ಇಬ್ಬರು ಪತ್ನಿಯರನ್ನ ಒಟ್ಟಿಗೆ ಗರ್ಭಿಣಿ ಮಾಡಿ ಸುದ್ದಿಯಾಗಿದ್ದ ಅರ್ಮಾನ್ ಮಲಿಕ್ ಹೆಂಡತಿ ಮತ್ತೊಮ್ಮೆ ಗರ್ಭಿಣಿ!

Published : Sep 12, 2023, 11:10 AM ISTUpdated : Sep 12, 2023, 11:11 AM IST

ಇತ್ತೀಚಿಗೆ ಎರಡೂ ಪತ್ನಿಯನ್ನು ಒಟ್ಟಿಗೇ ಗರ್ಭಿಣಿ ಮಾಡಿ ಸುದ್ದಿಯಾಗಿದ್ದ ಜನಪ್ರಿಯ ಯೂಟ್ಯೂಬರ್ ಅರ್ಮಾನ್ ಮಲಿಕ್ (Armaan Malik) ತಮ್ಮ 5 ನೇ ಮಗುವಿಗೆ ಮತ್ತೊಮ್ಮೆ ತಂದೆಯಾಗಲು ರೆಡಿಯಾಗಿದ್ದಾರೆ.  20 ದಿನಗಳಲ್ಲಿ ಮೂರು ಮಕ್ಕಳ ತಂದೆಯಾಗಿ ಇತ್ತೀಚೆಗಷ್ಟೇ ಸುದ್ದಿಯಾಗಿದ್ದರು. ಇದೀಗ ಮತ್ತೆ ಅವರ ಎರಡನೇ ಪತ್ನಿ ಕೃತಿಕಾ ಎರಡನೇ ಬಾರಿಗೆ ತಾಯಿಯಾಗುತ್ತಿದ್ದಾರೆ. ಅರ್ಮಾನ್ ಮಲಿಕ್‌ಗೆ ಪ್ರಸ್ತುತ ನಾಲ್ಕು ಮಕ್ಕಳಿದ್ದಾರೆ, ಪಾಯಲ್‌ಗೆ ಮೂವರು ಮತ್ತು ಕೃತಿಕಾ 1 ಮಗುವಿದೆ.

PREV
18
ಇಬ್ಬರು ಪತ್ನಿಯರನ್ನ ಒಟ್ಟಿಗೆ ಗರ್ಭಿಣಿ ಮಾಡಿ ಸುದ್ದಿಯಾಗಿದ್ದ ಅರ್ಮಾನ್ ಮಲಿಕ್ ಹೆಂಡತಿ ಮತ್ತೊಮ್ಮೆ ಗರ್ಭಿಣಿ!

ಯುಟ್ಯೂಬರ್ ಅರ್ಮಾನ್ ಮಲಿಕ್ ಅವರಿಗೆ ಇಬ್ಬರು ಪತ್ನಿಯರಿದ್ದಾರೆ. ಅವರು 2011 ರಲ್ಲಿ ಪಾಯಲ್ ಮಲಿಕ್ ಅವರನ್ನು ವಿವಾಹವಾದರು. ಈ ಮದುವೆಯಿಂದ ಅವರಿಗೆ ಮೂವರು ಮಕ್ಕಳಿದ್ದಾರೆ.  ದೊಡ್ಡ ಮಗನಿಗೆ ಅವನಿಗೆ ಚಿರಾಯು ಎಂದು ಹೆಸರಿಟ್ಟಿದ್ದಾರೆ.

28

 ಮದುವೆಯಾದ 7 ವರ್ಷಗಳ ನಂತರ, ಅರ್ಮಾನ್ 2018 ರಲ್ಲಿ ಕೃತಿಕಾ ಮಲಿಕ್ ಅವರನ್ನು ವಿವಾಹವಾದರು. ತಮಾಷೆಯೆಂದರೆ ಕೃತಿಕಾ ಅರ್ಮಾನ್ ಅವರ ಮೊದಲ ಪತ್ನಿ ಪಾಯಲ್ ಅವರ ಸ್ನೇಹಿತೆಯಾಗಿದ್ದು, ಅರ್ಮಾನ್ ಅವರನ್ನು ವಿವಾಹವಾದರು. ಅದಾದ ಬಳಿಕ ಪತ್ನಿಯರಿಬ್ಬರೂ ಒಟ್ಟಿಗೆ ಗರ್ಭಿಣಿಯಾದರು.

38

ಕೆಲವು ತಿಂಗಳ ಹಿಂದೆಯಷ್ಷೇ ಕೃತಿಕಾಗೆ ಗಂಡು ಮಗು ಜನಿಸಿತ್ತು. 20 ದಿನದೊಳಗೆ ಮೊದಲ ಪತ್ನಿ  ಪಾಯಲ್ ಮಲಿಕ್ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಹೀಗಾಗಿ ಒಂದೇ ಬಾರಿಗೆ ಮೂರು ಮಕ್ಕಳ ತಂದೆಯಾಗಿದ್ದರು. ಇದೀಗ ಎರಡನೇ ಬಾರಿಗೆ ಎರಡನೇ ಪತ್ನಿ ಕೃತಿಕಾ ತಾಯಿಯಾಗುತ್ತಿದ್ದಾರೆ. 

 

48

ಈ ಶುಭ ಸುದ್ದಿಯನ್ನು  ತಮ್ಮ ಫಾಲೋವರ್ಸ್ ಜೊತೆಗೆ ಯೂಟ್ಯೂಬ್‌ ನಲ್ಲಿ ಹಂಚಿಕೊಂಡಿದ್ದಾರೆ. ಕೃತಿಕಾ ಮಲಿಕ್ ಈ ಶುಭ ಸುದ್ದಿಯನ್ನು ಮೊದಲು ತಮ್ಮ ಅಭಿಮಾನಿಗಳೊಂದಿಗೆ ವ್ಲಾಗ್‌ನಲ್ಲಿ ಹಂಚಿಕೊಂಡಿದ್ದಾರೆ.

58

ನಂತರ, ಅವಳು ಅರ್ಮಾನ್ ಮಲಿಕ್ ಬಳಿಗೆ ಹೋಗುತ್ತಾಳೆ ಮತ್ತು ತಾನು ಮತ್ತೆ ತಾಯಿಯಾಗಲಿದ್ದೇನೆ ಎಂದು ಹೇಳುತ್ತಾಳೆ. ಈ ಸುದ್ದಿಯಿಂದ ಅರ್ಮಾನ್ ತುಂಬಾ ಖುಷಿಯಾಗಿದ್ದಾರೆ. ಕೃತಿಕಾ ಅವರ ಎರಡನೇ ಗರ್ಭಧಾರಣೆಯ ಸುದ್ದಿ ಎಲ್ಲರನ್ನು ಬೆರಗುಗೊಳಿಸಿದೆ.

68

ಕೃತಿಕಾ ಈ ಸುದ್ದಿಯನ್ನು ಮೊದಲು ಹಂಚಿಕೊಂಡಾಗ ಅರ್ಮಾನ್ ಮಲಿಕ್ ಅವರ ಮೊದಲ ಪತ್ನಿ ಪಾಯಲ್ ಮಲಿಕ್ ಇದನ್ನು ನಂಬಲಿಲ್ಲ. ಕೃತಿಕಾ ಮತ್ತೆ ಗರ್ಭಿಣಿಯಾಗಿದ್ದಾಳೆ ಎಂದು ಅರ್ಮಾನ್ ಖಚಿತಪಡಿಸಿದಾಗ, ಪಾಯಲ್ ಅಂತಿಮವಾಗಿ ಅದನ್ನು ನಂಬಿದರು ಮತ್ತು ಸಂತೋಷದಿಂದ ಕುಣಿದರು.  

78

2023ರ ಎಪ್ರಿಲ್‌ ತಿಂಗಳಲ್ಲಿ 20 ದಿನಗಳ ಅಂತರದಲ್ಲಿ ಇಬ್ಬರೂ ಪತ್ನಿಯರು ಕೂಡ ಮಕ್ಕಳಿಗೆ ಜನ್ಮ ನೀಡಿದರು. ಎರಡನೇ ಪತ್ನಿ ಕೃತಿಕಾ ಎಪ್ರಿಲ್‌ ಎರಡನೇ ವಾರದಲ್ಲಿ ಗಂಡು ಮಗುವಿಗೆ ಜನ್ಮ ನೀಡದರೆ. ಮೊದಲ ಪತ್ನಿ ಪಾಯಲ್ ಎಪ್ರಿಲ್ ಕೊನೆಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಈಗ ಎರಡನೇ ಪತ್ನಿ ಮತ್ತೆ ಗರ್ಭಿಣಿಯಾಗಿದ್ದಾರೆ. ಇವರ ಯೂಟ್ಯೂಬ್‌ ವ್ಲಾಗ್‌ ಗೆ ಇಷ್ಟು ಬೇಗ ಇನ್ನೊಂದು ಮಗುನಾ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

88

ಅರ್ಮಾನ್‌ನ ಪತ್ನಿಯರಿಬ್ಬರೂ ಒಟ್ಟಿಗೆ ಗರ್ಭಿಣಿಯಾದಾಗ (Pregnant) ಜನರು ನಾನಾ ಪ್ರಶ್ನೆಗಳನ್ನು ಎತ್ತತೊಡಗಿದರು. ಇದರಿಂದಾಗಿ ಅರ್ಮಾನ್ ಮತ್ತು ಅವರ ಪತ್ನಿಯರು ಕೂಡ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರು. 2023 ಫೆಬ್ರವರಿಯಲ್ಲಿ ಅರ್ಮಾನ್ ಮಲಿಕ್ ಇಬ್ಬರೂ ಪತ್ನಿಯರ ಸೀಮಂತ ಸಮಾರಂಭವನ್ನು ಆಯೋಜಿಸಿದ್ದರು. ಈ ಸಮಾರಂಭದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್ ಆಗಿದ್ದವು. 

Read more Photos on
click me!

Recommended Stories