ಬೃಂದಾವನ ನಟ ವರುಣ್‌ ಆರಾಧ್ಯಗೆ ದುಬೈನಲ್ಲಿ ಮಂಡಿಯೂರಿ ಪ್ರಪೋಸ್‌ ಮಾಡಿದ ಗೆಳತಿ ನಮ್ರತಾ

Published : Sep 03, 2026, 07:51 PM IST

ಯೂಟ್ಯೂಬರ್‌ ವರುಣ್‌ ಆರಾಧ್ಯ, ಗೆಳತಿ ನಮ್ರತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ, ನಮ್ರತಾ ಅವರು ದುಬೈನ ಕ್ರೂಸ್ ಹಡಗಿನಲ್ಲಿ ವರುಣ್‌ಗೆ ಉಂಗುರ ತೊಡಿಸಿ ವಿಶೇಷವಾಗಿ ಪ್ರಪೋಸ್ ಮಾಡಿದ್ದಾರೆ. ಈ ಸಂಭ್ರಮದ ಕ್ಷಣವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

PREV
16

ಯೂಟ್ಯೂಬರ್‌ ಹಾಗೂ ಬೃಂದಾವನ ಧಾರವಾಹಿಯ ನಟ ವರುಣ್‌ ಆರಾಧ್ಯ ಭಾರೀ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ ಇತ್ತೀಚೆಗೆ ನಡೆದ ಎಂಗೇಜ್‌ಮೆಂಟ್‌. ಗೆಳತಿ ನಮ್ರತಾ ಅವರೊಂದಿಗೆ ವರುಣ್‌ ಆರಾಧ್ಯ ನಿಶ್ಚಿತಾರ್ಥವಾಗಿದ್ದು, ದುಬಾರಿ ಬೆಲೆಯ ವಜ್ರದ ಉಂಗುರವನ್ನು ಅವರು ತೊಡಿಸಿ ಹುಡುಗಿ ಫಿಕ್ಸ್‌ ಮಾಡಿಕೊಂಡಿದ್ದರು.

26

ಈಗ ವರುಣ್‌ ಆರಾಧ್ಯ ಭಾವಿ ಪತ್ನಿ ನಮ್ರತಾ ತಾವು ಕೂಡ ಈ ಸಂಭ್ರಮ ಆಚರಿಸಿಕೊಂಡಿದ್ದಾರೆ. ದುಬೈನಲ್ಲಿ ಸ್ಪೆಷಲ್‌ ಕ್ರೂಸ್‌ ಶಿಪ್‌ನಲ್ಲಿ ಅದ್ಭುತವಾಗಿ ವರುಣ್‌ ಆರಾಧ್ಯಗೆ ರಿಂಗ್‌ ತೊಡಿಸಿ ನಮ್ರತಾ ಪ್ರಪೋಸ್‌ ಮಾಡಿದ್ದಾರೆ.ವರುಣ್‌ ಬೆರಳಿಗೆ ಉಂಗುರ ತೊಡಿಸಿ ನಮ್ರತಾ ಕೈಗೆ ಕಿಸ್‌ ಮಾಡಿದ್ದಾರೆ.

36

ಪೋಸ್ಟ್‌ನಲ್ಲಿ ಬರೆದುಕೊಂಡಿರುವ ನಮ್ರತಾ, ನನ್ನ ಜೀವನವನ್ನು ಕನಸಿನಂತೆ ಮಾಡಿರುವ ವ್ಯಕ್ತಿಗೆ, ನೀನು ನನಗೆ ಎಷ್ಟು ಸ್ಪೆಷಲ್‌ ಅಂತಾ ತೋರಿಸುವ ಸಲುವಾಗಿ ಈ ರೀತಿಯ ಪ್ರಪೋಸ್‌ಅನ್ನು ನಾನು ಇಮ್ಯಾಜಿನ್ ಮಾಡಿದ್ದೆ. ಅಂತಿಮವಾಗಿ, ಈ ಕನಸನ್ನು ದುಬೈನಲ್ಲಿ ನನಸು ಮಾಡಿಕೊಳ್ಳುವ ಅವಕಾಶ ನನಗೆ ಸಿಕ್ಕಿತು. ಐ ಲವ್‌ ಯು ವಿ, ವರುಣ್‌ ಆರಾಧ್ಯ ಎಂದು ನಮ್ರತಾ ಬರೆದುಕೊಂಡಿದ್ದಾರೆ.

46

ನಮ್ರತಾ ಜೊತೆ ಲವ್‌ ಆಗುವ ಮುನ್ನ ವರುಣ್‌ ಆರಾಧ್ಯ ಹಾಗೂ ಯೂಟ್ಯೂಬರ್‌ ವರ್ಷಾ ಕಾವೇರಿ ತುಂಬಾ ವರ್ಷಗಳ ಕಾಲ ರಿಲೇಷನ್‌ಷಿಪ್‌ನಲ್ಲಿದ್ದರು. ಇದು ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿತ್ತು. ಇಬ್ಬರೂ ಮದುವೆಯಾಗುತ್ತಾರೆ ಎಂದೂ ಸುದ್ದಿಯಾಗಿತ್ತು. ಆದರೆ, ಯಾವುದೋ ವಿಚಾರಕ್ಕೆ ಬ್ರೇಕಪ್‌ ಮಾಡಿಕೊಂಡಿದ್ದರು. 'ನಾನು ಬೇರೆ ಹುಡುಗಿಯನ್ನು ಮದುವೆಯಾಗಬಹುದು..' ಎಂದು ವರುಣ್‌ ಹೇಳಿದ ಕಾರಣವೇ ಬ್ರೇಕಪ್ ಆಗಿದೆ ಎಂದು ವರ್ಷಾ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ತಿಳಿಸಿದ್ದರು.

56

ಅದಾದ ಬಳಿಕ ಬೃಂದಾವನ ಧಾರವಾಹಿಯಲ್ಲಿ ನಟಿಸಿದ್ದ ವರುಣ್‌ ಆರಾಧ್ಯ ಕೆಲವೇ ಸಮಯದಲ್ಲಿ ಎಲ್ಲರ ಮನೆಮಾತಾಗಿದ್ದರು. ಸೀರಿಯಲ್‌ನಿಂದ ಬಂದ ಜನಪ್ರಿಯತೆಯಿಂದ ಯೂಟ್ಯೂಬ್‌ನಲ್ಲೂ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದರು. ಈಗ ಟಿವಿ ಸ್ಕ್ರೀನ್‌ ಹಾಗೂ ಡಿಜಿಟಲ್‌ ಮೀಡಿಯಾ ಎರಡರಲ್ಲೂ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

66

ನಮ್ರತಾಳನ್ನು ವಿಶೇಷವಾಗಿ ವರುಣ್‌ ಆರಾಧ್ಯ ಎಲ್ಲರಿಗೂ ಪರಿಚಯ ಮಾಡಿಸಿದ್ದರು. ಆಕೆಯ ಜೊತೆಗೆ ಇರುವ ಫೋಟೋಗಳನ್ನು ಮೊದಲಿಗೆ ಹಂಚಿಕೊಂಡಿದ್ದ ಅವರು ಮುಖ ರಿವಿಲ್‌ ಮಾಡಿರಲಿಲ್ಲ. ಕೊನೆಗೆ ಗರ್ಲ್‌ಫ್ರೆಂಡ್‌ ಫೇಸ್‌ ರಿವಿಲ್‌ ಅನ್ನೋ ಯೂಟ್ಯೂಬ್‌ ವಿಡಿಯೋ ಮಾಡಿಯೇ ನಮ್ರತಾಳನ್ನು ಪರಿಚಯಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories