ಮೈ ತುಂಬಾ ಸಾಲ ಇದ್ಯಾ? 1 ರೂ. ಕಾಯಿನ್ ಇದ್ದರೆ ಸಾಕು ಮುಕ್ತರಾಗಬಹುದು ನೋಡಿ !

First Published | Nov 27, 2023, 3:59 PM IST

ನಿಮಗೆ ಗೊತ್ತಾ? ಒಂದು ರೂಪಾಯಿ ನಾಣ್ಯವನ್ನು ಲಾಕರ್‌ನಲ್ಲಿ ಇಡೋದರಿಂದ ಎಷ್ಟೊಂದು ಪ್ರಯೋಜನಗಳಿವೆ ಎಂದು. ವಾಸ್ತುವಿನಲ್ಲಿ ತಿಳಿಸಿದಂತೆ ಹಣದ ಸಮಸ್ಯೆ, ಸಾಲದಿಂದ ಮುಕ್ತಿ ಪಡೆಯಲು ಹೀಗೆ ಮಾಡಿದ್ರೆ ಸಾಕು. 
 

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಸಂತೋಷ ಮತ್ತು ದುಃಖಗಳಿವೆ, ಆದರೆ ಅನೇಕ ಬಾರಿ ಕಷ್ಟಪಟ್ಟು ಕೆಲಸ ಮಾಡಿದ ನಂತರವೂ ಯಶಸ್ಸನ್ನು ಸಾಧಿಸಲಾಗುವುದಿಲ್ಲ. ಇದು ವಾಸ್ತು ದೋಷ ಅಥವಾ ಜಾತಕದಲ್ಲಿನ ಯಾವುದೇ ದೋಷದಿಂದ ಉಂಟಾಗುತ್ತದೆ. ಅದೇ ಸಮಯದಲ್ಲಿ, ನೀವು ಹಣದ ಕೊರತೆಯಿಂದ (money problem) ಹೆಣಗಾಡುತ್ತಿದ್ದರೆ, ನೀವು ಒಂದು ರೂಪಾಯಿ ನಾಣ್ಯವನ್ನು ಸುರಕ್ಷಿತವಾಗಿ ತಿಜೋರಿಯಲ್ಲಿ ಇಡಬೇಕು. ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ.

ಹಣದ ಸಮಸ್ಯೆಯನ್ನು ಪರಿಹರಿಸಲು
ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ, ನವಿಲು ಗರಿಗಳ ಜೊತೆಗೆ 1 ರೂಪಾಯಿ ನಾಣ್ಯವನ್ನು ನಿಮ್ಮ ಸೇಫ್ ಲಾಕರ್ ನಲ್ಲಿ (safe locker) ಇರಿಸಿಕೊಳ್ಳಬೇಕು. ಇದು ಹಣದ ಕೊರತೆಯನ್ನು ನಿವಾರಿಸುತ್ತದೆ. 

Tap to resize

ಲಾಭಕ್ಕಾಗಿ 
ನಿಮ್ಮ ಲಾಕರ್ ಯಾವಾಗಲೂ ಹಣದಿಂದ ತುಂಬಿರಬೇಕು ಎಂದು ನೀವು ಬಯಸಿದರೆ, ಇದಕ್ಕಾಗಿ ನೀವು ಮಾತಾ ಲಕ್ಷ್ಮಿಯ (Goddess Lakshmi) ಚಿತ್ರವಿರುವ ನಾಣ್ಯವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ, ಲಾಕರ್ ನಲ್ಲಿಡಬೇಕು.

ಸಾಲದಿಂದ ಮುಕ್ತಿ 
ನೀವು ಸಾಲದಿಂದ (debt) ತೊಂದರೆಗೀಡಾಗಿದ್ದರೆ ಮತ್ತು ಅದನ್ನು ತೊಡೆದು ಹಾಕಲು ಬಯಸಿದರೆ, ನೀವು 1 ರೂಪಾಯಿ ನಾಣ್ಯವನ್ನು ತಿಜೋರಿಯಲ್ಲಿ ಸುರಕ್ಷಿತವಾಗಿಡಬೇಕು. ಇದರಿಂದ ಸಾಲದಿಂದ ಮುಕ್ತಿ ಪಡೆಯುವಿರಿ. 
 

ಯಶಸ್ಸನ್ನು ಸಾಧಿಸಲು
ನೀವು ಎಲ್ಲದರಲ್ಲೂ ಯಶಸ್ಸನ್ನು ಸಾಧಿಸಲು ಬಯಸಿದರೆ, ಇದಕ್ಕಾಗಿ ನೀವು 1 ರೂಪಾಯಿ ನಾಣ್ಯವನ್ನು ನಿಮ್ಮ ಲಾಕರ್ ನಲ್ಲಿ (locker) ಇಟ್ಟುಕೊಳ್ಳಬೇಕು. ಇದರಿಂದ ಯಶಸ್ಸು ನಿಮ್ಮದಾಗುತ್ತೆ. 

ಹಣದ ಕೊರತೆ ಇರುವುದಿಲ್ಲ
ಪ್ರತಿಯೊಬ್ಬರೂ ತಮ್ಮ ತಿಜೋರಿ ಎಲ್ಲಾ ಸಮಯದಲ್ಲೂ ಹಣದಿಂದ ತುಂಬಿರಬೇಕು ಎಂದು ಬಯಸುತ್ತಾರೆ. ನಿಮಗೂ ಅದೇ ಬೇಕಿದ್ದರೆ, ಮಾತಾ ಲಕ್ಷ್ಮಿಗೆ ಒಂದು ರೂಪಾಯಿ ನಾಣ್ಯವನ್ನು ಅರ್ಪಿಸಿ ಮತ್ತು ಮರುದಿನ ಅದನ್ನು ಸುರಕ್ಷಿತವಾಗಿ ತಿಜೋರಿಯಲ್ಲಿ ಇರಿಸಿ. 

ಅದೃಷ್ಟವನ್ನು ಜಾಗೃತಗೊಳಿಸಲು
ನಿಮ್ಮ ಅದೃಷ್ಟ ಯಾವಾಗಲೂ ನಿಮ್ಮೊಂದಿಗೆ ಇರಬೇಕೆಂದು ನೀವು ಬಯಸಿದರೆ. ನೀವು ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಪಡೆಯಲು ಬಯಸಿದ್ರೆ, ನವಿಲು ಗರಿ (peacock feather) ಜೊತೆಗೆ ಒಂದು ರೂಪಾಯಿ ನಾಣ್ಯವನ್ನು ನಿಮ್ಮ ಲಾಕರ್ ನಲ್ಲಿ ಇರಿಸಿಕೊಳ್ಳಿ.  

ಬಡತನಕ್ಕೆ ಬೈ ಹೇಳಿ
ನೀವು ಜೀವನದಲ್ಲಿ ಬಡತನ ಎದುರಿಸುತ್ತಿದ್ದರೆ, ಕೆಂಪು ಬಟ್ಟೆಯೊಂದಿಗೆ ಒಂದು ರೂಪಾಯಿ ನಾಣ್ಯವನ್ನು (1 rupee coin) ನಿಮ್ಮ ಸೇಫ್ ನಲ್ಲಿ ಇಟ್ಟುಕೊಳ್ಳಬೇಕು. ಇದು ಬಡತನವನ್ನು ತೊಡೆದುಹಾಕುತ್ತದೆ. 

Latest Videos

click me!