ಕನ್ನಡ ಬಿಗ್‌ಬಾಸ್‌ ಗೆಲ್ಲೋರು ಯಾರು? ಸಂಗೀತಾ ನಿರ್ಧಾರದಿಂದ ಬದಲಾದ ವಿನ್ನರ್ ಪಟ್ಟ!

Published : Nov 21, 2023, 12:33 PM ISTUpdated : Nov 21, 2023, 12:35 PM IST

ಕನ್ನಡ ಬಿಗ್‌ಬಾಸ್‌ ಆರಂಭವಾಗಿ 45 ದಿನಗಳಾಗಿದೆ. ಸ್ಫರ್ಧಿಗಳ ಆಟ ನೋಡುತ್ತಿದ್ದರೆ ಯಾರು ಈ ಬಾರಿ ಬಿಗ್‌ಬಾಸ್ ಗೆಲ್ಲಬಹುದು ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಲ್ಲಿ ಗೆಲ್ಲುವ ನೆಚ್ಚಿನ ಸ್ಫರ್ಧಿಗಳ ಬಗ್ಗೆ ವಿವರಣೆ ನೀಡಲಾಗಿದೆ.

PREV
18
ಕನ್ನಡ ಬಿಗ್‌ಬಾಸ್‌ ಗೆಲ್ಲೋರು ಯಾರು? ಸಂಗೀತಾ ನಿರ್ಧಾರದಿಂದ ಬದಲಾದ ವಿನ್ನರ್ ಪಟ್ಟ!

ಹಿರಿಯ ನಟಿ ಶ್ರುತಿ ಬಿಟ್ಟರೆ ಈವರೆಗೆ ಯಾವೊಬ್ಬ ಮಹಿಳೆ ಕೂಡ ಬಿಗ್‌ಬಾಸ್‌ ಗೆದ್ದಿಲ್ಲ. ಹೀಗಾಗಿ ಈ ಬಾರಿಯ ಬಿಗ್‌ಬಾಸ್‌ ನಲ್ಲಿ ನಟಿಯರಾದ ಸಂಗೀತಾ ಶೃಂಗೇರಿ ಮತ್ತು ತನಿಷಾ ಕುಪ್ಪಂಡ ಗೆಲ್ಲುವ ನೆಚ್ಚಿನ ಸ್ಫರ್ಧಿಗಳು ಎಂದು ವೀಕ್ಷಕರು ಅಭಿಪ್ರಾಯ ಪಟ್ಟಿದ್ದರು. 

28

ಆದರೆ ಈಗ ಎಲ್ಲವೂ ಬದಲಾಗಿದೆ. ಎರಡು ವಾರದ ಹಿಂದೆ ಸಂಗೀತಾ ಅವರು ಬಿಗ್‌ಬಾಸ್‌ ಗೆಲ್ಲಬಹುದು ಎಂದು ತುಂಬಾ ಜನ ಊಹಿಸಿದ್ದರು. ಆದರೆ ಅದೆಲ್ಲವೂ ಆಕೆಯ ಒಂದು ನಿರ್ಧಾರದಿಂದ ಈಗ ಬದಲಾಗಿದೆ.

38

ತನಿಶಾ, ಕಾರ್ತಿಕ್ ಮತ್ತು ಸಂಗೀತಾ ಒಳ್ಳೆ ಸ್ನೇಹ ಇಟ್ಟುಕೊಂಡಿದ್ದರು. ನಾಮಿನೇಶನ್ ವಿಚಾರದಲ್ಲಿ ಸೇವ್‌ ಮಾಡಲಿಲ್ಲ ಎಂದು ಸಂಗೀತಾ ಗಲಾಟೆ ಮಾಡಿದ್ದು, ಇಡೀ ಸ್ಪರ್ಧೆಯನ್ನೇ ತಲೆಕೆಳಗೆ ಮಾಡಿದೆ.

48

ಎರಡು ವಾರದ ಹಿಂದೆ ಟ್ರೋಪಿ ಗೆಲ್ಲುವ ಸಾಲಿನಲ್ಲಿ 48% ಸಂಗೀತಾ, 37% ಪ್ರತಾಪ್‌ ಮತ್ತು 15% ಕಾರ್ತಿಕ್ ಪಾಲಾಗಿತ್ತು. ಆದರೆ ಈಗ ಸಂಫೂರ್ಣ ಬದಲಾಗಿದ್ದು, ಪ್ರತಾಪ್ 60%, ಕಾರ್ತಿಕ್ 25%, ವಿನಯ್‌ 10%, ಮತ್ತು ಸಂಗೀತಾ 5% ಎಂದು ಟ್ರೋಲ್ 4 ಲವ್ ಪೇಜ್‌ ಅಭಿಪ್ರಾಯ ತಿಳಿಸಿದೆ.

58

ಇನ್ನು ಡ್ರೋಣ್ ಪ್ರತಾಪ್‌ಗೆ ಕೂಡ ಸಾಕಷ್ಟು ಮಂದಿ ಸಪೂರ್ಟ್ ಮಾಡುತ್ತಿದ್ದಾರೆ. ಪ್ರತಾಪ್‌ ಗೆಲ್ಲಬೇಕು ಎಂದು ಹಲವು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಮನೆಯಲ್ಲಿ ಪ್ರತಾಪ್ ಆಟದ ವೈಖರಿಗೆ ಮನೆ ಮಂದಿಯೇ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

68

ಈ ವಾರದ ಟಾಸ್ಕ್‌ನಲ್ಲಿ ಎರಡು ಗುಂಪುಗಳಾಗಿದ್ದು, ವಿನಯ್‌, ಸಂಗೀತಾ, ಸ್ನೇಹಿತ್ , ಸಿರಿ, ನಮ್ರತಾ ಮತ್ತು ಪ್ರತಾಪ್‌ ಅವರು ಗಜಕೇಸರಿ ಎಂಬ ತಂಡದಲ್ಲಿದ್ದಾರೆ. ಕಾರ್ತಿಕ್‌, ತುಕಾಲಿ, ವರ್ತೂರು, ತನಿಶಾ, ಮೈಕಲ್‌ ಮತ್ತು ನೀತು ಸಂಪತ್ತಿಗೆ ಸವಾಲ್‌ ಎಂಬ ತಂಡದಲ್ಲಿದ್ದಾರೆ.
 

78

ಇಂದಿನ ಎಪಿಸೋಡ್‌ನ ಪ್ರೋಮೋ ಬಿಡುಗಡೆಯಾಗಿದ್ದು, ಅದರಲ್ಲಿ ಸಂಗೀತಾ ಅವರು ತಮ್ಮ ಎದುರಾಳಿ ತಂಡದ ತುಕಾಲಿ ಸಂತೋಷ್‌ ಮತ್ತು ಕಾರ್ತಿಕ್‌ ಅವರು ಸಂಪೂರ್ಣ ತಲೆ ಬೋಳಿಸಬೇಕೆಂದು ಹೇಳಿದ್ದಾರೆ. ಒಬ್ಬರು ಸಾಕಲ್ವಾ ಎಂದು ತನಿಶಾ ಹೇಳಿದ್ದಕ್ಕೆ, ನಮ್ರತಾ ಮತ್ತು ತನಿಶಾ ನಡುವೆ ಗಲಾಟೆಯಾಗಿದೆ. ಮಿಕ್ಕಂತೆ ಕಾರ್ತಿಕ್ ಪಾಯಿಂಟ್‌ ಗೋಸ್ಕರ ತಂಡಕ್ಕೋಸ್ಕರ ಏನು ಮಾಡೋಕು ರೆಡಿ ಕೂದಲೂ ಎಲ್ಲೂ ಹೋಗಲ್ಲ ಮತ್ತೆ ಬರುತ್ತೆ ಅಂದಿದ್ದಾರೆ.

88

ಇನ್ನು ನಿನ್ನೆ ನಡೆದ ನಾಮಿನೇಷನ್‌ ನಲ್ಲಿ ಕ್ಯಾಪ್ಟನ್ ಕಾರ್ತಿಕ್‌ ಹೊರತು ಪಡಿಸಿ ಮನೆಯ ಎಲ್ಲಾ ಸದಸ್ಯರು ನಾಮಿನೇಟ್‌ ಆಗಿದ್ದರು. ಮೈಕಲ್‌ ಅವರನ್ನು ವಿಶೇಷ ಅಧಿಕಾರದಿಂದ ಕಾರ್ತಿಕ್‌ ಉಳಿಸಿದರು. ಹಾಗೆಯೇ ಭಾಗ್ಯಶ್ರೀ ಅವರು ಮನೆಯಿಂದ ಹೊರಹೋಗುವಾಗ ನೀಡಿದ ವಿಶೇಷ ಅಧಿಕಾರದಿಂದ ತುಕಾಲಿ ಸಂತೋಷ್‌ ಅವರು ವರ್ತೂರು ಸಂತೋಷ್‌ ಅವರನ್ನು ಸೇವ್‌ ಮಾಡಿದ್ದಾರೆ. 

Read more Photos on
click me!

Recommended Stories