ಡಿಕೆಡಿ ವೇದಿಕೆಯಲ್ಲಿ ಓಂ ಚಿತ್ರ ರೀಕ್ರಿಯೇಟ್ ಮಾಡಿದ ಸ್ಪರ್ಧಿಗಳು… ಕಂಠಿ ಪರ್ಫಾರ್ಮೆನ್ಸ್’ಗೆ ಶಿವಣ್ಣನೇ ಫಿದಾ

First Published | Aug 29, 2024, 4:41 PM IST

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಓಂ ಸಿನಿಮಾ ರೀಕ್ರಿಯೇಟ್ ಮಾಡಿದ್ದು, ಮನಿಷಾ ಜೊತೆ 'ಓಂ' ಚಿತ್ರದ ಕಂಪನ ಸೃಷ್ಟಿಸಿದ ಕಂಠಿಗೆ ಮಹಾನಟಿ ಸೋನಿ ಮುಲೇವ ಸಾಥ್ ಕೊಟ್ಟಿದ್ದು, ಕಂಠಿ ನಟನೆಗೆ ಶಿವಣ್ಣ ಮನಸೋತಿದ್ದಾರೆ. 
 

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ತಮ್ಮ ವಿಭಿನ್ನವಾದ ಎಪಿಸೋಡ್ ಗಳ ಮೂಲಕ ಭರ್ಜರಿ ಸೌಂಡ್ ಮಾಡ್ತಿದೆ. ಇದೀಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಮಹಾನಟಿಯರ (Mahanati)ಸಂಗಮ ನಡೆದಿದ್ದು, ಪುಟ್ಟಕ್ಕನ ಮಕ್ಕಳು ಖ್ಯಾತಿಯ ಕಂಠಿ, ಮನಿಷಾ ಹಾಗೂ ಮಹಾನಟಿಯ ಸೋನಿ ಮುಲೇವ ಅಭಿನಯಕ್ಕೆ ಚಪ್ಪಾಳೆ ಸಿಕ್ಕಿದೆ. 
 

ಇದು ಎರಡು ರಿಯಾಲಿಟಿ ಶೋಗಳ (reality show) ಮಹಾಸಂಗಮವಾಗಿದ್ದು, ಶಿವರಾಜ್ ಕುಮಾರ್, ರಕ್ಷಿತಾ, ವಿಜಯ್ ರಾಘವೇಂದ, ಚಿನ್ನಿ ಮಾಸ್ಟರ್ ಜೊತೆಗೆ ಮಹಾನಟಿಯ ಪ್ರೇಮ, ನಿಶ್ವಿಕಾ ನಾಯ್ಡು ಮತ್ತು ತರುಣ್ ಸುಧೀರ್ ಮತ್ತು ಸೋನಾರ್ ಮೊಂತೆರೋ ಕೂಡ ಭಾಗಿಯಾಗಿದ್ದರು. 
 

Tap to resize

ಕಂಠಿ ಮತ್ತು ತಂಡ ಡಿಕೆಡಿ ವೇದಿಕೆಯಲ್ಲಿ ಶಿವಣ್ಣ ಮತ್ತು ನಟಿ ಪ್ರೇಮ ಅಭಿನಯದ ಸೂಪರ್ ಹಿಟ್ ಓಂ ಸಿನಿಮಾ ರೀಕ್ರಿಯೇಟ್ ಮಾಡಿದ್ದು,  ಭರ್ಜರಿ ಪರ್ಫಾರ್ಮೆನ್ಸ್ ಗೆ ಡಿಕೆಡಿ ವೇದಿಕೆಯ ಎಲ್ಲಾ ಗಣ್ಯರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ, ಜೊತೆಗೆ ಶಿವಣ್ಣ (Shivaraj Kumar)ಕೂಡ ಮೆಚ್ಚುಗೆ ಸೂಚಿಸಿದ್ದಾರೆ. 
 

ಕಂಠಿ ಥೇಟ್ ಶಿವಣ್ಣನಂತೆ ಲಾಂಗು ಮಚ್ಚು ಹಿಡಿದುಕೊಂಡು ಬಂದು ಸಖತ್ತಾಗಿ ನಟಿಸಿದ್ರೆ, ಸೋನಿ ಪ್ರೇಮಾ ಆಗಿ ಭರ್ಜರಿ ಅಭಿನಯ ನೀಡಿದ್ದಾರೆ. ಇವರ ನಟನೆ ನೋಡಿ, ಸ್ವತಃ ನಟಿ ಪ್ರೇಮಾ ಖುಷಿಯಲ್ಲಿ ವಿಸಿಲ್ ಹಾಕಿದ್ದಾರೆ. ತರುಣ್ ಸುಧೀರ್ (Tarun Sudhir) ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ. 
 

ಕಂಠಿ, ಸೋನು ಅಭಿನಯ ನೋಡಿ ಮತ್ತೆ ಓಂ ಚಿತ್ರವನ್ನು ನೋಡಿದಂತಾಯ್ತು ಎಂದಿರುವ ನಟಿ ರಕ್ಷಿತಾ ಪ್ರೇಮ್. ಈಗಲೂ ಸಿನಿಮಾಗೆ ಸೇಮ್ ಕ್ರೇಜ್ ಇದೆ. ಜುಂ ಅನಿಸುವಂತೆ ಸಿನಿಮಾ ಇದು ಎಂದಿದ್ದಾರೆ. 
 

ಇನ್ನು ಓಂ ಸಿನಿಮಾದಲ್ಲಿ ಅದ್ಭುತ ಅಭಿನಯದಿಂದ ಕೋಟ್ಯಾಂತರ ಕನ್ನಡಿಗರ ಆರಾಧ್ಯದೈವವಾದ ಶಿವರಾಜ್ ಕುಮಾರ್ ಎದ್ದು ನಿಂತು ಮೆಚ್ಚುಗೆ ಸೂಚಿಸಿದ್ದು, ಕಂಠಿ ನನ್ನ ಫೇವರಿಟ್ ಸ್ಪರ್ಧಿಗಳಲ್ಲಿ ಒಬ್ಬರು ಎಂದಿದ್ದಾರೆ. 
 

ಅಷ್ಟೇ ಅಲ್ಲ ಓಂ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಪ್ರೇಮಾ (Prema )ಕೂಡ ಥ್ರಿಲ್ ಆಗಿದ್ದು, ತಮ್ಮ ಸಿನಿಮಾವನ್ನು ನೆನಪಿಸಿಕೊಂಡು, ಓಂ ಸಿನಿಮಾ ಒಂದೇ ಸಾಕು ನನ್ನ ಜೀವನದಲ್ಲಿ ಎಂದಿದ್ದಾರೆ. ಜೊತೆ ಕಂಠಿ ಅದ್ಭುತ ಅಭಿನಯಕ್ಕೆ ವೀಕ್ಷಕರು ಸಹ ಮನಸೋತಿದ್ದು, ಡಿಕೆಡಿ ವಿನ್ನರ್ ನೀವೆ ಎಂದಿದ್ದಾರೆ. 
 

Latest Videos

click me!