ಮದುವೆಯಲ್ಲಿ ವಿಳಂಬ ಅಥವಾ ಅಡಚಣೆಗಳ ಹಿಂದೆ ಅನೇಕ ಕಾರಣಗಳಿವೆ, ಇದಕ್ಕೆ ವಾಸ್ತು ದೋಷಗಳು (Vaastu dosha) ಸಹ ಕಾರಣವಿರಬಹುದು. ಇದನ್ನು ನಿವಾರಿಸಲು ವಾಸ್ತು ವಿಶೇಷ ಕ್ರಮಗಳನ್ನು ಹೊಂದಿದೆ. ಈ ವಾಸ್ತು ಶಾಸ್ತ್ರದ ಪರಿಹಾರಗಳು ದಾಂಪತ್ಯದ ಅನೇಕ ಅಡೆತಡೆಗಳನ್ನು ನಿವಾರಿಸಿ ವೈವಾಹಿಕ ಜೀವನವನ್ನು ಸಂತೋಷವಾಗಿಸುತ್ತದೆ.
ಶೀಘ್ರ ವಿವಾಹಕ್ಕೆ ವಾಸ್ತು ಪರಿಹಾರಗಳು
- ಯಾರಾದರೂ ಮದುವೆ ಪ್ರಸ್ತಾಪದೊಂದಿಗೆ (Wedding Proposal) ನಿಮ್ಮ ಮನೆಗೆ ಬಂದರೆ, ಅವರನ್ನು ಮನೆಯ ಮುಖ್ಯ ಬಾಗಿಲು ಗೋಚರಿಸದ ಸ್ಥಳದಲ್ಲಿ ಕುಳಿತುಕೊಳ್ಳುವಂತೆ ಮಾಡಿ. ಅಂದರೆ, ಅವರನ್ನು ಮನೆಯ ಬಾಯಿಯ ಕಡೆಗೆ ಕುಳಿತುಕೊಳ್ಳುವಂತೆ ಮಾಡಿ.
- ನೀವು ಮಲಗುವ ಹಾಸಿಗೆಯ ಕೆಳಗೆ ತ್ಯಾಜ್ಯ ಅಥವಾ ಯಾವುದೇ ಕಬ್ಬಿಣದ ವಸ್ತುಗಳನ್ನು ಇಡಬೇಡಿ. ವಾಸ್ತು ಪ್ರಕಾರ ಇದು ಮದುವೆಗೆ ಅಡ್ಡಿ ಪಡಿಸುತ್ತಾರೆ. ಇಂತಹ ಸಾಮಗ್ರಿಗಳಿಂದ ಮದುವೆ ಮೇಲೆ ಪರಿಣಾಮ ಬೀರುತ್ತದೆ.
-ಕೆಲವೊಮ್ಮೆ ಮಂಗಳ ದೋಷಗಳು ದಾಂಪತ್ಯದಲ್ಲಿ ತೊಂದರೆಯನ್ನೂ ಉಂಟು ಮಾಡುತ್ತವೆ. ಈ ದೋಷವನ್ನು ನಿವಾರಿಸಲು, ಕೋಣೆಯ ಮುಖ್ಯ ದ್ವಾರವನ್ನು (main door) ಗುಲಾಬಿ ಅಥವಾ ತಿಳಿ ಕೆಂಪು ಬಣ್ಣದಲ್ಲಿ ಚಿತ್ರಿಸಿ. ಇದರಿಂದ ದೋಷಗಳು ನಿವಾರಣೆಯಾಗಿ ಬೇಗ ಮದುವೆಯಾಗುವುದಲ್ಲದೆ, ದಾಂಪತ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ.
ನಿಮ್ಮ ಕೋಣೆಯಲ್ಲಿ ಯಾವುದೇ ಖಾಲಿ ಪಾತ್ರೆಗಳು ಅಥವಾ ಟ್ಯಾಂಕ್‌ಗಳನ್ನು ಇಡಬೇಡಿ. ಈಗಾಗಲೇ ಇದ್ದರೆ ಅದನ್ನು ತಕ್ಷಣ ಹೊರಗೆ ಹಾಕಿ. ಕೋಣೆಯಿಂದ ಹೆಚ್ಚು ಭಾರವಾದ ವಸ್ತುಗಳನ್ನು ಜೊತೆಗೆ ವೇಸ್ಟ್ ಆಗಿರುವ ವಸ್ತುಗಳನ್ನು ತೆಗೆಯಿರಿ. ಹಳೆಯ ಸಾಮಾನುಗಳನ್ನು ಕೊನೆಯಲ್ಲಿ ಇಡಲೇಬೇಡಿ.
ಮನೆಯ ಮುಖ್ಯ ದ್ವಾರಕ್ಕೆ ಸಂಬಂಧಿಸಿದ ಯಾವುದೇ ವಾಸ್ತು ಶಿಲ್ಪ ದೋಷವಿದ್ದರೆ, ಮದುವೆಯ ಮಾತುಕತೆಯನ್ನು ಅಂತಿಮಗೊಳಿಸಲು ಒಬ್ಬರು ಮತ್ತೊಂದು ಸ್ಥಳವನ್ನು ಆಯ್ಕೆ ಮಾಡಬೇಕು. ಇಲ್ಲವೇ ವಾಸ್ತು ದೋಷವನ್ನು ತಜ್ಞರ ಸಲಹೆಯಂತೆ ಬದಲಾಯಿಸಬೇಕು. ಇದರಿಂದ ಶೀಘ್ರ ವಿವಾಹವಾಗುತ್ತದೆ.
ಮದುವೆ ದೋಷ ಪರಿಹಾರಕ್ಕೆ ಇನ್ನಿತರ ಕ್ರಮಗಳು
ಸೋಮವಾರ 1.25 ಕೆಜಿ ಕಡಲೆ ಬೇಳೆ ಮತ್ತು 1.25 ಲೀಟರ್ ಹಸುವಿನ ಹಸಿ ಹಾಲನ್ನು (raw milk of cow) ದಾನ ಮಾಡಿ. ಇದರಿಂದ ಮದುವೆ ವಿಳಂಬದ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ವಾಸ್ತುವಿನಲ್ಲಿ ನಂಬಲಾಗಿದೆ.
ಶನಿ ದೋಷದಿಂದಾಗಿ ವಿವಾಹವು ವಿಳಂಬಗೊಳ್ಳುತ್ತಿದ್ದರೆ, ಸಾಸಿವೆ ಎಣ್ಣೆಯಲ್ಲಿ ನಿಮ್ಮ ನೆರಳನ್ನು ನೋಡಿ. ಶನಿವಾರ ಅದನ್ನು ದಾನ ಮಾಡಿ. ಇದನ್ನು ಸತತ ಏಳು ಶನಿವಾರಮಾಡಬೇಕು. ಶನಿ ಪೂಜೆ ಮಾಡಿಸಿ ಎಣ್ಣೆಯಲ್ಲಿ ನೆರಳು ನೋಡಿ, ಕರಿ ಎಳ್ಳಿನ ದೀಪ ಮಾಡಿ ಸುಟ್ಟರೂ ಶನಿ ದೋಷ ನಿವಾರಣೆಯಾಗುತ್ತದೆ.
ಒಂದು ವೇಳೆ ಮಹಿಳೆ ಮದುವೆಯಾಗದಿದ್ದರೆ ಮದುವೆಗೆ ಸಿದ್ಧವಾಗಿರುವ ವಧುವಿಗೆ ಕೈಯಲ್ಲಿ ಹೆನ್ನಾ ಅಥವಾ ಮೆಹೆಂದಿ (Mehandi) ಹಚ್ಚಿ. ಹೀಗೆ ಮಾಡುವುದರಿಂದ ದೋಷಗಳು ನಿವಾರಣೆಯಾಗಿ ಬೇಗ ಮದುವೆಯಾಗುವಂತೆ ಆಗುತ್ತದೆ.