ನೀವು ವ್ಯವಹಾರ ಮಾಡಿದರೆ
ವಾಸ್ತು ಶಾಸ್ತ್ರದ ಪ್ರಕಾರ, ವ್ಯಾಪಾರ (business) ಮಾಡಿದರೆ ಅಥವಾ ಸಾಮಾಜಿಕತೆಗೆ ಆದ್ಯತೆ ನೀಡಿದರೆ ನೀವು ಕಿತ್ತಳೆ ಮತ್ತು ಹಸಿರು ಬಣ್ಣವನ್ನು ಹೆಚ್ಚಾಗಿ ಬಳಸಬೇಕು. ಈ ಬಣ್ಣವನ್ನು ಬಳಸಿದಾಗ ವ್ಯಾಪಾರವನ್ನ ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ಗುರುತಿಸಲಾಗಿದೆ. ಅದೇ ಸಮಯದಲ್ಲಿ, ಸಮಾಜದಲ್ಲಿ ಗೌರವವೂ ಹೆಚ್ಚಾಗುತ್ತದೆ.