ಸಿನಿಮಾ ತಾರೆಯರು ಹಾಗೂ ಪಾಪರಾಜಿಗಳ ನಂಟು ವಿವರಿಸಲು ಪದಗಳೇ ಇಲ್ಲ. ಸಿನಿಮಾ ಸ್ಟಾರ್ಸ್‌ಗಳು ಎಲ್ಲೇ ಹೋದರು ಅವರನ್ನು ಶೂಟ್ ಮಾಡುವ ಪಾಪರಾಜಿಗಳಿಗೆ ನಿತ್ಯ ಅದೇ ಕೆಲಸ.
ಈಗ ಈ ಪಾಪರಾಜಿಗಳ ವಿರುದ್ಧ ನಟಿ ಆಯೇಷಾ ಖಾನ್ ಕಿಡಿಕಾರಿದ್ದಾರೆ. ಅದರಲ್ಲೂ ಪಾಪರಾಜಿಗಳ ಉದ್ದೇಶಗಳ ಬಗ್ಗೆಯೇ ಅವರು ಪ್ರಶ್ನೆ ಮಾಡಿದ್ದಾರೆ.
ಬಿಗ್ ಬಾಸ್ 17ನಲ್ಲಿ ಸ್ಪರ್ಧಿಸಿದ್ದ ಆಯೇಷಾ ಖಾನ್ ಈ ಕುರಿತಾಗಿ ತಮ್ಮ ಇನ್ಸ್‌ಟಾಗ್ರಾಮ್‌ನ ಸ್ಟೇಟಸ್‌ನಲ್ಲಿ ಬರೆದುಕೊಂಡಿದ್ದು ವೈರಲ್ ಆಗಿದೆ.
ಕೆಟ್ಟ ಆಂಗಲ್‌ಗಳಿಂದ ತಮ್ಮ ಚಿತ್ರಗಳನ್ನು ತೆಗೆಯುವ ಪಾಪರಾಜಿಗಳ ವಿರುದ್ಧ ಆಯೇಷಾ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದು, ಬೇಸಿಕ್ ಮ್ಯಾನರ್ಸ್ ಕಲಿತುಕೊಳ್ಳಿ, ನಿಮ್ಮ ವರ್ತನೆಗಳು ಅಸಹ್ಯಕರವಾಗಿದೆ ಎಂದು ಹೇಳಿದ್ದಾರೆ.
ಕಾರ್‌ನಿಂದ ಇಳಿಯುವಾಗ ಡ್ರೆಸ್‌ಗಳನ್ನು ಅಡ್ಜಸ್ಟ್ ಮಾಡಿಕೊಂಡರೂ, ಅಲ್ಲಿಗೇ ಜೂಮ್ ಹಾಕುವ ಮೂಲಕ ನಿಮ್ಮ ಉದ್ದೇಶ ಏನು ಅನ್ನೋದನ್ನು ತೋರಿಸಿದ್ದೀರಿ ಎಂದು ಆಯೇಷಾ ಖಾನ್ ಕಿಡಿಕಾರಿದ್ದಾರೆ.
ಅದೆಲ್ಲಾ ಯಾವ ರೀತಿಯ ಆಂಗಲ್‌ಗಳು? ನೀವು ಏನನ್ನು ಜೂಮ್ ಮಾಡಲು ಬಯಸುತ್ತೀರಿ? ನಮ್ಮ ಒಪ್ಪಿಗೆ ಕೇಳಿದ್ದೀರಾ? ಕೆಲವು ಮೀಡಿಯಾ ಹೌಸ್‌ಗಳು ಏನಾಗಿದೆ? ಎಂದು ಅಯೇಷಾ ಖಾನ್ ಬರೆದುಕೊಂಡಿದ್ದಾರೆ.
ಎಲ್ಲಿಂದ ಯಾರು, ಯಾವ ಆಂಗಲ್‌ನಲ್ಲಿ ಚಿತ್ರ ಕ್ಲಿಕ್ ಮಾಡುತ್ತಾರೆ ಎನ್ನುವ ಭಯವಿಲ್ಲದೆ ಮಹಿಳೆ ತನಗೆ ಬೇಕಾದ ರೀತಿಯಲ್ಲಿ ಬಟ್ಟೆ ಧರಿಸಲು ಸಾಧ್ಯವಿಲ್ಲವೇ? ಇದೆಲ್ಲ ನೋಡಿದರೆ ಸಂಪೂರ್ಣವಾಗಿ ಹೇಸಿಗೆ ಅನಿಸುತ್ತಿದೆ ಎಂದಿದ್ದಾರೆ.
ಕಾರ್‌ನಿಂದ ಇಳಿಯುವ ಮುನ್ನ ಡ್ರೆಸ್‌ನ ಅಡ್ಜಸ್ಟ್ ಮಾಡಿಕೊಳ್ಳುವ ಸರಿಯಾದ ಸಮಯದಲ್ಲಿಯೇ ನೀವು ಕ್ಯಾಮೆರಾ ಹಿಡಿದು ನಿಂತಿರುತ್ತೀರಿ. ಅದನ್ನೇ ಪೋಸ್ಟ್ ಮಾಡುತ್ತೀರಿ ಎಂದು ಬರೆದಿದ್ದಾರೆ.
ಹಿಂದುಗಡೆಯಿಂದ ನನ್ನ ಫೋಟೋ ಕ್ಲಿಕ್ ಮಾಡಬೇಡಿ ಎಂದು ಕೇಳಿಕೊಂಡರೂ, ಅದೇ ಚಿತ್ರದೊಂದಿಗೆ ವಿಚಿತ್ರ ಕ್ಯಾಪ್ಶನ್ ಹಾಕಿ ಪೋಸ್ಟ್ ಮಾಡುತ್ತೀರಿ ಎಂದು ಆಯೆಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಮೀಡಿಯಾಗಳು ಕೆಲವು ಬೇಸಿಕ್ ಮ್ಯಾನರ್ಸ್‌ಗಳನ್ನು ಕಲಿತುಕೊಳ್ಳಬೇಕಿದೆ ಎನ್ನುವುದು ಪಾಪಾರಾಜಿಗಳ ವರ್ತನೆಯಿಂದಲೇ ಗೊತ್ತಾಗುತ್ತಿದೆ ಎಂದಿದ್ದಾರೆ.
ಬಿಗ್ ಬಾಸ್ 17 ರಲ್ಲಿ ಕಾಣಿಸಿಕೊಂಡ ನಂತರ ಆಯೇಷಾ ಖಾನ್ ಖ್ಯಾತಿಗೆ ಬಂದಿದ್ದಾರೆ. ಕಾರ್ಯಕ್ರಮದ ಸಮಯದಲ್ಲಿ, ಅವರು ಮುನಾವರ್ ಫರುಕಿ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದರು.
ಮುನಾಫರ್ ಫಾರೂಕಿ ಡಬಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಆಯೆಷಾ ಖಾನ್ ಆರೋಪ ಮಾಡಿದ್ದರು. ಮುನಾವರ್ ನನ್ನನ್ನುಮದುವೆಯಾಗುವ ಮಾತು ಕೊಟ್ಟಿದ್ದ ಎಂದೂ ಹೇಳಿದ್ದರು.
ಬಿಗ್ ಬಾಸ್ 17 ಕಾರ್ಯಕ್ರಮದಲ್ಲಿ ಅತ್ಯಂತ ಪ್ರಖ್ಯಾತ ಸ್ಪರ್ಧಿಯಾಗಿದ್ದ ಆಯೆಷಾ ಖಾನ್, ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಲಗ್ಗೆ ಇಟ್ಟಿದ್ದರು.
ಮುನಾವರ್ ಫಾರೂಕಿ ಜೊತೆ ನನ್ನ ಸ್ನೇಹವಿದೆ. ಆತ ಏನು ಮಾಡುತ್ತಿದ್ದಾನೆ ಎನ್ನುವುದನ್ನು ನಾನು ಹೇಳಲು ಬಯಸುತ್ತೇನೆ ಎಂದು ಆಯೆಷಾ ತಿಳಿಸಿದ್ದರು.
ಈ ಮನೆಗೆ ಹೊಕ್ಕುವ ಮುನ್ನ ನಾನು ಪ್ರೀತಿಯಲ್ಲಿದ್ದೆ ಎಂದು ಮುನಾವರ್ ಹೇಳಿದ್ದ. ಆದರೆ, ಇಲ್ಲಿ ನನಗೆ ಐ ಲವ್ ಯೂ ಅಂದಿದ್ದಲ್ಲದೆ, ಮದುವೆಯಾಗುವ ಭರವಸೆ ನೀಡಿದ್ದ ಎಂದು ಅಯೇಷಾ ತಿಳಿಸಿದ್ದರು.
ಮುಂಬೈ ಮೂಲದ ಆಯೇಷಾ ಖಾನ್, ಎಕ್ತಾ ಕಪೂರ್ ಅವರ ಕಸೌತಿ ಜಿಂದಗೀ ಕೀ ಧಾರವಾಹಿಯಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕಿರುತೆರೆಗೆ ಲಗ್ಗೆ ಇಟ್ಟಿದ್ದರು.