ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಇದೀಗ 600 ಸಂಚಿಕೆಗಳನ್ನು ಪೂರೈಸಿದೆ.
ಇಡೀ ಜೊತೆ ಜೊತೆಯಲಿ ಧಾರಾವಾಹಿ ತಂಡ ಸೇರಿಕೊಂಡು ಕೇಕ್ ಹತ್ತರಿಸಿ ಸಂಭ್ರಮಿಸಿರುವ ಫೋಟೋಗಳನ್ನು ಅಭಿಮಾನಿಗಳು, ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.
ಜೀ ಕನ್ನಡ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಆರ್ಯವರ್ಧನ್, ಅನು ಸಿರಿಮನೆ ಮತ್ತು ನಿರ್ದೇಶಕರಾದ ಆರೂರು ಜಗದೀಶ್ ಅವರು ಅಭಿಮಾನಿಗಳ ಜೊತೆ ಲೈವ್ ಬಂದು ಮಾತನಾಡಿದ್ದಾರೆ.
ಪ್ರಸಾರವಾದ ದಿನದಿಂದಲೂ ಟಿಆರ್‌ಪಿಯಲ್ಲಿ ಮೊದಲನೇ ಸ್ಥಾನ ಪಡೆದುಕೊಂಡಿರುವ ಈ ಧಾರಾವಾಹಿ ಈಗಲೂ ಎಲ್ಲರ ಗಮನ ಸೆಳೆಯುತ್ತಿದೆ.
ಅರ್ಯ ಮತ್ತು ಅನು ಅದ್ಧೂರಿ ಮದುವೆ ಕಾರ್ಯಕ್ರವನ್ನು ಈಗಲೂ ಅಭಿಮಾನಿಗಳು ಮರೆಯವುದಿಲ್ಲ. ನಿಜವಾದ ಮದುವೆ ರೀತಿ ಪ್ರತಿಯೊಂದೂ ಶಾಸ್ತ್ರಗಳನ್ನು ಮಾಡಿ ಅದರ ಅರ್ಥವನ್ನು ವೀಕ್ಷಕರಿಗೆ ತಿಳಿಸಿಕೊಟ್ಟರು
ಕಳೆದು ಮೂರ್ನಾಲ್ಕು ವಾರಗಳಿಂದ ಆರ್ಯವರ್ಧನ್‌ನ ಮತ್ತೊಂದು ಮುಖವನ್ನು ಅಭಿಮಾನಿಗಳು ನೋಡುತ್ತಿದ್ದಾರೆ. ಹೀಗಾಗಿ ಕಥೆಯಲ್ಲಿ ಎನೋ ಟ್ವಿಸ್ಟ್ ಇರುವ ಸುಳಿವು ವೀಕ್ಷಕರಿಗೆ ಸಿಕ್ಕಿದೆ.
ಸಂಸಾರ ನೋಡಿಕೊಳ್ಳಲು ಅನು ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಾಳೆ. ಈಗಲಾದರೂ ನಮಗೆ ರಾಜನಂದಿನಿಯನ್ನು ಪರಿಚಯ ಮಾಡಿಕೊಡಿ, ಎಂದು ವೀಕ್ಷಕರು ಡಿಮ್ಯಾಂಡ್ ಮಾಡುತ್ತಿದ್ದಾರೆ.