ಅರಳಿ ಮರದ ಬಳಿ ಮನೆ ಕಟ್ಟಿದ್ರೆ ಅಪಾಯ ತಪ್ಪಿದ್ದಲ್ಲ… ಯಾಕೆ ಗೊತ್ತಾ?

First Published | Jul 15, 2023, 6:21 PM IST

ಅರಳಿ ಮರವು ಮನೆಯ ಬಳಿ ಇದ್ದರೆ, ವಾಸ್ತು ದೋಷ ಉಂಟಾಗುತ್ತೆ. ಇದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ, ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣವಿದೆಯೇ? ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ. 
 

ಅರಳಿ ಮರವನ್ನು (peepal tree) ಹಿಂದೂ ಧರ್ಮದಲ್ಲಿ ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಅರಳಿ ಮರದಲ್ಲಿ ದೇವತೆಗಳು ವಾಸಿಸುತ್ತಾರೆ ಅಂತಾನೂ ನಂಬಲಾಗಿದೆ. ಆದರೆ ಅರಳಿ ಮರವು ಮನೆಯ ಸುತ್ತಲೂ ಇರಬಾರದು ಎಂದು ಹೇಳಲಾಗುತ್ತೆ. ಇದಕ್ಕೆ ವಾಸ್ತುಗೆ ಸಂಬಂಧಿಸಿದ ಕಾರಣಗಳಿವೆ, ಜೊತೆಗೆ ವೈಜ್ಞಾನಿಕ ಕಾರಣಗಳೂ ಇವೆ. ಮನೆಯಲ್ಲಿ ಒಂದು ಸಣ್ಣ ಅರಳಿ ಗಿಡ ಬೆಳೆಯುವುದು ಸಹ ಕೆಟ್ಟದ್ದು ಎನ್ನಲಾಗುತ್ತೆ, ಅದಕ್ಕೆ ಕಾರಣ ಏನಿರಬಹುದು ತಿಳಿಯೋಣ.
 

ಅರಳಿ ಮರಕ್ಕೆ ಸಂಬಂಧಿಸಿದ ಮೂಢ ನಂಬಿಕೆ ಏನು?: ಮನೆಯ ಸುತ್ತಲೂ ಅಥವಾ ಮನೆಯ ಒಳಗೆ ಅರಳಿ ಮರ ಬೆಳೆಯುತ್ತಿದ್ದರೆ, ಅದು ಮನೆಯಲ್ಲಿ ನಕಾರಾತ್ಮಕತೆಯನ್ನು negativity)ತರುತ್ತೆ ಎಂದು ವಾಸ್ತು ಶಾಸ್ತ್ರದಲ್ಲಿ ನಂಬಲಾಗಿದೆ. ಅಲ್ಲದೇ ಇದರಿಂದ, ಮನೆಯಲ್ಲಿ ಬಡತನ ಸಹ ಉಂಟಾಗುತ್ತೆ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿಯೇ ಅರಳಿ ಗಿಡ ಮನೆಯಲ್ಲಿ ಬೆಳೆದರೆ ಅದನ್ನು ಅಲ್ಲಿಂದ ತೆಗೆದು ಬೇರೆಡೆ ನೆಟ್ಟು ಪೂಜಿಸಲಾಗುತ್ತದೆ.

Tap to resize

ವೈಜ್ಞಾನಿಕ ಕಾರಣ ಏನು ಹೇಳುತ್ತದೆ?: ಅರಳಿ ಮರವು ಮನೆಯ ಒಳಗೆ ಅಥವಾ ಹತ್ತಿರ ಇರಬಾರದು ಎಂದು ವಿಜ್ಞಾನ (scientific reason)ಸಹ ಹೇಳುತ್ತದೆ ಏಕೆಂದರೆ ಅದರ ಬೇರು ತುಂಬಾ ಬಲವಾಗಿರುತ್ತದೆ. ಇದನ್ನು ಮನೆಯ ಹೊರಗೆ ಅಥವಾ ಒಳಗೆ ನೆಟ್ಟರೆ, ಅದರ ಬೇರುಗಳು ನೀರನ್ನು ಹುಡುಕುತ್ತಾ ಹಲವಾರು ಮೀಟರ್ ಗಳಷ್ಟು ಹರಡಬಹುದು. 

ಅರಳಿ ಬೇರುಗಳು ಹರಡುತ್ತ ಹೆಚ್ಚಿನ ತೇವಾಂಶವನ್ನು ಹೊಂದಿರುವ ಮಣ್ಣನ್ನು ಹುಡುಕುತ್ತವೆ. ಹೀಗಿರೋವಾಗ, ಮನೆಯ ಅಡಿಪಾಯವನ್ನು ತಲುಪಲು ಅವುಗಳಿಗೆ ಹೆಚ್ಚು ಸಮಯ ಬೇಕಾಗಿರೋದಿಲ್ಲ. ಅರಳಿ ಮರವು ಅನೇಕ ವರ್ಷಗಳವರೆಗೆ ಬದುಕುಳಿಯುತ್ತದೆ. ಹಾಗಾಗಿ ಇದರಿಂದ ಮನೆಯ ಫೌಂಡೇಶನ್ (foundation of house) ತುಂಬಾನೆ ದುರ್ಬಲವಾಗುತ್ತೆ.

ಅರಳಿ ಮರದ ಬಲವಾದ ಬೇರುಗಳಿಂದಾಗಿ ಗೋಡೆಗಳು ಸಹ ಹಾನಿಗೊಳಗಾಗುತ್ತವೆ. ಅರಳಿ ಮರವು ಕಾಂಕ್ರೀಟ್ ಗೋಡೆಯಲ್ಲಿ ಸಹ ಬೆಳೆಯಬಹುದು ಮತ್ತು ಅದರ ಹಣ್ಣು ನೆಲಕ್ಕೆ ಬಿದ್ದರೆ, ಅದರ ಸಸ್ಯವು ಸಹ ಅಲ್ಲಿಂದ ಬೆಳೆಯಬಹುದು. ಇದರಿಂದ ಮನೆ ಸಂಪೂರ್ಣವಾಗಿ ತೊಂದರೆಗೀಡಾಗೋದು ಖಚಿತ. ಹಾಗಾಗಿ ಸಾಧ್ಯವಾದಷ್ಟು ಮನೆಯಲ್ಲಿ ಅರಳಿ ಮರ ಬೆಳೆಯದಂತೆ ಜಾಗೃತರಾಗೋದು ಮುಖ್ಯ.

ಅರಳಿ ಮರಗಳು ಮತ್ತು ದೆವ್ವಗಳಿಗೆ ಸಂಬಂಧಿಸಿದ ಮಿಥ್ಯೆಗಳು: ಅರಳಿ ಮರವು ಹಳೆಯದಾಗಿದ್ದರೆ, ಅದರ ಸುತ್ತಲೂ ದೇವಾಲಯಗಳನ್ನು ನಿರ್ಮಿಸಲಾಗುತ್ತದೆ. ಅರಳಿ ಮರದಲ್ಲಿ ದೆವ್ವಗಳು ವಾಸಿಸುತ್ತವೆ ಎಂದು ನಂಬಲಾಗಿದೆ. ದೆವ್ವಗಳು ನಿಜವಾಗಿಯೂ ಇದೆಯೇ ಅಥವಾ ಇಲ್ಲವೇ ಅನ್ನೋದರ ಬಗ್ಗೆಯೂ ಜನರಿಗೆ ಗೊತ್ತಿರೋದಿಲ್ಲ. ಆದರೂ ಇಂದಿಗೂ ಸಹ ಅರಳಿ ಮರದಲ್ಲಿ ಭೂತ, ದೆವ್ವ ಇರುತ್ತೆ ಎಂದು ನಂಬಲಾಗುತ್ತೆ. 

ಗೌತಮ ಬುದ್ಧನು ಅರಳಿ ಮರದ ಕೆಳಗೆ ಜ್ಞಾನೋದಯವನ್ನು ಹೊಂದಿದನು ಮತ್ತು ಅರಳಿ ಮರವು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ವಾಸಸ್ಥಾನವೆಂದು ನಂಬಲಾಗಿದೆ.  ಇನ್ನು ರಾತ್ರಿ ಹೊತ್ತು ಅರಳಿ ಮರದ ಬಳಿ ಹೋಗದಿರಲು ಮುಖ್ಯ ಕಾರಣ ದೆವ್ವದ ಭಯ ಅಲ್ಲ, ಈ ಮರದ ಬಳಿ ರಾತ್ರಿ ಹೋಗಬಾರದು ಎನ್ನಲಾಗುತ್ತೆ,  ಯಾಕಂದ್ರೆ ರಾತ್ರಿ ಹೊತ್ತಲ್ಲಿ ಇದರಿಂದ  ಕಾರ್ಬನ್ ಡೈಆಕ್ಸೈಡ್ ಬಿಡುಗಡೆಯಾಗುತ್ತೆ. ಇದರಿಂದ ಉಸಿರಾಟದ ಸಮಸ್ಯೆ (breathing problem) ಕಾಡುತ್ತೆ, ಜೊತೆಗೆ ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ ಇದೆ. ಹಾಗಾಗಿ ರಾತ್ರಿ ಹೋಗಬಾರದು ಅಷ್ಟೇ. 

Latest Videos

click me!