ಮನೆಯಲ್ಲಿ ಹಾಗಲಕಾಯಿ ಗಿಡ ನೆಡೋದು ಅಶುಭ ಫಲ ನೀಡುತ್ತಂತೆ !

First Published | Feb 27, 2024, 4:35 PM IST

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಮರಗಳು ಮತ್ತು ಸಸ್ಯಗಳನ್ನು ನೆಡುವುದು ತುಂಬಾ ಮುಖ್ಯ ಎಂದು ಹೇಳಲಾಗಿದೆ. ಇದು ಒಬ್ಬ ವ್ಯಕ್ತಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಆದರೆ ಹಾಗಲಕಾಯಿಯ ಗಿಡವನ್ನು ಮನೆಯಲ್ಲಿ ನೆಡೋದು ಸೂಕ್ತವೇ? 
 

ಜ್ಯೋತಿಷ್ಯದಲ್ಲಿ, ಮರ ಮತ್ತು ಸಸ್ಯಗಳ ಬಗ್ಗೆ ವಿಶೇಷವಾಗಿ ಉಲ್ಲೇಖಿಸಲಾಗಿದೆ. ಅವುಗಳನ್ನು ಸರಿಯಾಗಿ ಪೂಜಿಸುವ ಮೂಲಕ, ವ್ಯಕ್ತಿಯ ಎಲ್ಲಾ ಸಮಸ್ಯೆಗಳನ್ನು ನಿವಾರಿಸಬಹುದು ಮತ್ತು ಗ್ರಹಗಳ ದೋಷಗಳನ್ನು ಸಹ ತೊಡೆದುಹಾಕಬಹುದು ಎಂದು ಹೇಳಲಾಗುತ್ತದೆ.  

ಅನೇಕ ಜನರು ಮನೆಯಲ್ಲಿ ಅನೇಕ ರೀತಿಯ ಮರಗಳು ಮತ್ತು ಸಸ್ಯಗಳನ್ನು ನೆಡುತ್ತಾರೆ, ಅವುಗಳನ್ನು ಒಂದೊಂದು ಸಸ್ಯಗಳು ಶುಭಫಲ ನೀಡಿದ್ರೆ, ಕೆಲವು ಅಶುಭ ಫಲ ನೀಡುತ್ತದೆ. ಕೆಲವು ಗಿಡಗಳನ್ನು ತಿಳಿಯದೆ ನೆಟ್ಟರೆ, ಅದು ವ್ಯಕ್ತಿಗೆ ಅಶುಭ ಫಲಿತಾಂಶಗಳನ್ನು ನೀಡುತ್ತದೆ. ಈಗ ಪ್ರಶ್ನೆಯೆಂದರೆ ನೀವು ಮನೆಯಲ್ಲಿ ಹಾಗಲಕಾಯಿ ಗಿಡವನ್ನು (Bitter Gourd) ನೆಡಬಹುದೇ ಅಥವಾ ಇಲ್ಲವೇ? 

Tap to resize

ಮನೆಯಲ್ಲಿ ಹಾಗಲಕಾಯಿ ಗಿಡ ನೆಡಬೇಡಿ 
ಹಾಗಲಕಾಯಿ ಒಂದು ಕಹಿ ರುಚಿಯ (Bitter taste) ತರಕಾರಿ ಮತ್ತು ಹಾಗಾಗಿ ಅದರಿಂದ ಹೊರಹೊಮ್ಮುವ ಶಕ್ತಿಯೂ ನಕಾರಾತ್ಮಕವಾಗಿರುತ್ತದೆ. ಆದ್ದರಿಂದ, ವಾಸ್ತು ಶಾಸ್ತ್ರದ ಪ್ರಕಾರ, ಹಾಗಲಕಾಯಿ ಗಿಡವನ್ನು ಮನೆ ಒಳಗಡೆ ನೆಡಬಾರದು. ಈ ಸಸ್ಯವನ್ನು ನೆಡುವುದರಿಂದ ವಾಸ್ತು ದೋಷಗಳು ಉಂಟಾಗಬಹುದು ಮತ್ತು ವ್ಯಕ್ತಿಯು ಅಶುಭ ಫಲಿತಾಂಶಗಳನ್ನು ಸಹ ಪಡೆಯಬಹುದು. 

ಮನೆ ಹೊರಗೆ ಹಾಗಲಕಾಯಿ ಗಿಡ ನೆಡಬಹುದು  
ಹಾಗಲಕಾಯಿ ಗಿಡವನ್ನು ಮನೆಯ ಹೊರಗೆ ನೆಡಬಹುದು, ಆದರೆ ಈ ಸಸ್ಯವನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ (south corner) ನೆಡಬಾರದು ಎಂಬುದನ್ನು ನೆನಪಿನಲ್ಲಿಡಿ. ದಕ್ಷಿಣ ದಿಕ್ಕಿನಲ್ಲಿ ಹಾಗಲಕಾಯಿ ಗಿಡ ನೆಟ್ಟರೆ, ಮನೆಯಲ್ಲಿನ ಕುಟುಂಬ ಸದಸ್ಯರು ಎಂದಿಗೂ ಸಂತೋಷವಾಗಿರುವುದಿಲ್ಲ ಮತ್ತು ಮನೆಯಲ್ಲಿ ಯಾವಾಗಲೂ ಭಿನ್ನಾಭಿಪ್ರಾಯವಿರುತ್ತದೆ. ಆದ್ದರಿಂದ ಈ ಬಗ್ಗೆ ವಿಶೇಷ ಕಾಳಜಿ ವಹಿಸಿ. 

ಹಾಗಲಕಾಯಿ ಗಿಡ ಆರ್ಥಿಕ ಪರಿಸ್ಥಿತಿಯನ್ನು ದುರ್ಬಲಗೊಳಿಸುತ್ತದೆ 
ಮನೆಯಲ್ಲಿ ಹಾಗಲಕಾಯಿ ಗಿಡವನ್ನು ನೆಡುವುದು ಆರ್ಥಿಕ ಪರಿಸ್ಥಿತಿಯ (economical situation) ಮೇಲೆ ಪರಿಣಾಮ ಬೀರುತ್ತದೆ ಮತ್ತು ವ್ಯಕ್ತಿಯು ಸಾಲಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ. ಆದ್ದರಿಂದ, ಹಾಗಲಕಾಯಿ ಗಿಡವನ್ನು ಮನೆಯಲ್ಲಿ ಎಂದಿಗೂ ನೆಡಬಾರದು.

ತಾಯಿ ಲಕ್ಷ್ಮಿ ಕೋಪಗೊಳ್ಳಬಹುದು  
ಮನೆಯಲ್ಲಿ ಹಾಗಲಕಾಯಿ ಗಿಡವನ್ನು ನೆಡುವುದರಿಂದ ಮಾತಾ ಲಕ್ಷ್ಮಿ (Goddess Lakshmi) ಕೋಪಗೊಳ್ಳಬಹುದು ಮತ್ತು ವ್ಯಕ್ತಿಯ ಜೀವನದಲ್ಲಿ ಹಣ ಎಂದಿಗೂ ಉಳಿಯುವುದಿಲ್ಲ ಮತ್ತು ಖರ್ಚುಗಳು ಹೆಚ್ಚಾಗಲು ಪ್ರಾರಂಭಿಸುತ್ತವೆ. ಆದ್ದರಿಂದ, ಮನೆಯಲ್ಲಿ ಹಾಗಲಕಾಯಿ ಗಿಡವನ್ನು ಎಂದಿಗೂ ನೆಡದಂತೆ ವಿಶೇಷ ಕಾಳಜಿ ವಹಿಸಿ. 
 

ಹಾಗಲಕಾಯಿ ಸಸ್ಯವು ಅಶುಭ ಫಲವನ್ನು ನೀಡಬಹುದು
ಮನೆಯಲ್ಲಿ ಹಾಗಲಕಾಯಿ ಗಿಡವನ್ನು ನೆಡುವುದರಿಂದ ವ್ಯಕ್ತಿಯು ಅಶುಭ (bad luck) ಫಲಿತಾಂಶಗಳನ್ನು ಪಡೆಯಬಹುದು. ಇದು ಮಾತ್ರವಲ್ಲ, ಇದು ವ್ಯಕ್ತಿಯ ಗೌರವದ ಮೇಲೆ ಪರಿಣಾಮ ಬೀರಬಹುದು. 
 

Latest Videos

click me!