ಒಂದೊಂದು ಕನಸಿಗೂ(Dreams) ಒಂದೊಂದು ಅರ್ಥ ಇದೆ ಅನ್ನೋದು ನಿಮಗೆ ಗೊತ್ತು? ಆದರೆ ಯಾವ ಕನಸು ನಿಮಗೆ ಜೀವನದಲ್ಲಿ ಮುಂದೆ ಏನಾಗುತ್ತೆ ಅನ್ನೋದನ್ನು ಸೂಚಿಸುತ್ತೆ ಅನ್ನೋದು ನಿಮಗೆ ತಿಳಿದಿದ್ಯಾ? ಇಲ್ಲಾ ಅನ್ನೋದಾದ್ರೆ ಇಲ್ಲಿದೆ ನೋಡಿ ಕನಸುಗಳ ಅರ್ಥ.
ಶೂಗಳ ಕಳ್ಳತನ(Shoe robbery) ಆಗೋದು
ನಿಮ್ಮ ಕನಸಿನಲ್ಲಿ ಶೂಗಳು ಕಳ್ಳತನವಾಗುತ್ತಿರೋದನ್ನು ನೀವು ನೋಡಿದರೆ, ಜಾಗರೂಕರಾಗಿರಿ. ಈ ಕನಸು ರೋಗದ ಪ್ರತೀಕವಿದು. ಈ ಕನಸು ಬಂದ್ರೆ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ.
ನಾಯಿ ಕಡಿತದ(Dog bite) ಕನಸು
ಕನಸಿನಲ್ಲಿ ನಾಯಿ ಕಚ್ಚಿದರೆ, ಅದು ಅಶುಭ ಕನಸು. ನಾಯಿ ಕಚ್ಚಿದರೆ ಮತ್ತು ಮಾಂಸ ಕಾಣಿಸುತ್ತಿದ್ದರೆ ಶತ್ರುಗಳಿಂದ ಹಾನಿಗೊಳಗಾಗುತ್ತೀರಿ ಎಂದರ್ಥ.
ಪೊರಕೆಯನ್ನು(Broom) ನೋಡೋದು
ಕನಸಿನಲ್ಲಿ ಪೊರಕೆಯನ್ನು ನೋಡೋದು ತುಂಬಾ ಅಶುಭವೆಂದು ಪರಿಗಣಿಸಲಾಗುತ್ತೆ. ಕನಸಿನ ವಿಜ್ಞಾನದ ಪ್ರಕಾರ, ನೀವು ಕೆಲವು ಕೆಟ್ಟ ಸುದ್ದಿಗಳನ್ನು ಪಡೆಯಲಿದ್ದೀರಿ ಎಂದರ್ಥ.
ಗುಲಾಬಿ(Rose) ಹೂವನ್ನು ನೋಡುವುದು
ಒಬ್ಬ ವ್ಯಕ್ತಿ ಕನಸಿನಲ್ಲಿ ಗುಲಾಬಿ ಹೂವು ಅರಳೋದನ್ನು ನೋಡಿದರೆ ಅಥವಾ ನೀವು ಗುಲಾಬಿ ಹೂವನ್ನು ತಿನ್ನುವುದು ಕಂಡು ಬಂದರೆ, ಭವಿಷ್ಯದಲ್ಲಿ ನೀವು ಗಂಭೀರ ಕಾಯಿಲೆಗೆ ಗುರಿಯಾಗಬಹುದು.
ಧಾನ್ಯಗಳಿಗೆ ಮಣ್ಣನ್ನು(Mud) ಸೇರಿಸೋದು
ಕನಸಿನಲ್ಲಿ ನೀವು ಧಾನ್ಯಗಳೊಂದಿಗೆ ಬೆರೆತ ಮಣ್ಣನ್ನು ನೋಡುತ್ತಿದ್ದರೆ, ಜೀವನದಲ್ಲಿ ಬಿಕ್ಕಟ್ಟು ಉಂಟಾಗಲಿದೆ ಎಂದು ತಿಳಿದುಕೊಳ್ಳಿ.ಹಾಗಾಗಿ ಹುಷಾರಾಗಿರಿ.
ನೀವು ಮುಳ್ಳಿನ(Throne) ಮರದಲ್ಲಿ ಮಲಗುವ ಕನಸನ್ನು ನೋಡುತ್ತಿದ್ದರೆ
ಕನಸಿನಲ್ಲಿ ಮುಳ್ಳಿನ ಮರದಲ್ಲಿ ಮಲಗೋದನ್ನು ನೀವು ನೋಡಿದರೆ, ವ್ಯಕ್ತಿ ಅನೇಕ ರೀತಿಯ ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಾನೆ ಎಂದರ್ಥ ಮಾಡಿಕೊಳ್ಳಿ.
ನಗೋದನ್ನು(Laugh) ನೋಡುವುದು
ಕನಸಿನಲ್ಲಿ ನೀವು ತುಂಬಾ ನಗೋದನ್ನು ನೋಡಿದರೆ, ನೀವು ದೊಡ್ಡ ದುಃಖವನ್ನು ಎದುರಿಸಬೇಕಾಗುತ್ತೆ ಎಂದರ್ಥ. ನಿಮಗೂ ಇಂತಹ ಕನಸುಗಳು ಕಂಡರೆ, ಜಾಗರೂಕರಾಗಿರಿ.