ಉರ್ಫಿಯ ಹೊಸ ಉಡುಗೆಯಿಂದ ಸೌಂದರ್ಯ ಡಬಲ್, ಟೀಕೆ ಬದಲು ಮೆಚ್ಚೆಗೆಯ ಸುರಿಮಳೆ!

Published : Sep 11, 2023, 07:44 PM IST

ಮಾಡೆಲ್ ಕಮ್ ನಟಿ ಉರ್ಫಿ ಜಾವೇದ್ ದಿನಕ್ಕೊಂದು ಫ್ಯಾಶನ್ ಪ್ರದರ್ಶಿಸಿ ಸುದ್ದಿಯಲ್ಲಿರುತ್ತಾರೆ. ಸೆಕ್ಸಿ ಡ್ರೆಸ್, ಚಿತ್ರ ವಿಚಿತ್ರ ಫ್ಯಾಶನ್‍‌ನಿಂದ ಸದ್ದು ಮಾಡುವ ಉರ್ಫಿ  ಈ ಬಾರಿಯ ಡ್ರೆಸ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹೊಸ ಫ್ಯಾಶನ್ ಉರ್ಫಿ ಸೌಂದರ್ಯ ಹೆಚ್ಚಿಸಿದೆ ಎಂದು ಕಮೆಂಟ್ ಮಾಡಿದ್ದಾರೆ.

PREV
17
ಉರ್ಫಿಯ ಹೊಸ ಉಡುಗೆಯಿಂದ ಸೌಂದರ್ಯ ಡಬಲ್, ಟೀಕೆ ಬದಲು ಮೆಚ್ಚೆಗೆಯ ಸುರಿಮಳೆ!

ಉರ್ಫಿ ಜಾವೇದ್  ತಮ್ಮ ಅರೆಬರೆ ಬಟ್ಟೆಗಳಿಂದಲೇ ಫೇಮಸ್ ಆಗಿದ್ದಾರೆ. ಕಲ್ಪನೆಗೂ  ಮೀರಿದ ಫ್ಯಾಶನ್ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ಹಾಗೂ ಟೀಕೆ ಎರಡನ್ನು ಎದುರಿಸುತ್ತಿದ್ದಾರೆ.

27

ಉರ್ಫಿ ಜಾವೇದ್ ಡ್ರೆಸ್ ಇತ್ತೀಚೆಗೆ ಅಕ್ವೇರಿಯಂ ಬ್ರಾ, ಶರ್ಟ್ ಕಾಲರ್ ಗೌನ್ ಸೇರಿದಂತೆ ಹೊಸ ಹೊಸ ಡ್ರೆಸ್ ಮೂಲಕ ಪ್ರತ್ಯಕ್ಷರಾಗಿ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಆದರೆ ಈ ಬಾರಿಯ ಉರ್ಫಿ ಡ್ರೆಸ್ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

37

ಮೈಗಂಟಿದ ನೀಲಿ ಹೂವು ಮಿಶ್ರಿತ ಬಿಳಿ ಬಟ್ಟೆ ಧರಿಸಿದ ಉರ್ಫಿ ಡೀಸೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.  ಉರ್ಫಿಯ ಈ ಡ್ರೆಸ್ ಸೌಂದರ್ಯ ಹೆಚ್ಚಿಸಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

47

ಹೊಸ ಫ್ಯಾಶನ್ ಡ್ರೆಸ್ ಮೂಲಕ ಒಂದೆರೆಡು ಹೆಜ್ಜೆ ಹಾಕಿರುವ ಉರ್ಫಿ ಜಾವೇದ್ ತಮ್ಮ ಬ್ಯಾಕ್‌ಲೆಸ್ ತೋರಿಸಿ ಸಾಮಾಜಿಕ ಜಾಲತಾಣದ ಬಿಸಿ ಏರಿಸಿದ್ದಾರೆ.

57

ಹೊಸ ಫ್ಯಾಶನ್ ಮೂಲಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಉರ್ಫಿ ರೆಸ್ಟೋರೆಂಟ್‌ನಲ್ಲಿ ಒಂದಿಷ್ಟು ತನಿಸು ಸವಿದಿದ್ದಾರೆ. ಉರ್ಫಿಯ ಹೊಸ ಔಟ್‌ಫಿಟ್ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.

67

ಈ ರೀತಿಯ ಡ್ರೆಸ್ ಉರ್ಫಿಯ ಅಂದ ಹೆಚ್ಚಿಸಿದೆ ಎಂದು ಬಹುತೇಕರು ಕಮೆಂಟ್ ಮಾಡಿದ್ದಾರೆ. ನೆಗಟೀವ್ ಕಮೆಂಟ್ ಕೂಡ ವ್ಯಕ್ತವಾಗಿದೆ. ಫುಲ್ ಡ್ರೆಸ್ ಹಾಕಿದರೂ ನೋಡಲು ಇನ್ನೇನು ಬಾಕಿ ಇದೆ ಎಂದು ಕಮೆಂಟ್ ಮಾಡಿದ್ದಾರೆ.

77

ಏಷ್ಟು ಸುಂದರವಾಗಿ ಕಾಣುತ್ತಿದ್ದೀರಿ? ಈ ರೀತಿಯ ಡ್ರೆಸ್ ನಿಮಗೆ ಹೊಂದಿಕೊಳ್ಳುತ್ತಿದೆ.  ಚಿತ್ರ ವಿಚಿತ್ರ ಫ್ಯಾಶನ್ ಮೂಲಕ ಟೀಕೆಗೆ ಗುರಿಯಾಗುವುದಕ್ಕಿಂತ ಇಂತಹ ಡ್ರೆಸ್ ಮೂಲಕ  ಕಾಣಿಸಿಕೊಳ್ಳಿ ಎಂದು ಹಲವರು ಸಲಹೆ ನೀಡಿದ್ದಾರೆ.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories