ನಟ ರಕ್ಷ್ (Rakksh) ಮತ್ತು ಬಾಳಸಂಗಾತಿ ಅನುಷಾ (Anusha) ಮೊದಲ ಬಾರಿ ಭೇಟಿ ಮಾಡಿದ್ದು, ಕಾಲೇಜ್ ಫೆಸ್ಟ್‌ನಲ್ಲಿ. ಪಿಯುಸಿಯನ್ನು (PUC) ಇಬ್ಬರೂ ಬೇರೆ ಕಾಲೇಜ್‌ನಲ್ಲಿ ವ್ಯಾಸಂಗ ಮಾಡಿದ್ದರು. ಆದರೆ ಆಕಸ್ಮಿಕವಾಗಿ ಲಾ ಓದುವಾಗ ಒಂದೇ ಕಾಲೇಜ್‌ನಲ್ಲಿದ್ದರು.
ಅನುಷಾ ಕಾಲೇಜ್‌ಗೆ ಹೋಗುತ್ತಿರಲಿಲ್ಲ ಅಂದ್ರೆ ರಕ್ಷ್ ಕೂಡ ಹೋಗುತ್ತಿರಲಿಲ್ಲ. ಹೀಗೆ ತಮ್ಮ ಸಂಪೂರ್ಣ ಲವ್ ಸ್ಟೋರಿಯನ್ನು (Love story) ಕನ್ನಡ ಖಾಸಗಿ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ನಾವಿಬ್ಬರೂ ಡೇಟ್‌ಗೆ ಹೋಗಿಲ್ಲ. ಹೆಚ್ಚಿನ ಸಮಯವನ್ನು ರಕ್ಷ್ ಇಷ್ಟ ಪಡುವ ಗ್ಯಾರೇಜ್‌ನಲ್ಲಿ (Mechanical Garage) ಇರುತ್ತಿದ್ದೆವು. ನೀವು ಕೇಳಿ ಬೆಂಗಳೂರಿನಲ್ಲಿ ಯಾವ ಕಾರು, ಯಾವ ಬೈಕ್‌ಗೆ, ಯಾವಾಗ ಸರ್ವಿಸ್ ಬೇಕು, ಎಂದು ನಾನು ನಿಮಗೆ ಹೇಳುತ್ತೇನೆ, ಎಂದು ಅನುಷಾ ಹೇಳಿದ್ದಾರೆ. ರಕ್ಷ್‌ಗೆ ರೇಸಿಂಗ್ (Racing) ಅಂದ್ರೆ ಸಿಕ್ಕಾಪಟ್ಟೆ ಕ್ರೇಜ್ ಅಂತೆ.
ನಾವು ಸ್ನೇಹಿತರಾಗುವುದಕ್ಕಿಂತ ಮೊದಲು ರಕ್ಷ್ ನನಗೆ ಮೆಸೇಜ್ ಮಾಡುತ್ತಾರೆ. ಅವತ್ತು ಅವರ ಕಾಲೇಜ್‌ಗೆ ಬಂದಿರಲಿಲ್ಲ. ನಾನು ಸುತ್ತಿ ಬಳಸಿ ಮಾತನಾಡುವುದಿಲ್ಲ. ಆದರೆ ಒಂದು ದಿನ ನಾನು ನಿಮ್ಮನ್ನು ಮದುವೆ (Wedding) ಆಗುತ್ತೀನಿ, ಎಂದು ಕಳುಹಿಸಿದ್ದರು ಎಂದು ಅನುಷಾ ಹೇಳಿದ್ದಾರೆ.
ಅನುಷಾ ಮತ್ತು ರಕ್ಷ್ ಇಬ್ಬರಿಗೂ Maths ಇಷ್ಟ ಇಲ್ವಂತೆ. ಇಬ್ಬರು ಲಾ (Law) ವ್ಯಾಸಂಗ ಮಾಡಿದ್ದಾರೆ. Montessoriನಲ್ಲಿ ಟೀಚರ್ ಆಗಿ ಅನುಷಾ ಕೆಲಸ ಮಾಡುತ್ತಿದ್ದಾರೆ. ರಕ್ಷ್ ಬಣ್ಣದ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ಪೋಷಕರಿಗೆ ನಾವು ಪ್ರೀತಿ ಹೇಳಿಕೊಂಡಾಗ, ಕೊಂಚ ಸಮಯ ತೆಗೆದುಕೊಂಡರು. ನಾವು ವೃತ್ತಿ ಜೀವನದಲ್ಲಿ ಬೆಳೆಯುವುದನ್ನು ನೋಡಿದ್ದರು. ನಾವು ಇಷ್ಟು ವರ್ಷ ಜೊತೆಗಿದ್ದನ್ನು ನೋಡಿ ಒಪ್ಪಿಕೊಂಡಿದ್ದಾರೆ. ಇವತ್ತು ನನ್ನ ತಂದೆ ಮತ್ತು ರಕ್ಷ್ ಬೆಸ್ಟ್ ಫ್ರೆಂಡ್ಸ್ ಎಂದು ಹೇಳಿದ್ದಾರೆ.