ಜೋಡಿ ನಂ 1 ಆಗಲು ಬರ್ತಿದ್ದಾರೆ ಸೆನ್ಸೇಷನ್‌ ಕ್ರಿಯೇಟರ್‌ಗಳು, ಯಾರೆಲ್ಲಾ ಇದ್ದಾರೆ ನೋಡಿ!

First Published | Jun 10, 2022, 1:26 PM IST

 ತೆರೆ ಮೇಲೆ ಮಿಂಚುತ್ತಿರುವ ಸೆಲೆಬ್ರಿಟಿಗಳು ತಮ್ಮ ರಿಯಲ್ ಲೈಫ್ ಸಂಗಾತಿಗಳ ಜೊತೆ ಜೋಡಿ ನಂ 1 ಕಿರೀಟ ಪಡೆಯಲು ಬರ್ತಿದ್ದಾರೆ. ಟಫ್‌ ಫೈಟ್‌ ಕೊಡಲು ಯಾರಿದ್ದಾರೆ....
 

ಜೀ ಕನ್ನಡ ವಾಹಿನಿಯಲ್ಲಿ ಮೊದಲ ಬಾರಿಗೆ ರಿಯಲ್ ಲೈಫ್‌ ಕಪಲ್‌ಗಳಿಗಾಗಿ ರಿಯಾಲಿಟಿ ಶೋ ಮಾಡಲಾಗುತ್ತಿದೆ. ಜೋಡಿ ನಂ 1 ಜೂನ್‌ 11ರಿಂದ ಸಂಜೆ 6.30ಗೆ ಪ್ರಸಾರವಾಗಲಿದೆ. 

 'ಸರಿಗಮಪ' ಸಂಗೀತ ಕಾರ್ಯಕ್ರಮ ಖ್ಯಾತಿಯ ಕಂಬದ ರಂಗಯ್ಯ ಮತ್ತು ಲೀಲಾವತಿ.  ದಾಂಪತ್ಯದ ರಂಗು ರಂಗಿನ ಕಥೆ ಹೇಳೋಕೆ ರೆಡಿಯಾಗಿದ್ದಾರಂತೆ.

Tap to resize

ಕನ್ನಡ ಚಿತ್ರರಂಗದ ಹಿರಿಯ ನಟ ಅಭಿಜಿತ್ ಮತ್ತು ರೋಹಿಣಿ. ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

ಕನ್ನಡ ಚಿತ್ರರಂಗದ ಅದ್ಭುತ ನಟ ಮಿತ್ರ ಮತ್ತು ಅವರ ಪತ್ನಿ ಗೀತಾ. ಇದೇ ಮೊದಲಿಗೆ ಇಬ್ಬರೂ ಆನ್‌ಸ್ಕ್ರೀನ್ ಕಾಣಿಸಿಕೊಳ್ಳುತ್ತಿರುವ ಕಾರಣ ವೀಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ.

ಟಿವಿ, ಕಿರುತೆರೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸುತ್ತಿರುವ ಕಿರಿಕ್ ಕೀರ್ತಿ ಮತ್ತು ಅರ್ಪಿತಾ.  ನಮ್ದು ಲವ್ ಮ್ಯಾರೇಜ್, ಬದುಕು ಗೋಲ್ಡನ್ ಪೇಜ್ ಅನ್ನೋಕೆ ಬರ್ತಿದ್ದಾರೆ.

ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ ಮತ್ತು ಮಾನಸ. ತೆರೆ ಮೇಲೆ ಮದುವೆ ಆಗಿಲ್ಲ ಎಂದು ಹೇಳಿಕೊಳ್ಳುವ ಸಂತು ರಿಯಲ್ ಪಾರ್ಟನರ್‌ನ ಪರಿಚಯಿಸುತ್ತಿದ್ದಾರೆ.

ಸುದೀರ್ಘ ದಾಂಪತ್ಯದ ಅನುಭವ ಹೇಳೋಕೆ ಬರ್ತಿದ್ದಾರೆ ಕೃಷ್ಣೇಗೌಡ್ರು-ಕಲ್ಪನ! ಜೋಡಿ ನಂ. ಜೂನ್‌ 11, ಶನಿವಾರದಿಂದ ಶನಿ-ಭಾನು ಸಂಜೆ 6.30ಕ್ಕೆ ಪ್ರಸಾರವಾಗಲಿದೆ. 

'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಗೋವಿಂದೇ ಗೌಡ ಮತ್ತು ದಿವ್ಯಾ.  ಎರಡು ತಿಂಗಳ ಹಿಂದೆ ಮುದ್ದಾಗ ಹೆಣ್ಣು ಮಗುವಿಗೆ ದಿವ್ಯಾ ಜನ್ಮ ಕೊಟ್ಟಿದ್ದಾರೆ.

 'ಹಿಲ್ಟರ್ ಕಲ್ಯಾಣ' (Hitler Kalyana) ಧಾರಾವಾಹಿಯ ನೇಹಾ ಮತ್ತು ಪ್ರಣಮ್. ಪ್ರಯಣದ ಬದುಕಿನ ಪ್ರಯಾಣ ಹೇಳೋಕೆ ಇಬ್ಬರು ಸಿದ್ಧವಾಗಿದ್ದಾರೆ.

ನಾಗಿಣಿ 2 ಖ್ಯಾತಿಯ ನಿನಾದ್ ಮತ್ತು ರಮ್ಯಾ. ಹಲವು ವರ್ಷಗಳ ಕಾಲ ಇಬ್ಬರು ಪ್ರೀತಿಸಿ ಇತ್ತೀಚಿಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಕಿರುತೆರೆ ನಟ ಭವಾನಿ ಸಿಂಗ್ (Bhavani Singh) ಮತ್ತು ಪಂಕಜ. ಸುಖ ದಾಂಪತ್ಯದಲ್ಲಿದೆ ಮಜಾ ಅಂತಿದ್ದಾರೆ ಇವರು. ಈ ರಿಯಾಲಿಟಿ ಶೋ ಮೇಲೆ ವೀಕ್ಷಕರಿಗೆ ನಿರೀಕ್ಷೆ ಹೆಚ್ಚಿದೆ. 

Latest Videos

click me!