ಶ್ರಾವಣಿ ಸುಬ್ರಹ್ಮಣ್ಯ: ಶ್ರೀವಲ್ಲಿ ರಿಯಲ್ ಲೈಫಲ್ಲಿ ಸಖತ್ ಸ್ಟೈಲಿಶ್, ಇವಳನ್ನೇ ಹೀರೋಯಿನ್ ಮಾಡಿ ಅಂತಿದ್ದಾರೆ ನೆಟ್ಟಿಗರು!

Published : Apr 06, 2024, 01:16 PM IST

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಸುಬ್ರಹ್ಮಣ್ಯನನ್ನು ತುಂಬಾನೆ ಪ್ರೀತಿಸೋ ಅತ್ತೆ ಮಗಳು ಶ್ರೀವಲ್ಲಿ ಪಾತ್ರದಲ್ಲಿ ನಟಿಸ್ತಿರೋ ನಟಿ ಕೀರ್ತಿ ವೆಂಕಟೇಶ್.  

PREV
19
ಶ್ರಾವಣಿ ಸುಬ್ರಹ್ಮಣ್ಯ: ಶ್ರೀವಲ್ಲಿ ರಿಯಲ್ ಲೈಫಲ್ಲಿ ಸಖತ್ ಸ್ಟೈಲಿಶ್, ಇವಳನ್ನೇ ಹೀರೋಯಿನ್ ಮಾಡಿ ಅಂತಿದ್ದಾರೆ ನೆಟ್ಟಿಗರು!

ಝೀ ಕನ್ನಡದಲ್ಲಿ(Zee Kannada) ಹೊಸದಾಗಿ ಪ್ರಸಾರವಾಗುತ್ತಿರುವ ಧಾರಾವಾಹಿ ಶ್ರಾವಣಿ ಸುಬ್ರಹ್ಮಣ್ಯ. ತೆಲುಗಿನ ಅಮ್ಮಾಯಿಗಾರು ಸೀರಿಯಲ್ ನ ರಿಮೇಕ್. ಸೀರಿಯಲ್ ಪಾತ್ರಗಳು ಸಹ ಜನರಿಗೆ ಇಷ್ಟವಾಗಿದೆ. 
 

29

ಇನ್ನು ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಶ್ರೀವಲ್ಲಿ ಪಾತ್ರ ಕೂಡ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಸುಬ್ರಹ್ಮಣ್ಯನನ್ನು ಸಿಕ್ಕಾಪಟ್ಟೆ ಲವ್ ಮಾಡೋ ಅತ್ತೆ ಮಗಳು ಶ್ರೀವಲ್ಲಿ ಪಾತ್ರದಲ್ಲಿ ನಟಿಸ್ತಿರೋ ನಟಿ ಕೀರ್ತಿ ವೆಂಕಟೇಶ್ (Keerthi Venkatesh). 
 

39

ಶ್ರೀವಲ್ಲಿ ಗಯ್ಯಾಳಿ ಹುಡುಗಿ, ಆದ್ರೆ ಸುಬ್ಬು ನೆರಳು ಕಂಡ್ರೂ ಸಾಕು ಕರಗಿ ನೀರಾಗುತ್ತಾಳೆ. ಸುಬ್ಬು ಕುಟುಂಬ ಬಾಡಿಗೆಗೆ ಇರೋದೇ ಇವರ ಮನೆಯಲ್ಲಿ. ಈಕೆಗೆ ಸುಬ್ಬು ಎಷ್ಟು ಇಷ್ಟ ಅಂದ್ರೆ ಈಕೆ, ನಿನ್ನೆಯ, ಇವತ್ತಿನ ನಾಳಿನ ಎಲ್ಲಾ ಕನಸುಗಳು ಸಹ ಸುಬ್ಬು ಜೊತೆಗೆ ಇದೆ. 
 

49

ಸುಬ್ಬುಗೋಸ್ಕರ ಏನು ಬೇಕಾದ್ರೂ ಮಾಡೋಕೂ ರೆಡಿಯಾಗಿರುವ, ಸುಬ್ಬು ಮನೆಯ ಕಷ್ಟಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಸ್ಪಂದಿಸುವ ಈಕೆಯನ್ನು ಸೊಸೆಯನ್ನಾಗಿ ಮಾಡೋದಕ್ಕೆ ಸುಬ್ಬು ಅಪ್ಪ-ಅಮ್ಮನೂ ಕಾಯ್ತಿದ್ದಾರೆ. ಆದರೆ ಸುಬ್ಬುಗೆ ಮಾತ್ರ ಈಕೆ ಮೇಲೆ ಯಾವುದೇ ಫೀಲಿಂಗ್ ಇಲ್ಲ. 
 

59

ಒನ್ ಸೈಡ್ ಲವ್ ಮಾಡ್ತಿರೋ ಶ್ರೀವಲ್ಲಿ ಪಾತ್ರ ಜನರಿಗೆ ತುಂಬಾನೆ ಇಷ್ಟವಾಗಿದೆ. ವೀಕ್ಷಕರೂ ಸಹ ಸುಬ್ಬುಗೆ ನೀವೇ ಸರಿಯಾದ ಜೋಡಿ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲ ಹೀರೋಯಿನ್(heroine) ಗಿಂತಾನೂ ನೀವೇ ಚೆನ್ನಾಗಿದ್ದೀರಾ ಎಂದು ಸಹ ವೀಕ್ಷಕರು ಈ ಬೆಡಗಿಯನ್ನು ಹೊಗಳಿದ್ದಾರೆ. 
 

69

ವೀಕ್ಷಕರಿಗೆ ಕೀರ್ತಿ ಎಷ್ಟೊಂದು ಇಷ್ಟವಾಗಿದ್ದಾರೆ ಅಂದ್ರೆ ಹೀರೋಹಿನ್ ಗಿಂತ ಅವರೇ‌ ಚೆನ್ನಾಗಿದ್ದಾರೆ..ಡೈರೆಕ್ಟರ್ ಸಾಹೆಬ್ರೆ ಇವರಿಬ್ಬರಿಗೆ ಮದುವೆ ಮಾಡ್ಸಿ ಎಂದು ಕೆಲವರು ಹೇಳಿದ್ರೆ, ಇನ್ನೂ ಕೆಲವರು ಇವರನ್ನೇ ಹಿರೋಯಿನ್ ಆಗಿ ಮಾಡ್ಬಿಡಿ, ಶ್ರಾವಣಿ ನಾಯಕಿಯಾಗೋದು ಬೇಡ ಅಂತಿದ್ದಾರೆ. 
 

79

ಈಗಾಗಲೇ ಹಲವು ಸೀರಿಯಲ್ ನಲ್ಲಿ ನಟಿಸಿರುವ ಕೀರ್ತಿ ವೆಂಕಟೇಶ್ ಶ್ರಾವಣಿ ಸುಬ್ರಹ್ಮಣ್ಯದಲ್ಲಿ (Shravaani Subramanya) ಕಂಡಷ್ಟು ಸಿಂಪಲ್ ಹುಡುಗಿ ರಿಯಲ್ ಲೈಫಲ್ಲಿ ಅಲ್ವೇ ಅಲ್ಲ, ತುಂಬಾನೆ ಸ್ಟೈಲಿಶ್ ಮತ್ತು ಮಾಡರ್ನ್ ಆಗಿರುವ ಇವರು ಟೈಮ್ಸ್ ಫ್ರೆಶ್ ಫೇಸ್ ಸ್ಪರ್ಧೆಯಲ್ಲಿ ಭಾಗವಹಿಸಿ, ಮಿಸ್ ಟ್ಯಾಲೆಂಟೆಡ್ ಅವಾರ್ಡ್ ಕೂಡ ಗೆದ್ದಿದ್ದಾರೆ. 
 

89

ಈ ಹಿಂದೆ ಸತ್ಯ ಸೀರಿಯಲ್ ನಲ್ಲಿ ಅಮೂಲ್ ಬೇಬಿ  ಕಾರ್ತಿಕ್ ತಂಗಿ ರಿತು ಪಾತ್ರದಲ್ಲಿ ನಟಿಸಿದ್ದರು, ಆ ಧಾರಾವಾಹಿಯಲ್ಲೂ ಇವರು ಸುಬ್ಬು ಪಾತ್ರದಲ್ಲಿ ನಟಿಸ್ತಿರೋ ಅಮೋಘ ಆದಿತ್ಯಾ (Amogha Adithya) ಅವರಿಗೆ ಜೋಡಿಯಾಗಿದ್ದರು, ಈ ಧಾರವಾಹಿಯಲ್ಲೂ ಇವರು ಜೊತೆಗೆ ನಟಿಸ್ತಿದ್ದಾರೆ. 
 

99

ಅಷ್ಟೇ ಅಲ್ಲ ಕೀರ್ತಿಯವರು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕನ್ಯಾದಾನದಲ್ಲೂ ಓರ್ವ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಲ್ಲೂ ಇವರ ಭುವನ ಪಾತ್ರವನ್ನು ಜನರು ಇಷ್ಟಪಟ್ಟಿದ್ದಾರೆ. ಜೊತೆಗೆ ಕೀರ್ತಿ ಕೆಲವು ಶಾರ್ಟ್ ಫಿಲಂಗಳಲ್ಲೂ (Short film) ನಟಿಸಿ ಸೈ ಎನಿಸಿಕೊಂಡಿದ್ದಾರೆ. 
 

Read more Photos on
click me!

Recommended Stories