ತಾಳಿ ತೆಗೆದ ಮಧುಶ್ರೀ ಗೌಡ, ಯಜಮಾನ ಸೀರಿಯಲ್‌ ಕೊನೆಯಲ್ಲಿದ್ಯಾ ಟ್ವಿಸ್ಟ್?

Published : Mar 06, 2026, 12:35 PM IST

Yajamana Serial : ಪುರುಷರನ್ನು ದ್ವೇಷಿಸುವ ಹೆಣ್ಣಿಗೆ, ಹೆಣ್ಣು ಮಕ್ಕಳನ್ನು ಪೂಜಿಸುವ ಗಂಡೇ ಯಜಮಾನನಾಗುವ ಥೀಮ್ ನಲ್ಲಿ ಬಂದ ಸೀರಿಯಲ್ ಯಜಮಾನ. ಹಿಂದಿನ ವರ್ಷ ಬಿಗ್ ಬಾಸ್ ಸೀಸನ್ 10 ಮುಗಿಯುತ್ತಿದ್ದಂತೆ ಯಜಮಾನ ಸೀರಿಯಲ್ ಶುರುವಾಗಿತ್ತು. ಈಗ ಸೀರಿಯಲ್ ಅಂತಿಮ ಹಂತದಲ್ಲಿದೆ.

PREV
17
ಸೀರಿಯಲ್ ಕೊನೆ ಶೂಟಿಂಗ್

ಸೀರಿಯಲ್ ತಂಡ ಕೊನೆ ದಿನದ ಶೂಟಿಂಗ್ ಮುಗಿಸಿದೆ. ಅದ್ರ ವಿಡಿಯೋಗಳನ್ನು ಯಜಮಾನ ಸೀರಿಯಲ್ ನಲ್ಲಿ ಝಾನ್ಸಿ ಪಾತ್ರ ಮಾಡ್ತಿದ್ದ ಮಧುಶ್ರೀ ಭೈರಪ್ಪ ಹಂಚಿಕೊಂಡಿದ್ದಾರೆ. ಯಜಮಾನ ಸೀರಿಯಲ್ ಕೊನೆ ದಿನ ಅಂತ ಮಧುಶ್ರೀ ಭೈರಪ್ಪ ಶೀರ್ಷಿಕೆ ಹಾಕಿದ್ದಾರೆ.

27
ಭಾವುಕರಾದ ಕಲಾವಿದರು

ಸೀರಿಯಲ್ ಸೆಟ್ ನಲ್ಲಿ ಮಸ್ತಿ ಮಾಡ್ತಾ ಇಷ್ಟು ದಿನ ಒಂದಾಗಿದ್ದ ಕಲಾವಿದರು ಈಗ ದೂರವಾಗುವ ಸಮಯ ಬಂದಿದೆ. ಯಜಮಾನ ಕೊನೆ ದಿನದ ಶೂಟಿಂಗ್ ಸಂದರ್ಭದಲ್ಲಿ ಅನೇಕ ಕಲಾವಿದರು ಭಾವುಕರಾಗಿದ್ದಾರೆ. ಝಾನ್ಸಿ, ಅನಿತಾ ಹಾಗೂ ರಾಘು ತಂಗಿ ಭಾವುಕರಾಗಿರೋದನ್ನು ವಿಡಿಯೋದಲ್ಲಿ ನೋಡ್ಬಹುದು.

37
ತಾಳಿ ತೆಗೆದ ಮಧುಶ್ರೀ ಭೈರಪ್ಪ

ಮಧುಶ್ರೀ ಬೈರಪ್ಪ ಹಂಚಿಕೊಂಡಿರುವ ವಿಡಿಯೋದಲ್ಲಿ ರಾಘವೇಂದ್ರ ಅಲಿಯಾಸ್ ಹರ್ಷ ಸೇರಿದಂತೆ ಎಲ್ಲ ಕಲಾವಿದರು ನಗ್ತಾ, ತಮ್ಮ ಕೊನೆ ಶೂಟಿಂಗ್ ಮುಗಿಸಿದ್ದಾರೆ. ಸೆಟ್ ನಲ್ಲಿ ಮೋಜು ಮಾಡ್ತಿದ್ದವರ ಕಣ್ಣುಗಳು ಶೂಟಿಂಗ್ ಮುಗಿಯುತ್ತಿದ್ದಂತೆ ತುಂಬಿಕೊಂಡಿವೆ. ರಾಘು ಕೂಡ ಭಾವುಕರಾಗಿದ್ದಾರೆ. ರಾಘು ಮದುವೆಯಾಗಿರುವ ಝಾನ್ಸಿ ಶೂಟಿಂಗ್ ಮುಗಿಯುತ್ತಿದ್ದಂತೆ ಕತ್ತಿಗೆ ಹಾಕಿದ್ದ ತಾಳಿ ತೆಗೆದಿದ್ದಾರೆ.

47
ಯಜಮಾನ ಸೀರಿಯಲ್ ಕಥೆ

ಯಜಮಾನ ಸೀರಿಯಲ್ ನಲ್ಲಿ ಝಾನ್ಸಿ, ತಾತನ ಆಸ್ತಿಗಾಗಿ ನಕಲಿ ಮದುವೆ ಆಗ್ತಾಳೆ. ಆದ್ರೆ ರಾಘು ಪ್ರೀತಿಯಲ್ಲಿ ಬೀಳುವ ಝಾನ್ಸಿಗೆ ಅನಿತಾ ಅಡ್ಡಿಯಾಗ್ತಾಳೆ. ಏನೇ ಪ್ರಯತ್ನ ಮಾಡಿದ್ರೂ ರಾಘು ಹಾಗೂ ಅನಿತಾರನ್ನು ಬೇರೆ ಮಾಡಲಾಗದೆ ದೂರ ಹೋಗುವ ಝಾನ್ಸಿಗೆ ಅತ್ತೆಯೇ ವಿಲನ್ ಆಗಿರ್ತಾಳೆ. ಅನಿತಾ ಸ್ವಭಾವ ತಿಳಿಯುವ ರಾಘು, ಅನಿತಾ ಜೊತೆಗಿನ ಮದುವೆ ಮುರಿದುಕೊಂಡು ಝಾನ್ಸಿ ಬಳಿ ಬಂದ್ರೂ ಪ್ರಯೋಜನ ಆಗೋದಿಲ್ಲ. ಝಾನ್ಸಿಗೆ ತನ್ನ ಮದುವೆಯಾಗಿದ್ದೇ ನೆನಪಿರೋದಿಲ್ಲ. ಸದ್ಯ ಝಾನ್ಸಿಗೆ ನೆನಪಿನ ಶಕ್ತಿ ವಾಪಸ್ ಬಂದಿದೆ. ರಾಘು ಮನೆಗೆ ಆಕೆ ವಾಪಸ್ ಆಗಿದ್ದಾಳೆ.

57
ಸಂಗೀತಾ ಲವ್ ಸ್ಟೋರಿ

ಸದ್ಯ ತರುಣ್ ಹಾಗೂ ಸಂಗೀತಾ ಲವ್ ಸ್ಟೋರಿ ನಡೆಯುತ್ತಿದೆ. ಸಂಗೀತಾ ಪ್ರೀತಿಗೆ ಝಾನ್ಸಿ ಒಪ್ಪಿಗೆ ನೀಡ್ತಾಳಾ ಎಂಬುದು ಇಂದು ಗೊತ್ತಾಗಬೇಕಿದೆ. ಸೀರಿಯಲ್ ಮುಕ್ತಾಯ ಹೇಗೆ ಮಾಡ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಿಗಿದೆ.

67
ಫ್ಯಾನ್ಸ್ ಬೇಸರ

ಯಜಮಾನ ಸೀರಿಯಲ್ ಪ್ರತಿ ದಿನ ಸಂಜೆ 6 ಗಂಟೆಗೆ ಪ್ರಸಾರ ಆಗ್ತಿತ್ತು. ಸೀರಿಯಲ್ ಕೊನೆ ದಿನದ ಶೂಟಿಂಗ್ ವಿಡಿಯೋವನ್ನು ಮಧುಶ್ರೀ ಪೋಸ್ಟ್ ಮಾಡ್ತಿದ್ದಂತೆ ವೀಕ್ಷಕರು ಬೇಸರಗೊಂಡಿದ್ದಾಳೆ. ಒಳ್ಳೆ ಸೀರಿಯಲ್ ಮುಗಿತಿರೋದು ಬೇಸರ ತಂದಿದೆ ಎಂದಿದ್ದಾರೆ.

77
ಸಂಜೆ ಆರು ಗಂಟೆಗೆ ಬರಲಿದೆ ರಾಣಿ

ಮುಂದಿನ ಸೋಮವಾರದಿಂದ ಸಂಜೆ ಆರು ಗಂಟೆಗೆ ಯಜಮಾನ ಬರೋದಿಲ್ಲ. ಮಾರ್ಚ್ 9 ರಿಂದ ರಾಣಿ ಸೀರಿಯಲ್ ಪ್ರಸಾರವಾಗಲಿದೆ. ಜೈಲಿನಲ್ಲಿರುವ ಅಮ್ಮ, ಜೈಲಿನಲ್ಲಿ ಇಷ್ಟು ದಿನ ಅಮ್ಮನ ಜೊತೆ ಕಳೆದು ಹೊರ ಪ್ರಪಂಚಕ್ಕೆ ಬರ್ತಿರುವ ಮಗಳ ಕಥೆ ಇದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories