'ಗಟ್ಟಿಮೇಳ' ಧಾರಾವಾಹಿಯ ಪಾತ್ರಧಾರಿ ಧ್ರುವ ಅಲಿಯಾಸ್ ರಂಜನ್.
ಹುಟ್ಟಿದ್ದು ಮಂಡ್ಯದಲ್ಲಿ, ವಿದ್ಯಾಭ್ಯಾಸವೂ ಅಲ್ಲಿಯೇ.
2017ರಲ್ಲಿ ನಾಗಾಭರಣ ಅವರ ಅಭಿನಯ ಶಾಲೆಗೆ ಸೇರಿಕೊಂಡು, ತರಬೇತಿ ಪಡೆದಿದ್ದಾರೆ.
2018ರಲ್ಲಿ ಅನೇಕ ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಧ್ರುವ ಪಾತ್ರದಿಂದ ರಂಜನ್‌ಗೆ ಈಗಾಗಲೇ ಹಲವು ಸಿನಿಮಾ ಆಫರ್‌ಗಳು ಬಂದಿವೆ.
ಸಿನಿಮಾ ಇಂಡಸ್ಟ್ರಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಭಿನಯದಿಂದ ಪ್ರೇರಣೆಯಾಗಿದ್ದಾರೆ.
ಈ ಹಿಂದೆ ಇಷ್ಟದೇವತೆ ಧಾರಾವಾಹಿಯಲ್ಲಿ ಲೀಡ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ವಸಿಷ್ಠ ದೇಶಾದ್ರಿ ಪಾತ್ರವೂ ಹೆಚ್ಚಿನ ಫೇಮ್ ತಂದುಕೊಟ್ಟಿತ್ತು ಈ ನಟನಿಗೆ.
ಗಟ್ಟಿಮೇಳ ಧಾರಾವಾಹಿ ವೃತ್ತಿ ಜೀವನದಲ್ಲಿ ಬಿಗ್ ಬ್ರೇಕ್ ನೀಡಿದಂತಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರಂಜನ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.