ಕೂರ್ಗ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಕಿರುತೆರೆ ನಟಿ ಕಾವ್ಯಾ ಗೌಡ!

First Published | Jun 7, 2022, 10:04 AM IST

ಪತಿ ಜೊತೆ ಮೊದಲ ಹುಟ್ಟುಹಬ್ಬ ಆಚರಿಸಿಕೊಂಡ ಕಾವ್ಯಾ ಗೌಡ. ಸೋಷಿಯಲ್ ಮೀಡಿಯಾದಲ್ಲಿ ಹರಿದು ಬಂತು ಶುಭಾಶಯಗಳು. 

ಗಾಂಧಾರಿ, ರಾಧಾ ರಮಣ ಧಾರಾವಾಹಿಯಲ್ಲಿ ನಟಿಸಿರುವ ಕಾವ್ಯಾ ಗೌಡ ಇದೀ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಪತಿ ಜೊತೆ ಆಚರಿಸಿಕೊಂಡಿದ್ದಾರೆ. 

 ಇನ್‌ಸ್ಟಾಗ್ರಾಂನಲ್ಲಿ ಆಕ್ಟೀವ್ ಆಗಿರುವ ಕಾವ್ಯಾ ಕೂರ್ಗ್‌ನಲ್ಲಿ ಪತಿ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ವೈಟ್‌ ಔಟ್‌ಫಿಟ್‌ನಲ್ಲಿ ಮಿಂಚುತ್ತಿದ್ದಾರೆ. 

Tap to resize

'ಫಾರ್‌ಎವರ್‌ ಗ್ರೇಟ್‌ಫುಲ್‌. ಈ ಜಾಗದಲ್ಲಿ ನನ್ನ ಮನಸ್ಸು ಇದೆ. ನಾವು ವಾಸಿಸುತ್ತಿರುವ ಮರದ ಟಾಪ್ ರೂಮ್‌ನಿಂದ ಈ ರೀತಿ ಕಾಣಿಸುತ್ತಿದೆ' ಎಂದು ಕಾವ್ಯಾ ಬರೆದುಕೊಂಡಿದ್ದಾರೆ. 

ಕಾವ್ಯಾ ಹುಟ್ಟುಹಬ್ಬದ ದಿನವೇ ಅವರ ತಾಯಿ ಹುಟ್ಟುಹಬ್ಬ ಇರುವುದು, ಹೀಗಾಗಿ ಅಭಿಮಾನಿಗಳು ಇಬ್ಬರಿಗೂ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ. 

ಕೆಲವು ತಿಂಗಳುಗಳ ಹಿಂದೆ ಕಾವ್ಯಾ ಅವರ ಸೋಷಿಯಲ್ ಮೀಡಿಯಾ ಖಾತೆ ಹ್ಯಾಕ್ ಆಗಿತ್ತು. ಎರಡು ಮೂರು ದಿನಗಳ ಕಾಲ ಅಭಿಮಾನಿಗಳ ಸಂಪರ್ಕದಲ್ಲಿ ಇರಲಿಲ್ಲ.

ಉದ್ಯಮಿ ಸೋಮಶೇಖರ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಕಾವ್ಯಾ ಕಿರುತೆರೆಗೆ ಗುಡ್ ಬೈ ಹೇಳಿದ್ದಾರೆ. ಆಭರಣ ವಿನ್ಯಾಸ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. 

ಕಾವ್ಯಾ ಅವರ ಹುಟ್ಟುಹಬ್ಬಕ್ಕೆ ಬಂದಿರುವ ಗಿಫ್ಟ್‌ಗಳನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಐಷಾರಾಮಿ ಬ್ಯಾಗ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

Latest Videos

click me!