ಯಾವುದೇ ಅಡೆತಡೆ ಇಲ್ಲದೇ ಮದುವೆ ಆಗಬೇಕು ಅಂದ್ರೆ ಶುಕ್ರವಾರ ಹೀಗ್ ಮಾಡಿ!

First Published | Apr 7, 2023, 4:44 PM IST

ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಗೆ ಶುಕ್ರವಾರವನ್ನು ಅರ್ಪಿಸಲಾಗಿದೆ. ಈ ದಿನ ಆದಿಶಕ್ತಿಯ ರೂಪವಾದ ಲಕ್ಷ್ಮಿ ದೇವಿಯನ್ನು ಪೂಜಿಸೋದು ವ್ಯಕ್ತಿಯ ಮನೆಯಲ್ಲಿ ಸಂಪತ್ತು, ಸಂತೋಷ ಮತ್ತು ಖ್ಯಾತಿಯನ್ನು ತರುತ್ತೆ. ಹಾಗೆಯೇ, ಶುಕ್ರವಾರ ಶುಕ್ರ ಗ್ರಹವನ್ನು ಬಲಪಡಿಸುವ ನಿಯಮವೂ ಇದೆ.

ಜ್ಯೋತಿಷಿಗಳ ಪ್ರಕಾರ, ಶುಕ್ರನು ಸಂತೋಷ, ಸಂಪತ್ತು ಮತ್ತು ಮದುವೆಯ (Marriage) ಅಂಶವಾಗಿದೆ. ಬಲವಾದ ಶುಕ್ರನಿಂದಾಗಿ, ಹುಡುಗರು ಬೇಗ  ಮದುವೆ ಆಗುತ್ತಾರೆ. ಅದೇ ಸಮಯದಲ್ಲಿ, ಶುಕ್ರನ ದೌರ್ಬಲ್ಯದಿಂದಾಗಿ, ಮದುವೆಗೆ ಅಡ್ಡಿಯಾಗುತ್ತೆ. ಹಣಕಾಸಿನ ತೊಂದರೆಗಳು ಸಹ ಆಗುತ್ತವೆ. 

ನಿಮಗೆ ಬಂದೊದಗುವಂತಹ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಶುಕ್ರನು ಬಲಶಾಲಿಯಾಗಿರಬೇಕು. ಶುಕ್ರನನ್ನು ಬಲಪಡಿಸಲು ಶಿವನನ್ನು(Lord Shiva) ಪೂಜಿಸೋದು ಸೂಕ್ತ. ನಿಮ್ಮ ಮದುವೆಗೆ ಅಡ್ಡಿಯಾಗಿದ್ದರೆ, ಶುಕ್ರವಾರ ಈ ಕ್ರಮಗಳನ್ನು ಮಾಡಿ. ಇದರಿಂದ ಮದುವೆ ಕೆಲಸಗಳು ಸುಲಭವಾಗಿ ನೆರವೇರುತ್ತವೆ

Tap to resize

ಶುಕ್ರನನ್ನು ಬಲಪಡಿಸಲು, ಶುಕ್ರವಾರ ಬಿಳಿ ಬಟ್ಟೆಗಳನ್ನು ಧರಿಸಿ. ಹಾಗೆಯೇ, ಕಪ್ಪು ಎಳ್ಳು, ಬಿಳಿ ಹೂವುಗಳು ಮತ್ತು ಗಂಗಾ ನೀರನ್ನು ನೀರಿನಲ್ಲಿ ಬೆರೆಸಿ ಶಿವಲಿಂಗಕ್ಕೆ(Shivling) ಅರ್ಘ್ಯವನ್ನು ಅರ್ಪಿಸಿ. ಇದರ ನಂತರ, ಹಸಿ ಹಾಲಿನಿಂದ ಶಿವನಿಗೆ ಅಭಿಷೇಕ ಮಾಡಿ. ಕೊನೆಯಲ್ಲಿ, ಶಿವನಿಗೆ ಆರತಿ ಅರ್ಪಿಸಿ ಮತ್ತು ಶೀಘ್ರ ವಿವಾಹಕ್ಕಾಗಿ ಪ್ರಾರ್ಥಿಸಿ.
 

ಶುಕ್ರನ ಕಾರಣದಿಂದಾಗಿ ಮದುವೆಗೆ ಅಡ್ಡಿಯಾಗುತ್ತಿದ್ದರೆ, ಶುಕ್ರವಾರ, ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿ ಲಕ್ಷ್ಮಿ ದೇವಿಯ(Goddess Lakshmi) ದೇವಾಲಯಕ್ಕೆ ಹೋಗಿ ದೇವರಿಗೆ ಶೃಂಗಾರದ ವಸ್ತುಗಳನ್ನು ಅರ್ಪಿಸಿ. ಇದು ಲಕ್ಷ್ಮಿ ದೇವಿಯನ್ನು ಸಂತೋಷಪಡಿಸುತ್ತೆ ಮತ್ತು ಅವಳ ಕೃಪೆಯಿಂದ ಶೀಘ್ರದಲ್ಲೇ ಮದುವೆಯಾಗುತ್ತೆ. ಈ ಕ್ರಮಗಳನ್ನು ಕನಿಷ್ಠ 16 ಶುಕ್ರವಾರ ಮಾಡಿ.

ಶುಕ್ರನನ್ನು ಬಲಪಡಿಸಲು, ಪೂಜೆಯ ಸಮಯದಲ್ಲಿ 'ಓಂ ದ್ರೋಣ್ ಸಾಹ್ ಶುಕ್ರಾಯ ನಮಃ" ಮಂತ್ರವನ್ನು ಪಠಿಸಿ. ನೀವು ಯಾವುದೇ ಶುಕ್ರವಾರ(Friday) ಉಪವಾಸ ಮಾಡಬಹುದು. ಈ ದಿನ ಲಕ್ಷ್ಮಿ ವೈಭವ ವ್ರತವನ್ನು ಸಹ ಆಚರಿಸಿ.

ಶುಕ್ರನನ್ನು ಬಲಪಡಿಸಲು, ಶುಕ್ರವಾರ ಏಲಕ್ಕಿಯನ್ನು(Cardamom) ನೀರಿನಲ್ಲಿ ಬೆರೆಸಿ ಸ್ನಾನ ಮಾಡಿ. ಈ ಪರಿಹಾರವನ್ನು ಮಾಡೋದರಿಂದ, ಶುಕ್ರನು ಬಲಶಾಲಿಯಾಗುತ್ತಾನೆ. ಸಾಧ್ಯವಾದರೆ, ಶುಕ್ರವಾರ ಸಂಜೆ ಅವಿವಾಹಿತ ಹುಡುಗಿಯರಿಗೆ ಶೃಂಗಾರ ವಸ್ತುಗಳನ್ನು ನೀಡಿ. ಈ ಪರಿಹಾರವನ್ನು ಮಾಡುವ ಮೂಲಕ ಶುಕ್ರನನ್ನು ಬಲಪಡಿಸಬಹುದು.

Latest Videos

click me!