ಈ ಅಶುಭ ಘಟನೆಗಳು ಜೀವನದಲ್ಲಿ ನಡೆದ್ರೆ, ಕುಬೇರ ಕೋಪಗೊಂಡಿದ್ದಾನೆಂದರ್ಥ

First Published Jul 9, 2024, 5:43 PM IST

ಕುಬೇರನನ್ನು ಸಂಪತ್ತು ಮತ್ತು ವೈಭವದ ದೇವರು ಎನ್ನಲಾಗುವುದು. ಕುಬೇರನ ಆಶೀರ್ವಾದ ನಿಮ್ಮ ಮೇಲಿದ್ರೆ, ಹಣದ ಮಳೆ ಸುರಿಯುತ್ತೆ ಎನ್ನಲಾಗುವುದು, ಆದರೆ ಕುಬೇರ ನಿಮ್ಮ ಮೇಲೆ ಕೋಪಗೊಂಡರೆ, ನೀವು ಜೀವನದಲ್ಲಿ ಹಣದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. 
 

ಕುಬೇರನನ್ನು (Kuber) ಲಕ್ಷ್ಮಿ ದೇವಿಯ ಸಹೋದರ ಎನ್ನಲಾಗುತ್ತೆ. ನಿಮ್ಮ ಜೀವನದಲ್ಲಿ ನೀವು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ರೆ ನೀವು ಲಕ್ಷ್ಮಿ ದೇವಿಯೊಂದಿಗೆ ಕುಬೇರನನ್ನು ಸಹ ಪೂಜಿಸಬೇಕು. ಇದು ನಿಮ್ಮ ಜೀವನದಿಂದ ಆರ್ಥಿಕ ಸಮಸ್ಯೆಗಳನ್ನು ದೂರ ಮಾಡುತ್ತೆ. ಜೊತೆ ಹಣದ ಮಳೆಯಾಗುತ್ತೆ ಎನ್ನುವ ನಂಬಿಕೆ ಇದೆ. ಕುಭೇರನನ್ನು ಒಂಬತ್ತು ನಿಧಿಗಳ ದೇವರು ಎಂದೂ ಕರೆಯಲಾಗುತ್ತದೆ. 

ಕುಬೇರನ ಆಶೀರ್ವಾದ ಇದ್ರೆ ಮಾತ್ರ ಜೀವನದಲ್ಲಿ ಹಣದ ಹೊಳೆ ಹರಿಯುತ್ತೆ, ಆದರೆ ಕುಬೇರ ಕೋಪಗೊಂಡರೆ, ವ್ಯಕ್ತಿಯ ಸಂಪತ್ತು ಮತ್ತು ವೈಭವ ಅವನಿಂದ ದೂರಾಗುತ್ತದೆ. ಅಷ್ಟೇ ಅಲ್ಲ ಕುಬೇರ ಕೋಪಗೊಂಡಾಗ, ಮನೆಯಲ್ಲಿ ಕೆಲವೊಂದು ಘಟನೆಗಳು ಸಂಭವಿಸೋಕೆ ಆರಂಭಿಸುತ್ತೆ. ಆಗಲೇ ನೀವು ಎಚ್ಚೆತ್ತುಕೊಂಡು, ಕುಬೇರನನ್ನು ಒಲಿಸಿಕೊಳ್ಳಲು ಪ್ರಯತ್ನಿಸಿ. ಇಲ್ಲಾಂದ್ರೆ ಜೀವನ ಬರ್ಬಾದ್ ಆಗೋದು ಗ್ಯಾರಂಟಿ. ಹಾಗಿದ್ರೆ ಕುಬೇರೆ ನಿಮ್ಮ ಮೇಲೆ ಮುನಿಸಿಕೊಂಡಿದ್ದಾರೆ ಅನ್ನೋದನ್ನ ತೋರಿಸುವ ಚಿಹ್ನೆಗಳು ಯಾವುವು ನೋಡೋಣ. 
 

Latest Videos


ಒಣಗುತ್ತಿರುವ ಮರಗಳು ಮತ್ತು ಸಸ್ಯಗಳು (plants get dry)
ಮರಗಳು ಮತ್ತು ಸಸ್ಯಗಳಿಗೆ ಉತ್ತಮ ಆರೈಕೆಯ ಅಗತ್ಯವಿದೆ, ಆದರೆ ಸಾಕಷ್ಟು ಕಾಳಜಿ ವಹಿಸಿದ ನಂತರವೂ, ಯಾವುದೇ ಕಾರಣವಿಲ್ಲದೇ ನಿಮ್ಮ ಮನೆಯಲ್ಲಿನ ಮರಗಳು ಮತ್ತು ಸಸ್ಯಗಳು ಒಣಗುತ್ತಿದ್ದರೆ ಕುಬೇರ ಕೋಪಗೊಂಡಿದ್ದಾನೆ ಅನ್ನೋದನ್ನ ನೀವು ಅರ್ಥಮಾಡಿಕೊಳ್ಳಬೇಕು. ವಿಶೇಷವಾಗಿ ಮನೆಯ ಮನಿಪ್ಲಾಂಟ್ ಒಣಗುತ್ತಿದ್ದರೆ, ಕುಬೇರನ ಕೃಪೆ ನಿಮ್ಮ ಮೇಲಿಲ್ಲ ಅನ್ನೋದು ತಿಳಿದಿರಲಿ. ಇದರಿಂದ ಭಾರಿ ಧನ ನಷ್ಟ ಸಂಭವಿಸುತ್ತೆ. 

ಮೌಲ್ಯಯುತವಾದ ವಸ್ತು ಕಳೆದೋಗುವುದು ಅಥವಾ ತುಂಡಾಗುವುದು (Losing precious things)
ಕುಬೇರನ ಅಸಮಾಧಾನದ ಒಂದು ಸಂಕೇತವೆಂದರೆ ನಿಮ್ಮ ಅಮೂಲ್ಯವಾದ ವಸ್ತು ಕಳ್ಳತನವಾಗಬಹುದು ಅಥವಾ ಸಾಕಷ್ಟು ಕಾಳಜಿ ವಹಿಸಿದ ನಂತರವೂ, ಅಮೂಲ್ಯ ವಸ್ತುಗಳು ಮುರಿದುಹೋಗಬಹುದು ಅಥವಾ ಹೇಗಾದರೂ ಅದು ನಿಮ್ಮಿಂದ ದೂರವಾಗುತ್ತದೆ. ಇದು ಕುಬೇರ ಸಂತೋಷವಾಗಿಲ್ಲ ಎಂಬುದರ ಸಂಕೇತವಾಗಿದೆ.

ಆಗಾಗ್ಗೆ ಹಣದ ನಷ್ಟ (Losing money)
ಅನೇಕ ಬಾರಿ ನಮ್ಮ ಹಣ ಕಳೆದು ಹೋಗುತ್ತದೆ ಅಥವಾ ಎಲ್ಲೋ ಬೀಳುತ್ತದೆ, ಆದರೆ ನೀವು ಮತ್ತೆ ಮತ್ತೆ ಹಣವನ್ನು ಕಳೆದುಕೊಳ್ಳುತ್ತಿದ್ದೀರಿ ಎಂದು ನಿಮಗೆ ಅನಿಸಿದರೆ ಕುಬೇರ ನಿಮ್ಮ ಮೇಲೆ ಕೋಪಗೊಂಡಿದ್ದಾನೆ ಎಂದು ಅರ್ಥಮಾಡ್ಕೊಳಿ. ವಿಶೇಷವಾಗಿ ಹಣವು ಎಲ್ಲೋ ಬಿದ್ದಾಗ ಅಥವಾ ಅದನ್ನು ಬಹಳ ಎಚ್ಚರಿಕೆಯಿಂದ ಇಟ್ಟುಕೊಂಡ ನಂತರವೂ ಕಳ್ಳತನವಾದಾಗ, ಕುಬೇರನ ಕೃಪೆ ನಿಮ್ಮ ಮೇಲಿಲ್ಲ ಅನ್ನೋದು ತಿಳಿದಿರಲಿ. 

ಪದೇ ಪದೇ ಮನೆಯ ಗಾಜು ಒಡೆಯುವುದು (Broken Glass)
ನಿಮ್ಮ ಮನೆಯ ಗಾಜು ಮತ್ತೆ ಮತ್ತೆ ಒಡೆದರೆ, ಅದು ಕುಬೇರನ ಕೃಪೆ ನಿಮ್ಮ ಮೇಲೆ ಬೀಳುತ್ತಿಲ್ಲ ಮತ್ತು ಸಂಪತ್ತಿನ ದೇವರು ಕೋಪಗೊಂಡಿದ್ದಾನೆ ಎಂಬುದರ ಸಂಕೇತವಾಗಿದೆ. ವಿಶೇಷವಾಗಿ ನೀವು ಗಾಜನ್ನು ಚೆನ್ನಾಗಿ ಇಟ್ಟುಕೊಂಡಾಗಲೂ ಗಾಜು ಮತ್ತೆ ಮತ್ತೆ ಒಡೆಯುತ್ತಿದ್ದರೆ ಅದಕ್ಕೆ ಸರಿಯಾದ ಪರಿಹಾರ ಮಾಡಿಸೋದು ಉತ್ತಮ. 

ಮನೆಯಲ್ಲಿ ಜೇಡದ ಬಲೆ (Spider web at home)
ಸಾಕಷ್ಟು ಶುಚಿತ್ವ ಮಾಡಿದ ನಂತರವೂ ನಿಮ್ಮ ಮನೆಯಲ್ಲಿ ಜೇಡದ ಬಲೆಗಳು ಕಂಡುಬಂದರೆ, ಕುಬೇರನ ಕೃಪೆ ನಿಮ್ಮ ಮೇಲಿಲ್ಲ ಎಂದರ್ಥ. ಹೀಗಿರುವಾಗ ಸಾಧ್ಯವಾದಷ್ಟು ಜೇಡ ಬಲೆ ಬರದಂತೆ ಕಾಪಾಡಿ. ವಾಸ್ತು ಶಾಸ್ತ್ರದ ಪ್ರಕಾರ, ಜೇಡದ ಬಲೆ ಇದ್ರೆ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರೋದೆ ಇಲ್ಲ. 

click me!