Aishwarya Salimath Engaged: ಗೆಳೆಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ 'ಅಗ್ನಿಸಾಕ್ಷಿ' ನಟಿ ಐಶ್ವರ್ಯಾ ಸಾಲಿಮಠ!

First Published | Feb 18, 2022, 12:02 PM IST

ಪ್ರೇಮಿಗಳ ದಿನದಂದು ಗೆಳೆಯನ್ನೊಟ್ಟಿಗೆ ನಿಶ್ಚಿತಾರ್ಥ ಮಾಡಿಕೊಂಡ ಅಗ್ನಿಸಾಕ್ಷಿ ನಟಿ ಐಶ್ವರ್ಯಾ. ಸಮಾರಂಭದಲ್ಲಿ ಕೆಂಪು ಗೌನ್‌ನಲ್ಲಿ ಮಿಂಚಿದ ಸುಂದರಿ.

'ಸರಯೂ' ಧಾರಾವಾಹಿ ಮೂಲಕ ಬಣ್ಣದ ಜರ್ನಿ ಆರಂಭಿಸಿದ ಐಶ್ವರ್ಯಾಗೆ ಬ್ರೇಕ್ ಕೊಟ್ಟಿದ್ದು ಅಗ್ನಿಸಾಕ್ಷಿ. ತನು ಪಾತ್ರದ ಮೂಲಕ ವೀಕ್ಷಕರಿಗೆ ಹತ್ತಿರವಾಗಿದ್ದರು.

ಪ್ರೇಮಿಗಳ ದಿನ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ ವ್ಯಾಲೆಂಟೈನ್‌ ಅನ್ನು ಆಭಿಮಾನಿಗಳಿಗೆ ಪರಿಚಯಿಸಿಕೊಟ್ಟಿದ್ದಾರೆ. ಫೋಟೋಶೂಟ್‌ ಮೂಲಕ ಹುಡಗ ಯಾರೆಂದು ರಿವೀಲ್ ಮಾಡಿದ್ದಾರೆ.

Tap to resize

 'ನೀನು ಮತ್ತು ನಾನು ಸೇರಿಕೊಂಡು ನಾವಾಗಿರುವುದಕ್ಕೆ ಸಂತೋಷವಿದೆ. ಕೊನೆಗೂ ಬೆಸ್ಟ್‌ಫ್ರೆಂಡ್‌ ಜೊತೆ ಎಂಗೇಜ್ ಆಗಿರುವೆ,' ಎಂದು ಐಶ್ವರ್ಯಾ ಬರೆದುಕೊಂಡಿದ್ದಾರೆ. 

ಐಶ್ವರ್ಯಾ ಕೆಂಪು ಬಣ್ಣದ ಗೌನ್ ಧರಿಸಿದ್ದಾರೆ, ವಿನಯ್ ಬ್ಲ್ಯಾಕ್ ಆ್ಯಂಡ್ ವೈಟ್ ಸೂಟ್‌ನಲ್ಲಿ ಮಿಂಚುತ್ತಿದ್ದಾರೆ. ಇಬ್ಬರೂ ಉಂಗುರ ಹಿಡಿದುಕೊಂಡು ಪೋಸ್ ಕೊಟ್ಟಿದ್ದಾರೆ. 

 'ನಮ್ಮಿಬ್ಬರ ಕನಸು ನನಸಾಗಲು ನಿಶ್ಚಿತಾರ್ಥ ಮೊದಲ ಹೆಜ್ಜೆಯಾಗುತ್ತದೆ,' ಎಂದಿದ್ದಾರೆ ಐಶ್ವರ್ಯಾ. ಸೋಷಿಯಲ್ ಮೀಡಿಯಾದಲ್ಲಿ ಈ ಜೋಡಿಗೆ ಶುಭಾಯಗಳು ಮಹಾಪೂರವೇ ಹರಿದು ಬರುತ್ತಿದೆ. 

'ನೀವು ನನ್ನನ್ನು ನೋಡುವ ರೀತಿ, ನನ್ನ ಮನಸ್ಸನ್ನು ಕರಗಿಸುತ್ತದೆ,' ಎಂದು ವಿನಯ್‌ ಅವರನ್ನು ತಬ್ಬಿ ಕೊಂಡಿರುವ ಫೋಟೋ ಹಾಕಿದ್ದಾರೆ. ಚಂದನಾ ಗೌಡ ಅವರು ಐಶ್ವರ್ಯಾ ಉಡುಪು ಡಿಸೈನ್ ಮಾಡಿದ್ದಾರೆ.

Latest Videos

click me!