ಬಿಗ್ ಬಾಸ್ ಮುಗಿದ್ ಮೇಲೆ ಹೆಂಡ್ತೀನೇ ಬೆಸ್ಟ್ ಮನೆಮದ್ದು ಎಂದ ವಿನಯ್ ಗೌಡ

Published : Jan 30, 2024, 06:12 PM IST

ಅಂತೂ ಇಂತೂ ಬಿಗ್ ಬಾಸ್ ಸೀಸನ್ 10 ಕಾರ್ಯಕ್ರಮ ಯಶಸ್ವಿಯಾಗಿ ಕೊನೆಗೊಂಡಿದೆ. ಬಿಗ್ ಬಾಸ್ ಮನೆಯಿಂದ ಹೊರ ಬಂದದ್ದೆ ತಡ ವಿನಯ್ ತಮ್ಮ ಹೆಂಡ್ತೀನ ತುಂಬಾನೆ ಮಿಸ್ ಮಾಡಿರೋದಾಗಿ ಹೇಳಿದ್ದಾರೆ.   

PREV
17
ಬಿಗ್ ಬಾಸ್ ಮುಗಿದ್ ಮೇಲೆ ಹೆಂಡ್ತೀನೇ ಬೆಸ್ಟ್ ಮನೆಮದ್ದು ಎಂದ ವಿನಯ್ ಗೌಡ

ಕಳೆದ ಮೂರು ತಿಂಗಳಿನಿಂದ ಸಾಕಷ್ಟು ಸದ್ದು ಮಾಡಿದ್ದ, ಕಾಂಟ್ರವರ್ಸಿ ಕ್ರಿಯೇಟ್ ಮಾಡಿದ್ದ ಬಿಗ್ ಬಾಸ್ ಕನ್ನಡ ಸೀಸನ್ 10 ಅಂತೂ ಇಂತೂ ಕೊನೆಗೊಂಡಿದೆ. ವಿನಯ್ ಗೌಡ 3ನೇ ರನ್ನರ್ ಅಪ್ (3rd runner up) ಆಗಿ ಹೊರ ಬಂದಿದ್ದೂ ಆಗಿದೆ. 

27

ಬಿಗ್ ಬಾಸ್ ಸೀಸನ್ 10 ರಲ್ಲಿ ಹೆಚ್ಚು ಸೆನ್ಸೇಶನ್ ಕ್ರಿಯೇಟ್ ಮಾಡಿದ್ದ ಸ್ಪರ್ಧಿ ಅಂದ್ರೆ ಅದು ವಿನಯ್ ಗೌಡ (Vinay Gowda). ತಮ್ಮ ಟಾಸ್ಕ್, ಮಾತು, ಜಗಳ, ಕೋಪದಿಂದ ಪ್ರತಿ ಎಪಿಸೋಡ್ ಗಳಲ್ಲೂ ಸಹ ವಿನಯ್ ಸದ್ದು ಮಾಡಿದ್ದರು. 

37

ಗೆಲ್ಲುವ ಕುದುರೆಯಾಗಿದ್ದ ವಿನಯ್ ಗೌಡ ಖಂಡಿತವಾಗಿಯೂ ಟಾಪ್ 2 ನಲ್ಲಿ ಇದ್ದೇ ಇರುತ್ತಾರೆ ಅನ್ನೋದು, ಅಭಿಮಾನಿಗಳ ಜೊತೆಗೆ ಮನೆಯೊಳಗೆ ಇದ್ದವರದ್ದೂ ಅಭಿಪ್ರಾಯವಾಗಿತ್ತು, ಆದರೆ ಶಾಕಿಂಗ್ ಎನ್ನುವಂತೆ ವಿನಯ್ 3ನೇ ರನ್ನರ್ ಅಪ್ ಆಗುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಹುಟ್ಟಿಸಿದ್ದಾರೆ. 

47

ವಿನಯ್ ಸೋತಿರೋದಕ್ಕೆ ಅಭಿಮಾನಿಗಳು ಇವತ್ತಿಗೂ ಕೂಡ ಬೇಸರ ವ್ಯಕ್ತಪಡಿಸುತ್ತಿದ್ದು, ವಿನಯ್ ಬ್ರೋ ನಿಮಗೆ ತುಂಬಾ ಮೋಸ ಮಾಡ್ಬಿಟ್ರು ನಿಮಗೆ. ಇಡೀ ಬಿಗ್ ಬಾಸ್ ಮನೆಯಲ್ಲಿ (Bigg Boss House) ನಿಮ್ಮಂತೆ ಆಟ ಆಡಿರೋರು ಯಾರು ಇಲ್ಲ ಎಂದು, ನೀವು ರಿಯಲ್ ವಿನ್ನರ್ ಎಂದಿದ್ದಾರೆ. 

57

ಮತ್ತೊಬ್ಬ ಅಭಿಮಾನಿ ನನ್ನ ಪ್ರಕಾರ ವಿನಯ್ ಅವರೇ ನೀವೇ ನಿಜವಾದ ವಿನ್ನರ್. ನಿಮಗೆ ನನ್ನ ಬೆಂಬಲ ಮತ್ತು ಪ್ರೀತಿ ಬಿಗ್ ಬಾಸ್ ನಲ್ಲಿ ಮಾತ್ರವಲ್ಲ, ಜೀವನ ಪೂರ್ತಿ ಇರುತ್ತೆ. ನೀವು ಹಲವಾರು ಜನರ ಹೃದಯ ಗೆದ್ದಿದ್ದೀರಿ, ಅದು ಕಪ್ ಗಿಂತಲೂ ಹೆಚ್ಚು. ನೀವು ಕನ್ನಡ ಫಿಲಂ ಇಂಡಷ್ಟ್ರಿಯ ಭವಿಷ್ಯದ ತಾರೆ ಎಂದಿದ್ದಾರೆ. 

67

ಇನ್ನು ಬಿಗ್ ಬಾಸ್ ಆಟ ಮುಗಿಸಿ, ಮನೆಗೆ ಬಂದಿರುವ ವಿನಯ್ ಗೌಡ, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪತ್ನಿ ಜೊತೆಗಿನ ಮುದ್ದಾದ ಫೋಟೋಗಳನ್ನು ಶೇರ್ ಮಾಡುವ ಮೂಲಕ ತಮ್ಮ ಪ್ರೀತಿಯ ಆಳವನ್ನು ವ್ಯಕ್ತಪಡಿಸಿದ್ದಾರೆ. ಪತ್ನಿ ಅಕ್ಷತಾಗೆ (Akshatha) ನಿನ್ನನ್ನು ತುಂಬಾನೆ ಮಿಸ್ ಮಾಡಿದೆ ಎಂದಿದ್ದಾರೆ. 
 

77

ಅಷ್ಟೇ ಅಲ್ಲ ಒಂದು ಫೋಟೋದಲ್ಲಿ ನನ್ನ ಜೀವನದ ಪ್ರೀತಿ (love of my life)ಎಂದು ಹೇಳಿ ಇಬ್ರು ಜೊತೆಯಾಗಿರುವ ಮುದ್ದಾದ ಫೋಟೊ ಹಾಕಿದ್ರೆ, ಇನ್ನೊಂದು ಫೋಟೊ ಹಂಚಿಕೊಳ್ಳುವ ಮೂಲಕ ಅದೆಷ್ಟೋ ಮನೆಮದ್ದುಗಳಲ್ಲಿ, ಹೆಂಡತಿಯೇ ಬೆಸ್ಟ್ ಮದ್ದು ಎಂದು ಬರೆದುಕೊಳ್ಳುವ ಮೂಲಕ, ಎಲ್ಲಾ ನೋವನ್ನು ಮರೆಸುವ ಶಕ್ತಿ ಹೆಂಡ್ತಿಗೆ ಮಾತ್ರ ಇದೆ ಅನ್ನೋದನ್ನು ತಿಳಿಸಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories