ ಮೊಬೈಲ್ ನೊಡೋ ಅಭ್ಯಾಸ ಇಂದಿನ ಜನರಲ್ಲಿ ಹೆಚ್ಚಾಗಿದೆ. ಅದರ ಬದಲು ಬೆಳಗ್ಗೆ ಎದ್ದು ದೇವರ ಧ್ಯಾನ (meditation) ಮಾಡಿ. ಹೀಗೆ ಮಾಡೋದರಿಂದ ವ್ಯಕ್ತಿಯ ಜೀವನದಲ್ಲಿ ಸುಖ ಮತ್ತು ಸಮೃದ್ಧಿ ಸಿಗುತ್ತೆ, ಜೊತೆಗೆ ಸಫಲತೆ ಕೂಡ ಪ್ರಾಪ್ತಿಯಾಗುತ್ತೆ. 

ಆ ದಿನದ ಪ್ಲ್ಯಾನ್ ಮಾಡಿ
ಟು ಡು ಲಿಸ್ಟ್ (to do list) ಅನ್ನೋದನ್ನ ನೀವು ಕೇಳಿರಬಹುದು ಅಲ್ವಾ? ಬೆಳಗ್ಗೆ ಎದ್ದು ಧ್ಯಾನ ಮಾಡಿದ ಬಳಿಕ ನಿಮ್ಮ ಟು ಡು ಲಿಸ್ಟ್ ಅಂದ್ರೆ, ನಿಮ್ಮ ದಿನ ಹೇಗಿರಬೇಕು, ಯಾವ ಕೆಲಸ ಯಾವ ಸಮಯಕ್ಕೆ ಆಗಬೇಕು ಅನ್ನೋದನ್ನ ಪ್ಲ್ಯಾನ್ ಮಾಡಿ. ಇದರಿಂದ ನಿಮಗೆ ಸಫಲತೆ ಸಿಗುತ್ತೆ. ಕೆಲಸಗಳೆಲ್ಲವೂ ಸುಲಭವಾಗಿ ನಡೆಯುತ್ತೆ. 

ತುಪ್ಪದ ದೀಪ ಬೆಳಗಿ
ಪ್ರತಿದಿನ ಬೆಳಗ್ಗೆ ಸ್ನಾನ ಮಾಡಿದ ಬಳಿಕ ಪೂಜಾ ಗೃಹದಲ್ಲಿ ದೇವರ ಮುಂದೆ ದನದ ತುಪ್ಪದ ದೀಪ ಹಚ್ಚಿಡಿ. ಇದರಿಂದ ಮನೆಯಲ್ಲಿ ಪೂರ್ತಿಯಾಗಿ ಸಕಾರಾತ್ಮಕ ಶಕ್ತಿ (positive energy) ತುಂಬುತ್ತದೆ. 

ಆರ್ಥಿಕ ಸ್ಥಿತಿ ಉತ್ತಮವಾಗುತ್ತೆ
ಪ್ರತಿದಿನ ಬೆಳಗ್ಗೆ ಈ ಕೆಲಸಗಳನ್ನ ತಪ್ಪದೇ ಮಾಡೊದ್ರಿಂದ ನಿಮ್ಮ ಆರ್ಥಿಕ ಸ್ಥಿತಿ (financial consition) ಉತ್ತಮವಾಗುತ್ತೆ. ವ್ಯಾಪಾರ ವ್ಯವಹಾರದಲ್ಲಿ ಧನಲಾಭವಾಗುತ್ತೆ. ನಿಮ್ಮ ಜೀವನದಲ್ಲಿ ಅಭಿವೃದ್ಧಿ ಉಂಟಾಗಿ, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತೆ. 

ಕೆಲಸದಲ್ಲಿ ಸಕ್ಸಸ್
ನಿಮಗೆ ತುಂಬಾ ಸಮಯದಿಂದ ಜೀವನದಲ್ಲಿ ಸಫಲತೆ ಸಿಗುತ್ತಲೇ ಇಲ್ಲ ಅಂದ್ರೆ, ಪ್ರತಿದಿನ ಬೆಳಗ್ಗೆ ಈ ಕೆಲಸ ಮಾಡಿ. ಇದರಿಂದ ನಿಮ್ಮ ಎಲ್ಲಾ ಸಮಸ್ಯೆ ನಿವಾರಣೆಯಾಗುತ್ತೆ, ಕೆಲಸದಲ್ಲಿ ಸಕ್ಸಸ್ ಸಿಗುತ್ತೆ. ಜೊತೆಗೆ ಮನಸ್ಸಿಗೆ ಶಾಂತಿಯೂ ಸಿಗುತ್ತೆ. 
 

Latest Videos

click me!