ಉರ್ಫಿ ಮತ್ತೆ Troll - 'ಲೋ ಬಜೆಟ್ ಸಮಂತಾ ರುತ್ ಪ್ರಭು' ಎಂದ ನೆಟಿಜನ್ಸ್‌!

Suvarna News   | Asianet News
Published : Jan 24, 2022, 05:47 PM IST

ಟಿವಿ ನಟಿ ಮತ್ತು ಬಿಗ್ ಬಾಸ್ OTT ಸ್ಪರ್ಧಿ ಉರ್ಫಿ ಜಾವೇದ್ (Urfi Javed) ಯಾವಾಗಲೂ ಪ್ರಚಾರದಲ್ಲಿರುತ್ತಾರೆ. ಅವರ ಕೆಲಸಗಳಿಗಿಂತ ತಮ್ಮ ಡ್ರೆಸ್‌ಗಳಿಗಾಗಿ ಉರ್ಫಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ನಟಿಯ ವಿಚಿತ್ರ ಡ್ರೆಸ್‌ಗಳು ಯಾವಾಗಲೂ ಟ್ರೋಲ್‌ಗೆ ಗುರಿಯಾಗುತ್ತವೆ. ಈಗ ಮತ್ತೆ ಉರ್ಫಿ ಸುದ್ದಿಯಲ್ಲಿದ್ದಾರೆ. ನೆಟಿಜನ್‌ಗಳು ಉರ್ಫಿ ಜಾವೇದ್ ಅವರನ್ನು 'ಲೋ ಬಜೆಟ್ ಸಮಂತಾ ರುತ್ ಪ್ರಭು' ಎಂದು ಕರೆಯುತ್ತಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ? ಮುಂದೆ ಓದಿ.

PREV
17
ಉರ್ಫಿ ಮತ್ತೆ Troll - 'ಲೋ ಬಜೆಟ್ ಸಮಂತಾ ರುತ್ ಪ್ರಭು' ಎಂದ ನೆಟಿಜನ್ಸ್‌!

ಇತ್ತೀಚೆಗೆ ಟಿವಿ ನಟಿ ಉರ್ಫಿ ಜಾವೇದ್ (Urfi Javed) ಅವರು ಪುಷ್ಪಾ (Pushpa) ಸಿನಿಮಾದ ಫೇಮಸ್‌ ಸಾಂಗ್‌  'ಊ ಅಂತವ' ಗೆ ಡ್ಯಾನ್ಸ್‌ ಮಾಡಿದ್ದಾರೆ. ಈ ವಿಡಿಯೋವನ್ನು ಉರ್ಫಿ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

27

ಈ ಹಾಡಿನಲ್ಲಿ ಮೂಲತಃ ಸೌತ್ ತಾರೆಗಳಾದ ಸಮಂತಾ ರುತ್ ಪ್ರಭುನ (Samanth Ruth Prabhu) ಮತ್ತು ಅಲ್ಲು ಅರ್ಜುನ್ (Allu Arjun) ಕಾಣಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ, ಮತ್ತೊಬ್ಬ ಟಿವಿ ನಟಿ ಸಂಜೀದಾ ಶೇಖ್ ಕೂಡ ಅದೇ ಹಾಡಿಗೆ ಕೆಲವು ಸೆಕ್ಸಿ ಮೂವ್ಸ್‌ ಮಾಡಲು ಪ್ರಯತ್ನಿಸಿದ್ದರು.

37

ಸಮಂತಾ ಅಭಿನಯದ ಊ ಅಂತಾವಾ ಊಊ ಅಂತಾವಾ ಸಿಕ್ಕಾಪಟ್ಟೆ ಹಿಟ್ ಆಗಿದ್ದು, ಯೂಟ್ಯೂಬ್‌ನ ಟಾಪ್ 10 ಟ್ರೆಂಡಿಂಗ್‌ನಲ್ಲಿತ್ತು. ನಟಿಯ ಸಖತ್‌ ಸೆಕ್ಸಿ ಸ್ಟೆಪ್ಸ್‌ ಹಾಡಿನ ಹೈಲೈಟ್ ಆಗಿದೆ ಮತ್ತು ಅಲ್ಲು ಅರ್ಜುನ್ ಜೊತೆಗಿನ ಅವರ ಡ್ಯಾನ್ಸ್‌ ಸಖತ್‌ ವೈರಲ್‌ ಆಗಿದೆ.

47

ಈ ಹಾಡು ಇನ್‌ಸ್ಟಾಗ್ರಾಮ್ (Instagram) ರೀಲ್‌ಗಳಲ್ಲಿ ಹಾಟ್ ಟ್ರೆಂಡ್ ಆಗಿದೆ ಮತ್ತು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಹಾಡಿಗೆ ನೃತ್ಯ ಮಾಡುವ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತೆಯೇ, ಉರ್ಫಿ ಜಾವೇದ್ ಅವರು
ಸಣ್ಣ ಬ್ಲೌಸ್‌ ಮತ್ತು ಮರೂನ್ ಸೀರೆ ಧರಿಸಿ ಈ ಟ್ರ್ಯಾಕ್‌ಗೆ ನೃತ್ಯ ಮಾಡಿದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

57

ಸಾಮಾಜಿಕ ಮಾಧ್ಯಮದ (Social Media users) ಬಳಕೆದಾರಿಗೆ ಆಕೆಯ ಡ್ಯಾನ್ಸ್ ಮತ್ತು ಡ್ರೆಸ್ ಇಷ್ಟವಾಗಿಲ್ಲ. ಅವರನ್ನು 'ಲೋ-ಬಜೆಟ್ ಸಮಂತಾ' ಟೀಕೆ ಮಾಡಿದ್ದಾರೆ. 'ಎಕ್ಸ್‌ಪ್ರೆಶನ್‌ ತುಂಬಾ ಕಳಪೆಯಾಗಿವೆ' ಎಂದು ಒಬ್ಬ ಯೂಸರ್‌ ಕಾಮೆಂಟ್‌ ಮಾಡಿದ್ದಾರೆ. ಈ  ಟಿವಿ ನಟಿ ತನ್ನ ವಿಲಕ್ಷಣವಾದ ಫ್ಯಾಷನ್ ಸೆನ್ಸ್‌ಗಾಗಿ ಆಗಾಗ್ಗೆ ಟ್ರೋಲ್‌ಗೆ ಒಳಗಾಗಿದ್ದಾರೆ. 

67
Urfi Javed Saree

ಆದಾಗ್ಯೂ, ಕೆಲವರು ವೀಡಿಯೋದಲ್ಲಿ ಉಡುಪಿನ ಆಯ್ಕೆ ನೋಡಿ ಸಂತೋಷಪಟ್ಟಿದ್ದಾರೆ. 'ಸೀರೆಯಲ್ಲಿ ಹಾಟ್ ಆಗಿ ಕಾಣುತ್ತಿದ್ದೀರಾ' ಎಂದು ಮೆಚ್ಚಗೆ ವ್ಯಕ್ತ ಪಡಿಸಿದ್ದಾರೆ. ಓ ಅಂತಾವಾ ಹಾಡು ಸಮಂತಾ ರುತ್ ಪ್ರಭು ಅವರ ವೃತ್ತಿ ಜೀವನದ ಮೊದಲ ಐಟಂ ಹಾಡು.

77

ತನ್ನನ್ನು ಹಾಡಿಗೆ ಆಯ್ಕೆ ಮಾಡಿದ್ದಕ್ಕೆ ಅಲ್ಲು ಅರ್ಜುನ್ ಮತ್ತು ಪುಷ್ಪಾ ತಂಡಕ್ಕೆ ಸಮಂತಾ ಕೃತಜ್ಞತೆ ಸಲ್ಲಿಸಿದ್ದಾರೆ. ವರದಿಗಳ ಪ್ರಕಾರ, ಅಲ್ಲು ಅರ್ಜುನ್ ಖುದ್ದು ಸಮಂತಾಗೆ ಈ ಡ್ಯಾನ್ಸ್‌ಗೆ ಒಪ್ಪಿಸಿದ್ದಾರೆ. 3 ನಿಮಿಷದ ಹಾಡಿಗೆ ಆಕೆ 5 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರಂತೆ. ಚಿತ್ರದಲ್ಲಿ ನ್ಯಾಷನಲ್ ಕ್ರಷ್ ರಶ್ಮಿಕಾ ಹೀರೋಯಿನ್ ಆಗಿದ್ದರೂ, ಸಮಂತಾ ಒಂದೇ ಡ್ಯಾನ್ಸ್‌ನಿಂದ ಚಿತ್ರದ ಹೈಲೈಟ್ ಆಗಿದ್ದು ಸುಳ್ಳಲ್ಲ.

Read more Photos on
click me!

Recommended Stories