ಸ್ನಾನ ಮಾಡುತ್ತಿದ್ದರೂ ಬಾತ್‌ರೂಮ್‌ಗೆ ಬರ್ತಿದ್ದರು; ಕರಾಳ ಘಟನೆ ಬಿಚ್ಚಿಟ್ಟ 'ಪಾರು' ಸೀರಿಯಲ್ ಸಿತಾರಾ!

First Published | Apr 4, 2024, 12:53 PM IST

ಪಾರು ಸೀರಿಯಲ್‌ನಲ್ಲಿ ಮಿಂಚುತ್ತಿರುವ ಸಿತಾರಾ ನಿಜ ಜೀವನದಲ್ಲಿ ಎಷ್ಟು ಕಷ್ಟ ಅನುಭವಿಸಿದ್ದಾರೆ ಗೊತ್ತಾ? ಸಿತಾರಾ ಹಂಚಿಕೊಂಡಿರುವ ಘಟನೆ ಇದು. 

ರಂಗಭೂಮಿ ಕಲಾವಿದೆ, ಕನ್ನಡ ಚಿತ್ರರಂಗದ ಹಾಗೂ ಕಿರುತೆರೆ ನಟಿ ಸಿತಾರಾ ನಟನೆಯಲ್ಲಿ ಸೈ ಎನಿಸಿಕೊಂಡು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಈ ಜರ್ನಿಯಲ್ಲಿ ರಂಗಭೂಮಿಗೆ ಸೇರಿದಾಗ ಏನೇಲ್ಲಾ ಕಷ್ಟ ಅನುಭವಿಸಿದ್ದರು ಎಂದು ಖಾಸಗಿ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. 

'ನೀನಾಸಂ ನಲ್ಲಿದ್ದಾಗ ಮತ್ತು ತಿರುಗಾಟ ನಾಟಕ ಮಾಡುವಾಗ ನನಗೆ ಕೆಲವೊಂದು ಕೆಟ್ಟ ಅನುಭವಾಗಿ. ಜಾಗ ಮತ್ತು ವ್ಯಕ್ತಿ ಹೆಸರು ಹೇಳುವುದಕ್ಕೆ ಆಗಲ್ಲ ಆದರೆ ಆ ವ್ಯಕ್ತಿಗಳು ನನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ. 

Tap to resize

ಆ ಘಟನೆಗಳನ್ನು ವಿವರಿಸುವುದು ಕಷ್ಟು. ಹುಡುಗಿ  ಹೇಳೋರು ಕೇಳೋರು ಯಾರೂ ಇಲ್ಲ ಅಂದ್ರೆ They behave like a hell. ತುಂಬಾ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಕೆಲವರು ನಡೆದುಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ.

ಈ ಕಾರಣಕ್ಕೆ ನಾನು ಜನರ ಜೊತೆ ತುಂಬಾ ರಫ್‌ ಆಗಿರುತ್ತಿದ್ದೆ. ಹುಡುಗರು ಮತ್ತು ಟೀಚರ್ಸ್‌ಗಳ ಮಾತನಾಡುವುದಕ್ಕೆ ಇಷ್ಟನೇ ಆಗುತ್ತಿರಲಿಲ್ಲ ಫ್ರೆಂಡ್ಸ್‌ಗಳ ಜೊತೆ ಮಾತನಾಡಲು ಆಗುತ್ತಿರಲಿಲ್ಲ...ಹುಡುಗರು ಅಂದ್ರೆನೇ ಕೈಕಾಲು ನಡುಕ ಬರುತ್ತಿತ್ತು. 

ತುಂಬಾ ಕೆಟ್ಟದಾಗಿ ನಡೆದುಕೊಂಡಿರುವ ವ್ಯಕ್ತಿಗಳ ಹೆಸರು ಹೇಳುವುದಕ್ಕೆ ಇಷ್ಟವಿಲ್ಲ ಒಂದು ವೇಳೆ ನಾನು ಹೇಳಿದರೂ ಅವರ ಕುಟುಂಬ ಬೀದಿಗೆ ಬರುತ್ತದೆ. ಈಗ ನನ್ನ ಬುದ್ಧಿ ಮೆಚ್ಯೂರ್ ಆಗಿ ಅವರ ಹೆಸರು ಹೇಳಬಾರದು ಅನ್ನೋ ಸೆನ್ಸ್‌ ಕೂಡ ನನಗಿದೆ.

ಆದರೆ ಆ ಸಮಯದಲ್ಲಿ ತುಂಬಾ ಚಿತ್ರಹಿಂಸೆ ಕೊಡುತ್ತಿದ್ದರು, ಜೊತೆಯಲ್ಲಿ ನಾಟಕ ಮಾಡುತ್ತಿದ್ದವರು ವೇದಿಕೆ ಮೇಲೆ ಕಾಟ ಕೊಡುತ್ತಿದ್ದರು. ಈ ವ್ಯಕ್ತಿ ನನ್ನ ಜೊತೆ ಈ ರೀತಿ ವರ್ತಿಸುತ್ತಿದ್ದಾರೆ ಅಂತ ಹೇಳಿದರೂ ಯಾರೂ ನಂಬುವುದು.  

 ಗ್ರೀನ್‌ ರೂಮ್‌ನಲ್ಲಿದ್ದರೆ ಅಲ್ಲಿಗೆ ಬರುತ್ತಿದ್ದರು ಸ್ನಾನ ಮಾಡುತ್ತಿದ್ದರೂ ಬಾತ್‌ರೂಮ್‌ಗೆ ಬರುತ್ತಿದ್ದರು ಮಲ್ಕೊಂಡಿದ್ದರೆ ನೆಮ್ಮದಿಯಾಗಿ ಮಲಗಲು ಬಿಡುತ್ತಿರಲಿಲ್ಲ ಬಸ್‌ನಲ್ಲಿ ನೆಮ್ಮದಿಯಾಗಿರಲು ಬಿಡುತ್ತಿರಲಿಲ್ಲ ಎಲ್ಲೆಲ್ಲಿ ಕೈ ಹಾಕಬಾರದು ಅಲ್ಲಿ ಕೈ ಹಾಕುತ್ತಿದ್ದರು. 

ಬಾಯಿ ಜೋರಿದ್ದರೆ ನಾವೇ ಮೈ ಮೇಲೆ ಬೀಳುತ್ತೀವಿ ಅಂತ ಅಂದುಕೊಳ್ಳುತ್ತಾರೆ ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡುತ್ತಿದ್ದರು ಎಂದು ಸಿತಾರಾ ಮಾತನಾಡಿದ್ದಾರೆ. 

ಮುಟ್ಟಬಾರದ ಜಾಗಕ್ಕೆ ಕೈ ಹಾಕಿ ಮುಟ್ಟುತ್ತಿದ್ದರು ಇದನ್ನು ಯಾರಿಗೂ ಹೇಳಲು ಅಗಲ್ಲ. ರಂಗಭೂಮಿಗೆ ಕಳುಹಿಸಲು ಜನರು ಹೆದರಿಕೊಳ್ಳುತ್ತಾರೆ ಎಂದಿದ್ದರೆ ಸಿತಾರ. 

Latest Videos

click me!