ಕಾಕತಾಳಿಯವೋ! ಕಿಚ್ಚ ಸುದೀಪ್‌ ಹೇಳಿದಂತೆ ದೈವಭಕ್ತನನ್ನು ಮದುವೆಯಾಗ್ತಿರೋ ಚೈತ್ರಾ ಕುಂದಾಪುರ!

Published : May 08, 2025, 10:57 PM ISTUpdated : May 09, 2025, 10:39 AM IST

ಬಿಗ್‌ ಬಾಸ್‌ ಖ್ಯಾತಿಯ ಚೈತ್ರಾ ಕುಂದಾಪುರ ಅವರು ಮದುವೆ ಆಗುತ್ತಿದ್ದಾರೆ. ಈ ವಿಷಯವನ್ನು ಅವರೇ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಗಾದರೆ ಹುಡುಗ ಯಾರು? 

PREV
17
ಕಾಕತಾಳಿಯವೋ! ಕಿಚ್ಚ ಸುದೀಪ್‌ ಹೇಳಿದಂತೆ ದೈವಭಕ್ತನನ್ನು ಮದುವೆಯಾಗ್ತಿರೋ ಚೈತ್ರಾ ಕುಂದಾಪುರ!

‌”ನಿಮಗೆ ಮದುವೆ ಆಗಿದ್ಯಾ? ನೀವು ಯಾಕೆ ದೇವಸ್ಥಾನದಲ್ಲಿ ಅವರಿಗೆ ಅವರೇ ಸಮರ್ಪಣೆ ಮಾಡಿಕೊಂಡವರನ್ನು ಮದುವೆ ಆಗೋದು ಬೆಟರ್” ಎಂದು ಚೈತ್ರಾ ಕುಂದಾಪುರಗೆ ಕಿಚ್ಚ ಸುದೀಪ್‌ ಸಲಹೆ ನೀಡಿದ್ದರು. ಅದೀಗ ನಿಜವಾಗಿದೆ. ಹೌದು, 12 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಹುಡುಗನನ್ನು ಚೈತ್ರಾ ಕುಂದಾಪುರ ಅವರು ಮದುವೆ ಆಗಿದ್ದಾರೆ.
 

27

ಮೇ 9ರಂದು ಚೈತ್ರಾ ಕುಂದಾಪುರ ಅವರು ಕಾಲೇಜು ಲೈಫ್‌ನಿಂದ ಪ್ರೀತಿಸುತ್ತಿದ್ದ ಹುಡುಗನನ್ನು ಮದುವೆ ಆಗಲಿದ್ದಾರೆ. ಕಾಲೇಜಿನಲ್ಲಿದ್ದಾಗ ಇವರಿಬ್ಬರು ಕಿತ್ತಾಡಿಕೊಳ್ಳುತ್ತಿದ್ದರು. ಆಮೇಲೆ ಈ ಜಗಳವೇ ಪ್ರೀತಿಯಾಗಿ ಟರ್ನ್‌ ಆಗಿದೆ. ಚೈತ್ರಾ ಕುಂದಾಪುರ ಕಳೆದ 12 ವರ್ಷಗಳಿಂದ ಪ್ರೀತಿ ಮಾಡ್ತಿದ್ದ ಹುಡುಗ ದೈವಭಕ್ತ ಆಗಿದ್ದು, ಕಿಚ್ಚ ಸುದೀಪ್‌ ಹೇಳಿದ್ದು ಒಂದೇ ಆಗಿದೆ. ಇದು ಕಾಕತಾಳಿಯವೋ ಅಥವಾ ಸುದೀಪ್‌ ಅವರಿಗೆ ಮೊದಲೇ ಗೊತ್ತಿತ್ತಾ ಎನ್ನುವ ಪ್ರಶ್ನೆ ಎದ್ದಿದೆ. 

37

ಈಗಾಗಲೇ ಅರಿಷಿಣ, ಮೆಹೆಂದಿ ಶಾಸ್ತ್ರವು ಅದ್ದೂರಿಯಾಗಿ ನಡೆದಿದೆ. ಮದುವೆ ಬಗ್ಗೆ ಎಲ್ಲಿಯೂ ಮಾತನಾಡದ ಚೈತ್ರಾ ಕುಂದಾಪುರ ಅವರು ʼಮಜಾ ಟಾಕೀಸ್‌ʼನಲ್ಲಿ ಲವ್‌ಸ್ಟೋರಿ ಬಿಚ್ಚಿಟ್ಟಿದ್ದರು. 
 

47

ಶ್ರೀಕಾಂತ್‌ ಕಶ್ಯಪ್‌ ಅವರು ಎನಿಮೇಶನ್‌ ಕಲಿತಿದ್ದು, ಹವ್ಯಾಸಿ ಖಗೋಳಶಾಸ್ತ್ರಜ್ಞ ಎನ್ನಲಾಗಿದೆ. ಅಂದಹಾಗೆ ಚೈತ್ರಾ ಅವರು ವಾಹಿನಿಯೊಂದರಲ್ಲಿ ನಿರೂಪಕಿ ಆಗಿದ್ದಾಗ, ಅವರು ವಿಡಿಯೋ ಎಡಿಟರ್‌ ಆಗಿದ್ದರು ಎನ್ನಲಾಗಿದೆ.
 

57

ಶ್ರೀಕಾಂತಾ ಅವರು ಸಿಕ್ಕಾಪಟ್ಟೆ ದೈವಭಕ್ತರು. ಅವರ ಸೋಶಿಯಲ್‌ ಮೀಡಿಯಾ ಖಾತೆ ನೋಡಿದರೆ ದೈವಭಕ್ತ ಎನ್ನೋದು ಎದ್ದು ಕಾಣುತ್ತದೆ. 

67

“ಬದುಕಿನ ಸಂಕಷ್ಟದಿಂದ ಸಂಭ್ರಮದವರೆಗೂ ಜೊತೆ ನಿಂತ ಜೀವದೊಂದಿಗೆ ಸಪ್ತಪದಿ ಇಡುವ ಸಮಯ ಬಂದಿದೆ. ನಿಮ್ಮೆಲ್ಲರ ಹಾರೈಕೆ ನಮ್ಮನ್ನು ಕಾಯಲಿ…” ಎಂದು ಚೈತ್ರಾ ಕುಂದಾಪುರ ಅವರು ಪ್ರಿ ವೆಡ್ಡಿಂಗ್‌ ವಿಡಿಯೋವನ್ನು ಹಂಚಿಕೊಂಡು ತಾವು ಮದುವೆಯಾಗುತ್ತಿರುವ ವಿಷಯವನ್ನು ಅಧಿಕೃತವಾಗಿ ಹೇಳಿದ್ದಾರೆ. 
 

77

ಬಿಗ್‌ ಬಾಸ್‌ ಮನೆಯಲ್ಲಿದ್ದಾಗಲೇ ಚೈತ್ರಾ ಕುಂದಾಪುರ ಅವರು ಉಂಗುರ ಕಳೆದುಕೊಂಡು, ಲವ್‌ನಲ್ಲಿರುವ ವಿಷಯದ ಸುಳಿವು ನೀಡಿದ್ದರು. ಅದಾದ ಬಳಿಕ ಅವರು ಸಂದರ್ಶನದಲ್ಲಿ ಕೂಡ ಮದುವೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದರೇ ವಿನಃ ಲವ್‌ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. 

Read more Photos on
click me!

Recommended Stories