ಕನ್ನಡ ಧಾರಾವಾಹಿಗಳಲ್ಲಿ ಖಳನಾಯಕರ ಪಾತ್ರಗಳು ಹೀರೋಗಳಿಗಿಂತ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಿವೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿವೆ. ಈ ಲೇಖನದಲ್ಲಿ ಕೆಲವು ಜನಪ್ರಿಯ ಧಾರಾವಾಹಿಗಳ ಖಳನಾಯಕರ ಬಗ್ಗೆ ಮಾಹಿತಿ ನೀಡಲಾಗಿದೆ.
ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುವ ಸೀರಿಯಲ್‌ಗಳ ಹೀರೋಗಳಿಗಿಂತ ವಿಲನ್‌ಗಳೇ ಅಟ್ಯ್ರಾಕ್ಟಿವ್ ಆಗಿ ಕಾಣಿಸುತ್ತಾರೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿವೆ. ಧಾರಾವಾಹಿಯಲ್ಲಿ ಖಳನಾಯಕನಾಗಿ ವೀಕ್ಷಕರಿಂದ ಮೆಚ್ಚುಗೆ ಗಳಿಸಿರುವ ಆ ಕಲಾವಿದರು ಯಾರು ಎಂದು ನೋಡೋಣ ಬನ್ನಿ.
26
1.ಶ್ರಾವಣಿ ಸುಬ್ರಮಣ್ಯ
ಝೀ ಕನ್ನಡ ಧಾರಾವಾಹಿಯಲ್ಲಿ ಪ್ರಸಾರವಾಗುವ ಶ್ರಾವಣಿ ಸುಬ್ರಮಣ್ಯದ ಕಥಾ ನಾಯಕನಾಗಿ ಅಮೋಘ ಆದಿತ್ಯನಾಗಿ ನಟಿಸುತ್ತಿದ್ದಾರೆ. ಸೀರಿಯಲ್‌ನಲ್ಲಿ ಮಧ್ಯಮ ಕುಟುಂಬದ ಯುವಕನಾಗಿ ಕಾಣಿಸಿಕೊಂಡಿರುವ ಅಮೋಘ, ತುಂಬಾನೇ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ಸೀರಿಯಲ್ ಹೊರತಾಗಿ ಅಮೋಘ ರಿಯಲ್ ಲೈಫ್‌ನಲ್ಲಿ ಸಖತ್ ಸ್ಟೈಲಿಶ್ ಆಗಿದ್ದಾರೆ. ಸತ್ಯ ಧಾರಾವಾಹಿಯಲ್ಲಿಯೂ ಸಿಂಪಲ್ ಹುಡುಗನಾಗಿಯೇ ನಟಿಸಿದ್ದರು.
36
ಇದೇ ಸೀರಿಯಲ್ ನಲ್ಲಿ ಮದನ್ ಪಾತ್ರದಲ್ಲಿ ನಟಿಸುತ್ತಿರುವ ಕಲಾವಿದ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮದನ್ ಪಾತ್ರದಲ್ಲಿ ನಟಿಸುತ್ತಿರುವ ನಟನ ಹೆಸರು ಅಥರ್ವ್. ತಮ್ಮ ಖಡಕ್ ಲುಕ್ ಮತ್ತು ಡ್ರೆಸಿಂಗ್ ಸ್ಟೈಲ್‌ನಿಂದ ತಮ್ಮದೇ ಆದ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಗೌರಿ ಶಂಕರ್ ಮತ್ತು ರಜಿಯಾ ರಾಮ್ ಧಾರಾವಾಹಿಯಲ್ಲಿಯೂ ಅಥರ್ವ್ ನಟಿಸಿದ್ದಾರೆ. ಅರ್ಥವ್ ಅವರ ಫಾರ್ಮಲ್ ಲುಕ್ ನೋಡುಗರಿಗೆ ಇಷ್ಟವಾಗುತ್ತದೆ.
46
2.ಅಮೃತಧಾರೆ
ಅಮೃತಧಾರೆಯ ಹೀರೋ ರಾಜೇಶ್ ನಟರಂಗ. ಮಧ್ಯವಯಸ್ಕನ ಪಾತ್ರದಲ್ಲಿ ರಾಜೇಶ್ ನಟಿಸುತ್ತಿದ್ದು, ಅವರೇ ಚಿತ್ರದ ನಾಯಕ. ರಾಜೇಶ್ ತೆರೆ ಮೇಲೆ ಸೂಟ್ ಮತ್ತು ಕುರ್ತಾ ಧರಿಸಿ ರಾಯಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಧಾರಾವಾಹಿಯ ನೆಗೆಟಿವ್ ರೋಲ್ ಜೈ ಪಾತ್ರದಲ್ಲಿ ನಟಿಸುತ್ತಿರುವ ಯುವ ನಟ ಎಲ್ಲರನ್ನು ಆಕರ್ಷಿಸುತ್ತಿದ್ದಾರೆ.
56
ಜೈದೇವ್ ಪಾತ್ರಕ್ಕೆ ಜೀವ ತುಂಬಿದ ಹ್ಯಾಂಡ್‌ಸಮ್ ಹುಡುಗನ ಹೆಸರು ರಾಣವ್ ಗೌಡ. ಮಂಡ್ಯ ಮೂಲದ ರಾಣವ್ ಗೌಡ, ಬಾಲ ಕಲಾವಿದನಾಗಿ ಬಣ್ಣದ ಲೋಕಕ್ಕೆ ಬಂದವರು. ವಿರಾಟ್, ಮತ್ತೆ ಬಾ ಉಪೇಂದ್ರ, ಶ್ರೀಕಂಠ ಸಿನಿಮಾಗಳಲ್ಲಿಯೂ ರಾಣವ್ ನಟಿಸಿದ್ದಾರೆ
66
3.ವಧು
ಕಲರ್ಸ್ ಕನ್ನಡ ಸೀರಿಯಲ್‌ನಲ್ಲಿ ನಾಯಕನಾಗಿ ನಟಿಸುತ್ತಿರುವ ಅಭಿಷೇಕ್ ಶ್ರೀಕಾಂತ್ ಸಹ ಖಳನಾಯಕನಾಗಿ ಬಣ್ಣ ಹಚ್ಚಿದ್ದರು. ಲಕ್ಷಣ ಧಾರಾವಾಹಿಯಲ್ಲಿ ಮೌರ್ಯನಾಗಿ ಅಭಿಷೇಕ್ ನಟಿಸಿದ್ರು. ಇದೀಗ ವಧು ಸೀರಿಯಲ್‌ನಲ್ಲಿ ಸಾರ್ಥಕ್ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ.