ಮೂಲತಃ ಸಾಗರದವರಾದ ಅನ್ವಿತಾ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದು ನಿರೂಪಕಿಯಾಗಿ.
ಮಂಗಳೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅನ್ವಿತಾ, ಅಭಿನಯದಲ್ಲಿ ಎತ್ತಿದ ಕೈ.
ಎಂಬಿಎ ಪದವಿ ನಂತರ 'ನಮ್ಮ ಟಿವಿ' ಎಂಬ ಲೋಕಲ್ ಚಾನಲ್‌ನಲ್ಲಿ ನಿರೂಪಕಿಯಾಗಿ ಕೆಲಸ ಶುರು ಮಾಡಿದರು.
'ಗಟ್ಟಿಮೇಳ' ಧಾರಾವಾಹಿಯಲ್ಲಿ ಆದ್ಯಾ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
ವೇದಾಂತ್ ಫೇವರೆಟ್ ಅಕ್ಕ, ಪತಿಗೆ ಮುದ್ದಿನ ಪತ್ನಿ ಹಾಗೂ ನಾದಿನಿಗೆ ಬೆಸ್ಟ್ ಗೈಡ್ ಆಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ಅನ್ವಿತಾಗೆ ರಿಯಲ್ ಲೈಫಲ್ಲೂ ಅಣ್ಣನ ಕಂಡರೆ ಪಂಚ್ ಪ್ರಾಣವಂತೆ. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅಣ್ಣ ಅನೂಪ್ ಸಾಗರ್ ಅನೇಕ ಬಾರಿ ನಟನಾ ಟಿಪ್ಸ್ ನೀಡುತ್ತಾರಂತೆ.
'ದಂಡ್' ಎಂದು ತುಳು ಚಿತ್ರದ ಮೂಲಕ ಮೊದಲ ಬಾರಿ ನಟಿಯಾಗಿ ತೆರೆ ಮೇಲೆ ಕಾಣಿಸಿಕೊಂಡರು.
ಮಂಗಳೂರಿನಲ್ಲಿರುವ ಕೆಫೆವೊಂದರ ಓನರ್ ಈ ಅನ್ವಿತಾ. ಸಿಂಗಲ್ ಆಗಿರುವ ಅನ್ವಿತಾಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫ್ಯಾನ್ ಪೇಜ್‌ಗಳಿವೆ.
1 ಲಕ್ಷಕ್ಕೂ ಹೆಚ್ಚು ಫಾಲೋಯರ್ಸ್ ಹೊಂದಿರುವ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅನ್ವಿತಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು.
Suvarna News