ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಹಾರರ್ ಸ್ಟೋರಿಗೆ ಥ್ರಿಲ್ ಆದ ವೀಕ್ಷಕರು… .ಕಾವೇರಿಗೆ ತಾಯಿತ ಕಟ್ಟಿಸೋಕೆ ಸಲಹೆ

ಲಕ್ಷ್ಮೀ ಬಾರಮ್ಮ ಧಾರಾವಾಹಿ ಸದ್ಯ ಹಾರರ್ ಥ್ರಿಲ್ಲರ್ ಆಗಿ ಬದಲಾಗಿದೆ. ಕಳೆದ ಕೆಲವು ದಿನಗಳ ಎಪಿಸೋಡ್ ಗಳು ವೀಕ್ಷಕರಿಗೆ ಥ್ರಿಲ್ ಮೂಡಿಸಿದ್ದು, ಹೀಗೆ ಮುಂದುವರೆಯಲಿ ಎಂದು ಆಶಿಸುತ್ತಿದಾರೆ. 
 

ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಈಗ ಎಲ್ಲವೂ ಬದಲಾಗಿದೆ, ತನ್ನ ಕುತಂತ್ರದಿಂದ ತನಗೆ ಬೇಕಾದ್ದನ್ನ ಮಾಡಿ, ಎಲ್ಲರೆದುರು ತಾನು ಒಳ್ಳೆಯವಳಂತೆ ನಟಿಸುತ್ತಿದ್ದ ಕಾವೇರಿಗೆ ಈಗ ಕೂತಲ್ಲೇ ನಡುಕ ಹುಟ್ಟುವಂತಹ ಸನ್ನಿವೇಶ ಎದುರಾಗಿದೆ, ಕೂರಲಾಗದೆ, ನಿಲ್ಲಲಾಗದೆ, ಸರಿಯಾಗಿ ನಿದ್ರೆ ಮಾಡಲಾರದೆ ಒದ್ದಾಡುತ್ತಿದ್ದಾರೆ. 
 

ಕೀರ್ತಿಯನ್ನು ಬೆಟ್ಟದ ಮೇಲಿಂದ ನೂಕಿ ಕೊಲೆ ಮಾಡಿರುವ ಕಾವೇರಿ, ತಾನು ತಪ್ಪು ಮಾಡಿದ್ದೇನೆ ಅನ್ನೋ ಬೇಸರವೂ ಇಲ್ಲದೇ, ತಾನು ಮಾಡಿದ್ದೆ ಸರಿ ಎಂದು ಸಮರ್ಥಿಸಿಕೊಂಡು, ಎಲ್ಲರೂ ತನ್ನನ್ನೆ ನಂಬಿ, ಕೀರ್ತಿಯನ್ನು ದೂರುವಂತೆ ಮಾಡುವ ದುರ್ಬುದ್ಧಿ. ಎಲ್ಲಾ ತಾನು ಅಂದುಕೊಂಡ ಹಾಗೆ ಇದೆ ಎನ್ನುವಷ್ಟರಲ್ಲಿ ಲಕ್ಷ್ಮಿಯ ವರ್ತನೆ ಕಾವೇರಿಗೆ ತಲುನೋವು ತಂದಿದೆ. 
 


ಹೌದು, ಕೀರ್ತಿ ಹೆಸರಲ್ಲಿ ಕಾವೇರಿ ಮನೆಯಲ್ಲಿ ಶ್ರಧ್ದಾಂಜಲಿ ಸಭೆ ಇಟ್ಟಿದ್ದರು, ಆದ್ರೆ ಲಕ್ಷ್ಮೀ ಕೀರ್ತಿಯಾಗಿ ಬದಲಾಗಿ, ಕೀರ್ತಿಯಂತೆ ಡ್ರೆಸ್ ತೊಟ್ಟು, ಕೀರ್ತಿಯಂತೆ ಮಾತನಾಡೋದಕ್ಕೆ ಆರಂಭಿಸಿದ್ದಾಳೆ, ಅಷ್ಟೇ ಅಲ್ಲದೇ ಗಂಗಾ ಕೂಡ, ಲಕ್ಷ್ಮೀ ರಾತ್ರಿಯಿಂದ ಮನೆಗೆ ಬರೋವಾಗ ಕಾಲಲ್ಲಿ ನಾಗವಲ್ಲಿ ಗೆಜ್ಜೆ ಇತ್ತು ಅಂದಿದ್ದಾಳೆ. 
 

ಅಷ್ಟೇ ಅಲ್ಲ ಲಕ್ಷ್ಮೀ ಮೈಮೇಲೆ ಕೀರ್ತಿಯ ದೆವ್ವ ಇದೆ, ಇನ್ನು ಮುಂದೆ ಕೀರ್ತಿ ಮನೆಲಿ ಯಾರನ್ನೂ ಸುಮ್ನೆ ಬಿಡೋದಿಲ್ಲ ಅಂತಾನೂ ಗಂಗಾ ಹೇಳಿದ್ದು, ಎಲ್ಲರಲ್ಲೂ ನಡುಕ ಹುಟ್ಟಿಸಿದೆ, ಅದರಲ್ಲೂ ಕೀರ್ತಿಯನ್ನು ಕೊಂದ ಪಾಪಿ ಕಾವೇರಿ ಕೂಡ ತಲ್ಲಣಿಸಿ ಹೋಗಿದ್ದಾರೆ. 
 

ಈ ಹಾರರ್ ಥ್ರಿಲ್ಲರ್ (Horror thriller) ಸಂಚಿಕೆ ನೋಡಿ ವೀಕ್ಷಕರು ಸಖತ್ ಥ್ರಿಲ್ ಆಗಿದ್ದಾರೆ. ಗಂಗಾ , ಲಕ್ಷ್ಮೀ ಆಕ್ಟಿಂಗ್ ತುಂಬಾ ಚೆನ್ನಾಗಿದೆ. ಇವರಿಬ್ಬರು ಸೇರಿ ಕಾವೇರಿ ಬಾಯಿಯಿಂದ ಸತ್ಯ ತಿಳಿದುಕೊಳ್ಳೋಕೆ ಮಾಡುವ ನಾಟಕವೇ ಇರಬೇಕು ಅಂತಾನು ಹೇಳಿದ್ದಾರೆ. 
 

ಅಷ್ಟೇ ಅಲ್ಲದೇ ಬಹು ದಿನಗಳಿಂದ ಯಾವ ಧಾರಾವಾಹಿಗಳಲ್ಲೂ ಇರದ ಭೂತ ಪ್ರೇತ, ಲಕ್ಷ್ಮೀ ಬಾರಮ್ಮ ದಲ್ಲಿ ಇದೆ, ಇದನ್ನ ನೋಡೋದಕ್ಕೆ ತುಂಬಾನೆ ಚೆನ್ನಾಗಿದೆ, ಹಾರರ್ ಥ್ರಿಲ್ಲಿಂಗ್ ಸ್ಟೋರಿ ಹೀಗೆ ಮುಂದುವರೆದುಕೊಂಡು ಹೋದ್ರೆ ಸಖತ್ತಾಗಿರುತ್ತೆ, ಹಾರರ್ ಮೂವಿ ಥರ ಇದೆ ಸೀರಿಯಲ್, ಉತ್ತಮ ಮನರಂಜನೆ ಕೂಡ ಸಿಗುತ್ತೆ , ಟಿಆರ್ಪಿ ಕೂಡ ಟಾಪಲ್ಲಿರುತ್ತೆ ಎಂದಿದ್ದಾರೆ ಜನ. 
 

ಜೊತೆಗೆ ಕಾವೇರಿಗೆ ಜನ ಬಾಯಿ ತುಂಬಾ ಬೈದಿದ್ದು ಇದೆಲ್ಲಾ ಅನುಭವಿಸೋ ಬದಲು, ಸತ್ತೋಗ್ಬಿಡು ಕಾವೇರಿ. ಅಲ್ಲೂ ನಿಂಗೆ ನೆಮ್ಮದಿ ಇಲ್ಲ ಬಿಡು, ಅಲ್ಲಿ ನಿಮ್ಮ ಅತ್ತೆ ಮತ್ತೆ ಕೀರ್ತಿ ನಿನ್ನ ದಾರಿನೇ ಕಾಯ್ತವ್ರೆ ಎಂದಿದ್ದಾರೆ. ಇನ್ನೊಬ್ಬರು ಕಾವೇರಿ ಅವರೇ ಯಾವ್ದಕ್ಕು ದೇವಸ್ಥಾನಕ್ಕೆ ಹೋಗಿ ತಾಯ್ತ ಕಟ್ಟಿಸಿಕೊಳ್ಳಿ ಎಂದು ಸಲಹೆ ಕೂಡ ಕೊಟ್ಟಿದ್ದಾರೆ. 
 

Latest Videos

click me!