Good Luck : ಹೊಸ ವರ್ಷದಂದು ಈ ವಸ್ತುಗಳನ್ನು ಮನೆಗೆ ತಂದರೆ ಸದಾ ಸಂತೋಷ

First Published Dec 10, 2021, 4:45 PM IST

2021 ರ ವರ್ಷವು ಕೊನೆಯಲ್ಲಿದೆ. ಈ ವರ್ಷದ ಮಧ್ಯಭಾಗದಲ್ಲಿ, ಪ್ರತಿಯೊಬ್ಬರೂ ಕೊರೊನಾ ವೈರಸ್ ನ  (corona virus) ಭಯಾನಕ ರೂಪವನ್ನು ನೋಡಿದ್ದೇವೆ, ಮುಂದಿನ ವರ್ಷ ಉತ್ತಮ ವರ್ಷ ಎಂಬ ಭರವಸೆ ಇದೆ. ಸಾಮಾನ್ಯವಾಗಿ ಎಲ್ಲರೂ ಹೊಸ ವರ್ಷದ ಆರಂಭದಲ್ಲಿ ವರ್ಷದ ಒಳ್ಳೆಯ  ಸಮಯಕ್ಕಾಗಿ ಬಯಸುತ್ತಾರೆ.  ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಬೇಕೆಂದು ನೀವು ಬಯಸಿದರೆ, ಹೊಸ ವರ್ಷದ ದಿನದಂದು ನೀವು ಮನೆಗೆ ತರಬೇಕಾದ ಕೆಲವು ವಿಷಯಗಳ ಬಗ್ಗೆ ಇಲ್ಲಿದೆ .
 

ನವಿಲು ಗರಿ (peacock feather)
ಶ್ರೀಕೃಷ್ಣನ ಹಣೆಯನ್ನು ಅಲಂಕರಿಸುವ ನವಿಲು ಗರಿಗಳನ್ನು ಅತ್ಯಂತ ಪವಾಡ ಸದೃಶವೆಂದು ಪರಿಗಣಿಸಲಾಗುತ್ತದೆ. ನವಿಲು ಗರಿಗಳು ಅದೃಷ್ಟವನ್ನು ಸುಧಾರಿಸುತ್ತವೆ ಎಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ಸಂತೋಷ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. 

ಒಂದರಿಂದ ಮೂರು ನವಿಲು ಗರಿಗಳನ್ನು ಮನೆಯಲ್ಲಿ ಇರಿಸಿ, ಇದು ಅದೃಷ್ಟವನ್ನು ಬಲಪಡಿಸುತ್ತದೆ ಮತ್ತು ಜೀವನಕ್ಕೆ ಇರುವ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕುತ್ತದೆ. ಇದು  ಜೀವನದಲ್ಲಿ ನೀವು ಮಾಡುವ ಯಾವುದೇ ಕೆಲಸದಲ್ಲಿ ಅದೃಷ್ಟಕ್ಕೆ ಸಹಾಯ ಮಾಡುತ್ತದೆ.

ಕಮಲದ ಬೀಜದ  ಮಾಲೆ (lotus seeds mala)
ಹಣ ಪಡೆಯಬೇಕಾದರೆ  ಮನೆಯಲ್ಲಿ ಕಮಲದ ಬೀಜದ  ಮಾಲೆಯನ್ನು ಇಟ್ಟುಕೊಳ್ಳಲು ಮರೆಯದಿರಿ. ಕಮಲಗಟ್ಟೆ ಲಕ್ಷ್ಮಿಗೆ ಪ್ರಿಯ.  ಅದನ್ನು ನಿಮ್ಮ ಪೂಜಾ ಮನೆಯಲ್ಲಿ ಇಡಬಹುದು. ಹೀಗೆ ಮಾಡಿದರೆ ಅದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು  ನಿವಾರಣೆಯಾಗುತ್ತದೆ ಮತ್ತು ಹಣಕ್ಕೆ ದಾರಿ ಮಾಡಿಕೊಡುತ್ತದೆ.


ಲೋಹದ ಆಮೆ
 ಮನೆಗೆ ಜೇಡಿಮಣ್ಣು ಅಥವಾ ಲೋಹದ ಆಮೆಯನ್ನು ತಂದರೆ ಇದು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಶಾಂತಿಯನ್ನು ಕಂಡುಕೊಳ್ಳಲು ಬೆಳ್ಳಿ, ಹಿತ್ತಾಳೆ ಅಥವಾ ಕಂಚಿನ ಆಮೆಯನ್ನು ಮನೆಗೆ ತರಬಹುದು, ಆದರೆ  ಈ ಆಮೆಯನ್ನು ಉತ್ತರ ದಿಕ್ಕಿನಲ್ಲಿ ಇಡುವುದನ್ನು ಖಚಿತಪಡಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಕುಟುಂಬದಲ್ಲಿ ಸಂತೋಷವನ್ನು ಕಾಪಾಡಿಕೊಳ್ಳುತ್ತಾರೆ ಮತ್ತು ಅದೃಷ್ಟವನ್ನು ಬೆಂಬಲಿಸುತ್ತಾರೆ.


ಪಿರಮಿಡ್ (Pyramid)
ಪಿರಮಿಡ್ ಆಕಾರವನ್ನು ಮನೆಯಲ್ಲಿ ಇಟ್ಟರೆ ಅದು ಮನೆಯ ವಾತಾವರಣವನ್ನು ಧನಾತ್ಮಕವಾಗಿಸುತ್ತದೆ ಎಂದು ಶಾಸ್ತ್ರಗಳು ನಂಬುತ್ತವೆ. ಮನೆಯ ನಕಾರಾತ್ಮಕ ಶಕ್ತಿಗಳು ದೂರಾಗುತ್ತವೆ. ಮನೆಯಲ್ಲಿ ವಾತಾವರಣ ಸಕಾರಾತ್ಮಕವಾಗಿ ಉಳಿದರೆ ಕುಟುಂಬ ಸದಸ್ಯರ ನಡುವಿನ ಸಾಮರಸ್ಯ ಉತ್ತಮವಾಗಿರುತ್ತದೆ. ಅಷ್ಟೇ ಅಲ್ಲ, ಮನೆಯಲ್ಲಿನ ಜನರು ತಮ್ಮ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸುತ್ತಾರೆ.

ಬೆಳ್ಳಿ ಆನೆ (silver elephant) 
ಶಾಸ್ತ್ರದ ಪ್ರಕಾರ ಮನೆಯಲ್ಲಿ ಬೆಳ್ಳಿಯ ಆನೆಯನ್ನು ಇಟ್ಟುಕೊಳ್ಳುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ, ಇದು ಮನೆಯಲ್ಲಿ ಶಾಂತಿ ಮತ್ತು ಸಂತೋಷವನ್ನು ತರುವುದಲ್ಲದೆ ಕೆಲಸವನ್ನು ಉತ್ತೇಜಿಸುತ್ತದೆ. ನೀವು ನಿಮ್ಮ ಮನೆಗೆ ಘನ ಬೆಳ್ಳಿಯ ಆನೆಯನ್ನು ತನ್ನಿ. ಅದರಿಂದ ಲಾಭವಾಗುತ್ತದೆ ಎಂದು ನಂಬಲಾಗಿದೆ.

ಮುತ್ತಿನ ಶಂಖ
ಮನೆಗೆ ಮುತ್ತಿನ ಶಂಖಗಳನ್ನು ತಂದು ವಿಧಿ ವಿಧಾನದ ಪ್ರಕಾರ ಸುರಕ್ಷಿತ ಅಥವಾ ಹಣದ ಸ್ಥಾನದಲ್ಲಿ ಇರಿಸಿದರೆ, ಅದು ಸಂಪತ್ತನ್ನು ನೀಡುತ್ತದೆ. ಜೊತೆಗೆ ಮನೆಯಲ್ಲಿ ಆರ್ಥಿಕ ಸಮೃದ್ಧಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಆದುದರಿಂದ ಮುಂದಿನ ವರ್ಷದ ಆರಂಭದಲ್ಲಿ ಮನೆಗೆ ಈ ವಸ್ತುಗಳನ್ನು ತಂದಿಡಿ. 

click me!