ಕಿರುತೆರೆ ನಟಿ, ಲಕ್ಷಣಾ ಸೀರಿಯಲ್‌ನ ಸುಕೃತಾ ನಾಗ್ ತಮ್ಮ ಬ್ಯಾಗಲ್ಲಿ ಏನೇನು ಇಡ್ತಾರೆ ಗೊತ್ತಾ?

Published : Feb 28, 2023, 05:16 PM IST

ಕಿರುತೆರೆ ನಟಿ ಸುಕೃತಾ ನಾಗ್ ಇತ್ತಿಚೆಗೆ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ತಮ್ಮ ಶೂಟಿಂಗ್ ಬ್ಯಾಗ್ ನಲ್ಲಿ ಏನೆಲ್ಲಾ ವಸ್ತುಗಳು ಇರುತ್ತೆ ಅನ್ನೋದರ ಬಗ್ಗೆ ಹೇಳಿದ್ದರು. ನಿಮಗೂ ಸೆಲೆಬ್ರೆಟಿ ತನ್ನ ಬ್ಯಾಗಿನಲ್ಲಿ ಏನೆಲ್ಲಾ ಕ್ಯಾರಿ ಮಾಡ್ತಾ ಅಂತ ತಿಳಿಯೋ ಕುತೂಹಲ ಇದ್ರೆ ಮುಂದೆ ಓದಿ. 

PREV
110
ಕಿರುತೆರೆ ನಟಿ, ಲಕ್ಷಣಾ ಸೀರಿಯಲ್‌ನ ಸುಕೃತಾ ನಾಗ್ ತಮ್ಮ ಬ್ಯಾಗಲ್ಲಿ ಏನೇನು ಇಡ್ತಾರೆ ಗೊತ್ತಾ?

ಕಲರ್ಸ್ ಕನ್ನಡ (colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ‘ಲಕ್ಷಣ’ ಸೀರಿಯಲ್‌ನ ಸೊಕ್ಕಿನ ಹುಡುಗಿ ಶ್ವೇತಾ ಬಗ್ಗೆ ನಿಮಗೆ ಗೊತ್ತೆ ಇದೆ. ಈ ಪಾತ್ರವನ್ನು ನಿರ್ವಹಿಸುತ್ತಿರುವವರು ಸುಕೃತಾ ನಾಗ್. ಇದರಲ್ಲಿ ಶ್ವೇತಾ ಪಾತ್ರವನ್ನು ಸುಕೃತ ನಾಗ್ ನಿಭಾಯಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಇವರ ಪಾತ್ರ ನೆಗೆಟಿವ್ ಶೇಡ್ ಹೊಂದಿದೆ.  ಇವರ ಪಾತ್ರ ನೋಡಿ ಇವರನ್ನು ಬೈಯ್ಯೋ ಪ್ರೇಕ್ಷಕರು ಕೂಡ ಹೆಚ್ಚಾಗಿದ್ದಾರೆ. 

210

ನಟಿ ಸುಕೃತ ನಾಗ್ (Sukrutha Nag) ಬಾಲನಟಿಯಾಗಿ ಕಿರುತೆರೆ ಲೋಕಕ್ಕೆ ಕಾಲಿಟ್ಟವರು. ಆದರೆ ಜನಪ್ರಿಯತೆ ಪಡೆದದ್ದು ‘ಅಗ್ನಿಸಾಕ್ಷಿ’ ಧಾರಾವಾಹಿಯ ಮುಖಾಂತರ. ‘ಅಗ್ನಿಸಾಕ್ಷಿ’ ಸೀರಿಯಲ್‌ನಲ್ಲಿ ಅಂಜಲಿ ಪಾತ್ರ ನಿರ್ವಹಿಸಿದ್ದರು. ಇವರು ಕಾದಂಬರಿ ಸೀರಿಯಲ್ ನಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದರು.

310

ಸುಕೃತಾ ಮೂಲತಃ ಮಂಡ್ಯದವರಾದರೂ, ಬೆಳೆದದ್ದು ಬೆಂಗಳೂರಿನಲ್ಲಿ. ಇವರು ಇಲ್ಲಿವರೆಗೆ ಕಾದಂಬರಿ’ ಸೀರಿಯಲ್‌ ಸೇರಿದಂತೆ ಸುಮಾರು 25 ಟಿವಿ ಶೋಗಳಲ್ಲಿ ಬಾಲನಟಿಯಾಗಿ ಸುಕೃತ ನಾಗ್ ಅಭಿನಯಿಸಿದ್ದರು. 9 ವರ್ಷಗಳಿಂದ ಮನೋರಂಜನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇವರು ಡ್ಯಾನ್ಸಿಂಗ್ ರಿಯಾಲಿಟಿ ಶೋದಲ್ಲೂ ಭಾಗವಹಿಸಿದ್ದರು.

410

ಸುಕೃತಾ ನಾಗ್ ಸೋಷಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ತಮ್ಮ ಸೀರಿಯಲ್ ತಂಡದ ಜೊತೆಗೆ ಇನ್ಸ್ಟಾಗ್ರಾಮ್ ನಲ್ಲಿ ಆಗಾಗ ಸುಕೃತ ನಾಗ್ ರೀಲ್ಸ್ ಮಾಡುತ್ತಲೇ ಇರುತ್ತಾರೆ. ಇಷ್ಟೇ ಅಲ್ಲದೇ ಇವರ ಯೂಟ್ಯೂಬ್ ಚಾನೆಲ್ ಕೂಡ ಸಾಕಷ್ಟು ಸದ್ದು ಮಾಡುತ್ತಿದೆ. ಇವರಿಗೆ ಯೂಟ್ಯೂಬ್ ನಲ್ಲಿ 6.56 K  ಸಬ್ ಸ್ಕ್ರೈಬರ್ ಸಹ ಇದ್ದಾರೆ.
 

510

ಇತ್ತೀಚೆಗೆ ಇವರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ (youtube channel) ತಮ್ಮ ಶೂಟಿಂಗ್ ಬ್ಯಾಗ್ ನಲ್ಲಿ ಏನೇನಿದೆ ಎಂದು ವಿಡಿಯೋ ಒಂದನ್ನು ಮಾಡಿ ಹಾಕಿದ್ದರು. ತುಂಬಾನೆ ದೊಡ್ಡದಾಗಿರುವ ಇವರ ಬ್ಯಾಗ್ ನಲ್ಲಿ ಅಕ್ಷರಶಃ ಅರ್ಧ ಬ್ಯೂಟಿ ಪಾರ್ಲರ್ ಇದೆ ಅಂದ್ರೆ ತಪ್ಪಾಗಲಾರದು, ನಿಮಗೂ ಕುತೂಹಲ ಇದೆಯೇ? ಅವರ ಬ್ಯಾಗಲ್ಲಿ ನಿದೆ ಎಂದು ತಿಳಿಯಲು ಮುಂದೆ ಓದಿ. 

610

ಸುಕೃತಾ ವರ ಬಳಿ ಇರೋದೆಲ್ಲಾ, ದೊಡ್ಡ ಬ್ಯಾಗ್ ಅಂತೆ, ಇವರಿಗೆ ಅಂತದ್ದೇ ಬ್ಯಾಗ್ ಇಷ್ಟವಾಗೋದಂತೆ, ಯಾಕಂದ್ರೆ ಅದ್ರಲ್ಲಿ ಎಲ್ಲವನ್ನು ತುಂಬಬಹುದು ಅನ್ನೋದು ಅವರ ಅಭಿಪ್ರಾಯ. ಇವರ ಬ್ಯಾಗಿನಲ್ಲಿ ಸಹೋದರರೊಬ್ಬರು ಗಿಫ್ಟ್ ಮಾಡಿರೋ ಸ್ವಾಮಿ ವಿವೇಕಾನಂದ ಬುಕ್ ಇದೆ. ಇದು ಯಾವಾಗ್ಲೂ ಅವರ ಜೊತೆಯಲ್ಲೇ ಇರುತ್ತಂತೆ. 

710

ಇನ್ನು ಬ್ಯಾಗ್ ನಲ್ಲಿ ಲಿಪ್ ಸ್ಟಿಕ್ ಪೌಚ್ ಇದೆ, ಅದರಲ್ಲಿ ನಿಮಗೆ ಕಾಸ್ಮೆಟಿಕ್ ಶಾಪ್ ನಲ್ಲಿ ಸಿಗುವ ಎಲ್ಲಾ ರೀತಿಯ ಲಿಪ್ ಸ್ಟಿಕ್ ಶೇಡ್ ಗಳೂ ಸಿಗಬಹುದು ಅಷ್ಟೊಂದು ಲಿಪ್ ಸ್ಟಿಕ್ (lipstick) ಇವೆ. ಯಾವಾಗಲೂ ಸನ್ ಸ್ಕ್ರೀನ್ ಕ್ಯಾರಿ ಮಾಡೊ ಸುಕೃತಾ, ಯಾವುದೇ ಕಾಲ ಇರಲಿ ಸನ್ ಸ್ಕ್ರೀನ್ ಕ್ಯಾರಿ ಮಾಡೊದನ್ನು ಮರಿಯಬೇಡಿ ಅನ್ನುತ್ತಾರೆ. ಇನ್ನು ಕೊರೊನಾ ಬರೋ ಮುಂಚೇನೆ ಇವರ ಬಳಿ ಸ್ಯಾನಿಟೈಸರ್ ಬಾಟಲ್ ಇರುತ್ತಿತ್ತಂತೆ. ಇವಾಗ್ಲೂ ಅದನ್ನು ಕ್ಯಾರಿ ಮಾಡ್ತಾರೆ. 

810

ಬಿಸಿಲಿಗಿಂತ ಚಳಿಗೆ ಹೆದರೋ ಸುಕೃತಾ ಬ್ಯಾಗಿನಲ್ಲಿ ಒಂದು ಕ್ಯಾಪ್ ಯಾವಾಗಲೂ ಇದ್ದೇ ಇರುತ್ತೆ, ಮಾರ್ನಿಂಗ್ ಶೂಟಿಂಗ್ ಇರೋವಾಗ ಇದು ಬೇಕಾಗುತ್ತಂತೆ. ಅಕ್ಕ ಬರ್ತ್ ಡೇ ಕೊಟ್ಟ ಮೊಬೈಲ್, ತಮ್ಮ ಕೊಟ್ಟ ಲಿಪ್ ಸ್ಟಿಕ್, ಬಾಚಣಿಕೆ ಎಲ್ಲನೂ ಇದೆ. ಇನ್ನು ಹೈಜಿನ್ ಬಗ್ಗೆ ಕಾಳಜಿ ವಹಿಸೋ ಇವರ ಬ್ಯಾಗ್ ನಲ್ಲಿ ಟಾಯ್ಲೆಟ್ ಸ್ಯಾನಿಟೈಸರ್ (toilet sanitizer) ಇದ್ದೇ ಇರುತ್ತೆ.

910

ಇದಲ್ಲದೇ ವೆಟ್ ಟಿಶ್ಯೂ, ಮೌತ್ ವಾಶ್, ಗಮ್ಸ್, ಮಾಸ್ಕ್, ಲಿಪ್ ಬಾಮ್, ಕ್ಲಿಪ್, ರಿಬ್ಬರ್ ಇಟ್ಟುಕೊಳ್ಳಲು ಒಂದು ಪೌಚ್, ತ್ವಚೆ ಹೊಳೆಯುವಂತೆ ಕಾಣಲು ಬಾಡಿ ಹೈಲೈಟ್, ಹೇರ್ ಸ್ಪ್ರೇ (ಹೀಟ್ ಪ್ರೊಟೆಕ್ಟರ್), ಮಾರ್ಕರ್ ಇದೆ. ಇನ್ನು ಟ್ರಾವೆಲ್ ಮಾಡೋವಾಗ ವಾಮಿಟಿಂಗ್ ಬಾರದಿರಲೆಂದು ಡ್ರೈ ನಿಂಬೆ ಹಣ್ಣಿನ ಚೂರುಗಳ ಬಾಟಲ್ ಸಹ ಇಟ್ಟುಕೊಂಡಿದ್ದಾರೆ.
 

1010

ನಾನೊಂದು ಓಡಾಡುವ ಮೆಡಿಕಲ್ ಶಾಪ್ (medical shop) ಎಂದು ಹೇಳೋ ಸುಕೃತಾ ನಾಗ್ ಅವರ ಬ್ಯಾಗ್ ನಲ್ಲೊಂದು ಮೆಡಿಕಲ್ ಕಿಟ್ ಇದೆ. ಅದರಲ್ಲಿ ರಾಶಿ ರಾಶಿ ಟ್ಯಾಬ್ಲೆಟ್ ಗಳಿವೆ.  ಇನ್ನು ಇಯರ್ ಬಡ್ಸ್, ಪರ್ಫ್ಯೂಮ್, ಬಾಡಿ ಬಟರ್, ನೀರಿನ ಬಾಟಲ್, ಇದರ ಜೊತೆ ತಿಂಡಿ, ಚಾಕಲೇಟ್ಸ್ ಎಲ್ಲನೂ ಇವರು ಈ ದೊಡ್ಡ ಬ್ಯಾಗ್ ನಲ್ಲಿ ಹಾಕೋಳ್ತಾರಂತೆ. ಇದ್ರ ಬಗ್ಗೆ ಏನ್ ಹೇಳ್ತೀರಾ ನೀವು..?
 

Read more Photos on
click me!

Recommended Stories