ಭವ್ಯಾ ಗೌಡ ಅಗ್ರಿಮೆಂಟ್ ಕಾರಣದಿಂದಾಗಿ ಕರ್ಣ ಸೀರಿಯಲ್ ಪ್ರಸಾರಕ್ಕೆ ತಡೆಯಾಗಿದ್ದು, ಅಭಿಮಾನಿಗಳು ಗೌತಮಿ ಜಾದವ್, ಐಶ್ವರ್ಯ ಸಿಂಧೋಗಿಗೆ ಇಲ್ಲದ ರೂಲ್ಸ್ ಭವ್ಯಾ ಗೌಡಗೆ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಕನ್ನಡತಿ ಖ್ಯಾತಿಯ ಕಿರಣ್ ರಾಜ್ (Kiran Raj) ಅಭಿನಯದ ಹೊಚ್ಚ ಹೊಸ ಧಾರಾವಾಹಿ ಕರ್ಣ ತನ್ನ ಪ್ರೊಮೋ ಮೂಲಕ ಭಾರಿ ಸದ್ದು ಮಾಡಿತ್ತು. ಡಾಕ್ಟರ್ ಆಗಿರುವ ಕರ್ಣ ಹಾಗೂ ವೈದ್ಯಕೀಯ ಕಲಿಯುತ್ತಿರುವ ಭವ್ಯಾ ಗೌಡ ಜೋಡಿಯನ್ನು ಜನ ಇಷ್ಟಪಟ್ಟಿದ್ದರು.
28
ಇದೇ ಜೂನ್ 16ರಿಂದ ಸೀರಿಯಲ್ (Karna Serial) ಆರಂಭವಾಗಬೇಕಿತ್ತು. ಇನ್ನೇನು ಪ್ರಸಾರವಾಗಲು ಜನ ಕಾಯುತ್ತಿದ್ದಾಗಲೇ ಸೀರಿಯಲ್ ಮುಂದೂಡಲಾಗಿದೆ ಎಂದು ವಾಹಿ ಹೇಳುವ ಮೂಲಕ ವೀಕ್ಷಕರಿಗೆ ಶಾಕ್ ಕೊಟ್ಟಿತ್ತು, ಇದಕ್ಕೆ ಮುಖ್ಯ ಕಾರಣ ಭವ್ಯಾ ಗೌಡ ಅನ್ನೋದು ಕೂಡ ತಿಳಿದು ಬಂತು.
38
'ಕರ್ಣ' ಧಾರಾವಾಹಿಯ ನಾಯಕಿಯಾಗಿದ್ದಾಗ ಭವ್ಯಾ ಗೌಡ (Bhavya Gowda) ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ಜೊತೆ ಮಾಡಿಕೊಂಡ ಒಪ್ಪಂದದಂತೆ ಆರು ತಿಂಗಳು ಬೇರೆ ಮನರಂಜನಾ ವಾಹಿನಿಯಲ್ಲಿ ನಟಿಸುವಂತಿರಲಿಲ್ಲ. ಆದರೆ ಭವ್ಯ ಗೌಡ- 'ಕರ್ಣ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಈ ಅಗ್ರಿಮೆಂಟ್ ನಿಯಮ ಮುರಿದಿದ್ದರು ಎಂದು ದೂರಲಾಗಿದೆ.
ಅದಕ್ಕಾಗಿಯೇ ಕಲರ್ಸ್ ಕನ್ನಡ ವಾಹಿನಿ, ಝೀ ಕನ್ನಡದ (Zee Kannada) 'ಕರ್ಣ' ಧಾರಾವಾಹಿಗೆ ಸ್ಟೇ ತಂದಿದ್ದರು. ಹೀಗಾಗಿ 'ಕರ್ಣ' ಪ್ರಸಾರವಾಗುವುದನ್ನು ಮುಂದೂಡಲಾಗಿದೆ. ಚಾನೆಲ್ ದೂರು ದಾಖಲಿಸಿರುವುದರಿಂದ ಕೋರ್ಟ್ ಕೇಸ್ ಮುಗಿಯುವವರೆಗೂ ಸೀರಿಯಲ್ ಪ್ರಸಾರವಾಗುವುದಿಲ್ಲ ಎನ್ನಲಾಗಿದೆ.
58
ಹಾಗಾಗಿ ಸದ್ಯ ಜನ ಕುತೂಹಲದಿಂದ ಕಾಯುತ್ತಿದ್ದ ಈ ಕರ್ಣ ಧಾರಾವಾಹಿ, ಯಾವಾ ಶುರುವಾಗಲಿದೆ ಅನ್ನೋದು ಗೊತ್ತಿಲ್ಲ. ಇದರಿಂದಾಗಿ ಭವ್ಯಾ ಗೌಡ ಅಭಿಮಾನಿಗಳು ಕಿಡಿ ಕಾರಿದ್ದು, ಬಿಗ್ ಬಾಸ್ ನ ಬೇರೆ ಸ್ಪರ್ಧಿಗಳಿಗೆ ಇಲ್ಲದ ಕಾನೂನು ಭವ್ಯಾ ಗೌಡಾಗೆ ಯಾಕೆ ಎಂದು ಕೇಳಿದ್ದಾರೆ.
68
ಗೌತಮಿ ಜಾಧವ್ (Gowthami Jadhav) ಈಗಾಗಲೇ ಕಲರ್ಸ್ ಕನ್ನಡದ ಸೀರಿಯಲ್ ಒಂದರಲ್ಲಿ ನಟಿಸಿದ್ದು, ಇದೀಗ 15 ವರ್ಷದ ಬಳಿಕ ಉದಯ ಟಿವಿಯ ಸೇವಂತಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಸುದ್ದಿ ಈಗಾಗಲೇ ಸದ್ದು ಮಾಡುತ್ತಿದೆ.
78
ಅಷ್ಟೇ ಅಲ್ಲ, ಐಶ್ವರ್ಯ ಸಿಂಧೋಗಿ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಪ್ರೊಮೋ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.
88
ಅಲ್ಲದೇ ನಟಿ ಮೋಕ್ಷಿತಾ ಪೈ (Mokshitha Pai) ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಅವರಲ್ಲಿ ಯಾರಿಗೂ ಇದುವರೆಗೆ ಅಗ್ರಿಮೆಂಟ್ ನಿಯಮ ಅಡ್ಡ ಬಂದಿಲ್ಲ. ಇದರಿಂದ ಕೋಪಗೊಂಡಿರುವ ವೀಕ್ಷಕರು, ಗೌತಮಿ, ಐಶ್ವರ್ಯರಿಗೆ ಇಲ್ಲದ ಈ ನಿಯಮ, ರೂಲ್ಸ್ ಭವ್ಯಾ ಗೌಡಾಗೆ ಮಾತ್ರ ಯಾಕೆ ಎಂದು ಪ್ರಶ್ನಿಸಿದ್ದಾರೆ.