ಅದೊಂದು ಜಗಳಕ್ಕೆ The Great Indian Kapil Sharma Show ಬಿಟ್ರಾ ಕಾಮಿಡಿಯನ್ ಕಿಕು ಶಾರದಾ?

Published : Sep 05, 2025, 04:49 PM IST

ಕಪಿಲ್‌ ಶರ್ಮಾ ಅವರ ನೆಟ್‌ಫ್ಲಿಕ್ಸ್‌ ಸಿರೀಸ್‌ 'ದಿ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋ'ನಿಂದ ನಟ, ಕಾಮಿಡಿಯನ್‌ ಕಿಕು ಶಾರದಾ ಅವರು ಹೊರಗಡೆ ಬಂದಿದ್ದಾರೆ ಎನ್ನಲಾಗಿದೆ. ಇದು ಸತ್ಯವೇ? 

PREV
15

ನಟ, ಕಾಮಿಡಿಯನ್‌ ಕಿಕು ಶಾರದಾ ಅವರು ಹೊಸದಾಗಿ ಪ್ರಸಾರ ಆಗಲಿರೋ 'Rise And Fall' ರಿಯಾಲಿಟಿ ಶೋನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು 'ದಿ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋ'ನಿಂದ ಹೊರಗಡೆ ಬಂದಿದ್ದಾರೆ.

25

ಕಪಿಲ್‌ ಶರ್ಮಾ ಸಾರಥ್ಯದ ನೆಟ್‌ಫ್ಲಿಕ್ಸ್‌ ಸಿರೀಸ್‌ 'ದಿ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋ'ನಲ್ಲಿ ಕಿಕು ಶಾರದಾ ಕಾಣಿಸಿಕೊಂಡಿದ್ದರು. ಆ ವೇಳೆ ಸಹನಟ ಕೃಷ್ಣ ಅಭಿಷೇಕ್‌ ಹಾಗೂ ಕಿಕು ಶರ್ಮಾ ಜೊತೆಗೆ ಮನಸ್ತಾಪ ಆಗಿ ಜಗಳ ಆಡಿದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

35

'ದಿ ಗ್ರೇಟ್ ಇಂಡಿಯನ್‌ ಕಪಿಲ್‌ ಶರ್ಮಾ ಶೋ' ತಂಡ ಕೂಡ ಈ ಮಾತನ್ನು ತಳ್ಳಿಹಾಕಿದ್ದು, ಇದೆಲ್ಲ ಸುಳ್ಳು ಎಂದು ಹೇಳಿದೆ. "ಕಿಕು ಜೊತೆಗೆ ಟೀಂಗೆ ಯಾವುದೇ ಸಮಸ್ಯೆ ಇಲ್ಲ. ಈ ರೀತಿ ಅವರು ಹೊರಗಡೆ ಹೋಗೋದು ಇಲ್ಲ. ಕಪಿಲ್‌ ಶೋ ಕಮಿಟ್‌ಮೆಂಟ್‌ ಬಳಿಕವೇ ಅವರು ಇನ್ನೊಂದು ಶೋನಲ್ಲಿ ಭಾಗವಹಿಸುತ್ತಾರೆ ಎಂದು ತಂಡ ಹೇಳಿದೆ.

45

ಈ ಹಿಂದೆ 'ದಿ ಗ್ರೇಟ್ ಇಂಡಿಯನ್‌ ಕಪಿಲ್‌ ಶರ್ಮಾ ಶೋ' BTS ವಿಡಿಯೋದಲ್ಲಿ, ಕಿಕು ಅವರು "ನಾನು ಟೈಮ್‌ ಪಾಸ್‌ ಮಾಡ್ತಿದೀನಾ?" ಅಂತ ಕೇಳ್ತಾರೆ. ಆಗ ಕೃಷ್ಣ ಅಭಿಷೇಕ್‌ "ಓಕೆ, ನೀನು ಮಾಡು, ನಾನು ಹೋಗ್ತೀನಿ" ಎಂದು ಹೇಳುತ್ತಾರೆ. ಆಗ ಕಿಕು ಅವರು, "ನನ್ನನ್ನು ಕರೆದಿದ್ದರೆ ಮೊದಲೇ ನಾನು ಮುಗಿಸಿಕೊಳ್ತೀನಿ" ಎಂದು ಹೇಳಿದ್ದರು. ಹೀಗೆ ಇವರಿಬ್ಬರ ಮಧ್ಯೆ ಜಗಳ ಆಗಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

55

2013ರಿಂದ ಇಲ್ಲಿಯವರೆಗೆ ಕಪಿಲ್‌ ಶರ್ಮಾ ಜೊತೆಗಿನ ಕಾಮಿಡಿ ಶೋನಲ್ಲಿ ಕಿಕು ಶಾರದಾ ಅವರು ಭಾಗಿಯಾಗಿದ್ದಾರೆ. ಇದಕ್ಕೂ ಮೊದಲು ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

Read more Photos on
click me!

Recommended Stories