ಗಂಡನಿಗೋಸ್ಕರ ಮೂಗು ಚುಚ್ಚಿಸಿಕೊಂಡ ಯಶಸ್ವಿನಿ; ವೇದಿಕೆ ಮೇಲೆ 2 ಡೈಮೆಂಡ್‌ ಗಿಫ್ಟ್‌ ಕೊಟ್ಟ ನಿರಂಜನ್ ದೇಶಪಾಂಡೆ

Published : Feb 28, 2023, 04:52 PM IST

ತಮ್ಮ ಪಟ್ ಪಟಾಕಿ ಮಾತುಗಳು, ಕಾಮಿಡಿ, ಉತ್ತಮ ನಿರೂಪಣಾ ಶೈಲಿಯಿಂದ ಜನರ ಮನಗೆದ್ದಿರುವ ಆಂಕರ್ ನಿರಂಜನ್ ದೇಶ್’ಪಾಂಡೆ ಇದೀಗ ತಮ್ಮ ಪತ್ನಿಯ ಬರ್ತ್ ಡೇಯನ್ನು ಭರ್ಜರಿಯಾಗಿ ಸೆಲೆಬ್ರೇಟ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗುತ್ತಿವೆ. 

PREV
17
ಗಂಡನಿಗೋಸ್ಕರ ಮೂಗು ಚುಚ್ಚಿಸಿಕೊಂಡ ಯಶಸ್ವಿನಿ; ವೇದಿಕೆ ಮೇಲೆ 2 ಡೈಮೆಂಡ್‌ ಗಿಫ್ಟ್‌ ಕೊಟ್ಟ ನಿರಂಜನ್ ದೇಶಪಾಂಡೆ

ಕನ್ನಡ ಚಿತ್ರರಂಗದ ಅದ್ಬುತ ನಟ, ಕಿರುತೆರೆ ನಿರೂಪಕರಲ್ಲಿ ಒಬ್ಬರು ನಿರಂಜನ್ ದೇಶಪಾಂಡೆ (Niranjan Deshpande). ಇವರು ತಮ್ಮ ಮಾತುಗಾರಿಕೆ, ಹಾಸ್ಯದಿಂದಲೇ ಸಖತ್ ಫೇಮಸ್ ಆಗಿದ್ದಾರೆ. ಇವರ ಜೊತೆಗೆ ಗಿಚ್ಚಿ ಗಿಲಿಗಿಲಿಯಲ್ಲಿನ ಸ್ಪರ್ಧಿಯಾಗಿದ್ದ ಇವರ ಪತ್ನಿ ಯಶಸ್ವಿನಿ ದೇಶ್‌ಪಾಂಡೆ ಸಹ ಇದೀಗ ಜನರಿಗೆ ಹತ್ತಿರವಾಗಿದ್ದಾರೆ. 
 

27

ಇತ್ತೀಚೆಗಷ್ಟೆ ಹುಟ್ಟು ಹಬ್ಬ ಆಚರಿಸಿಕೊಂಡ ಯಶಸ್ವಿನಿ ದೇಶಪಾಂಡೆಗೆ (Yahsaswini Deshpande) ಪತಿ ಭರ್ಜರಿಯಾಗಿಯೇ ಪಾರ್ಟಿ ನೀಡಿದ್ದಾರೆ. ಹುಟ್ಟು ಹಬ್ಬದ ವಿಡೀಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ನಿರಂಜನ್ ಇವತ್ತು ತಮ್ಮ ಮುದ್ದಿನ ಹೆಂಡತಿ ನನ್ನ ಮುದ್ದು ಗುಬ್ಬಿ ಮರಿಯ ಹುಟ್ಟುಹಬ್ಬ, ನಿಮ್ಮೆಲ್ಲರ ಶುಭ ಹಾರೈಕೆ ಆಕೆಯ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ. ಈ ಪಾರ್ಟಿಯಲ್ಲಿ ಗಿಚ್ಚಿ ಗಿಲಿಗಿಲಿಯ ಸ್ಪರ್ಧಿಗಳು ಸಹ ಹಾಜರಿದ್ದರು.

37

ಇನ್ನು ಇದರ ಜೊತೆಗೆ ಇವರು ಇನ್ನೊಂದೆಡೆ ತಮ್ಮ ಪತ್ನಿಯ ಬರ್ತ್ ಡೇ ದಿನ ಹುಟ್ಟುಹಬ್ಬ ಆಚರಿಸಿಕೊಂಡ ಗೀತಾ ಸೀರಿಯಲ್ ಖ್ಯಾತಿಯ ಭವ್ಯಾ ಗೌಡ (Bhavya Gowda) ಅವರ ಜೊತೆಯೂ ಸೇರಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಒಂದೇ ದಿನ ಹುಟ್ಟು ಹಬ್ಬ ಆಚರಿಸಿಕೊಂಡ ಹೆಂಡತಿ ಮತ್ತು ಕ್ಯೂಟ್ ಲಿಟಲ್ ಸಿಸ್ಟರ್ ಇಬ್ಬರಿಗೂ ಹ್ಯಾಪಿ ಬರ್ತ್ ಡೆ ಎಂದು ವಿಶ್ ಮಾಡಿದ್ದಾರೆ. 
 

47

ಕಳೆದ ವರ್ಷ ಕಲರ್ಸ್‌ ಕನ್ನಡ (colors Kannada) ವಾಹಿನಿಯ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಸ್ಪರ್ಧಿಗಳ ಜೊತೆ ನಿರಂಜನ್ ಬರ್ತ್ ಡೇ ಆಚರಿಸಿಕೊಂಡಾಗ ನಿರಂಜನ್ ಪತ್ನಿ ಯಶಸ್ವಿನಿ ಪತಿಗೆ ಸರ್ಪ್ರೈಸ್ ನೀಡುವ ಸಲುವಾಗಿ ನಿರಂಜನ್ ಗೆ ಇಷ್ಟವೆಂದು ಮೂಗು ಬೊಟ್ಟು ಚುಚ್ಚಿಸಿಕೊಂಡಿದ್ದರು. ಆ ಖುಷಿಯಲ್ಲಿ ನಿರಂಜನ್ ಪತ್ನಿಗೆ ಡೈಮಂಡ್ ಉಡುಗೊರೆಯನ್ನು ಸಹ ನೀಡಿದ್ದರು. 

57

'ಬಿಗ್ ಬಾಸ್ ಕನ್ನಡ ಸೀಸನ್ 4' (Bigg Boss season 4) ಮೂಲಕ ಜನಪ್ರಿಯತೆ ಗಳಿಸಿದ್ದ ನಿರಂಜನ್ ಕಾರ್ಯಕ್ರಮದಿಂದ ಹೊರನಡೆದ ನಂತರ ಯಶಸ್ವಿನಿ ಜೊತೆ 2017ರಲ್ಲಿ ವಿವಾಹವಾದರು. ಬಿಗ್ ಬಾಸ್ ನಲ್ಲಿ ಭಾಗವಹಿಸಲು ಆಫರ್ ಬಂದಿದ್ದರಿಂದ ಇವರು ಮದ್ವೆ ದಿನಾಂಕವನ್ನು ಮುಂದೆ ಹಾಕಿದ್ದರು. ಬಳಿಕ ಇವರು ಇಬ್ಬರ ಪ್ರೀತಿಗೆ ಕಾರಣವಾದ ಮಜಾ ಭಾರತ ಶೂಟಿಂಗ್ ಸೆಟ್ ನಲ್ಲೇ ಮದ್ವೆಯಾಗಿದ್ದರು. 
 

67

ಪ್ರೀತಿಸಿ ಮದ್ವೆಯಾದ ಈ ಜೋಡಿಗಳನ್ನು ಈಗಲೂ ನೋಡಿದ್ರೆ, ಈಗಷ್ಟೆ ಲವ್ ಮಾಡ್ತಿರೋ ಜೋಡಿಗಳಂತೆ ಕಾಣುತ್ತೆ. ಯಾವಾಗಲೂ ಒಬ್ಬರಿಗೊಬ್ಬರು ಜೊತೆಯಾಗಿ, ಕೆಲವೊಮ್ಮೆ ಪ್ರೀತಿ ಮಾಡುತ್ತಾ, ಕೆಲವೊಮ್ಮೆ ಕಾಲೆಳೆಯುತ್ತಾ, ಕಾಣಿಸಿಕೊಳ್ಳುವ ಈ ಜೋಡಿಗಳನ್ನು ನೋಡಿದ್ರೆ ಪ್ರೇಕ್ಷಕರಿಗೆ ತುಂಬಾನೆ ಪ್ರೀತಿ. 

77

ಯಶಸ್ವಿನಿ ಮತ್ತು ನಿರಂಜನ್ ಇಬ್ಬರೂ ಸೋಶಿಯಲ್ ಮೀಡೀಯಾದಲ್ಲಿ (social media) ಸಾಕಷ್ಟು ಆಕ್ಟೀವ್ ಆಗಿದ್ದು, ಇಬ್ಬರೂ ಜೊತೆಯಾಗಿ ಹಲವಾರು ರೀಲ್ ಶೇರ್ ಮಾಡುತ್ತಾ, ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ. ಇವರಿಬ್ಬರ ಮುದ್ದಾದ ಜೋಡಿ ನೋಡಿ, ಅಭಿಮಾನಿಗಳು ಯಾರ ದೃಷ್ಟಿಯೂ ಬೀಳದಿರಲಿ, ನಿಬ್ಬಿಬ್ಬರ ಜೋಡಿ ಹೀಗೆ ನೂರ್ಕಾಲ ಬಾಳಲಿ ಎಂದು ಆಶಿಸಿದ್ದಾರೆ. 

Read more Photos on
click me!

Recommended Stories