ಕನ್ನಡತಿ ಧಾರವಾಹಿ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಇದೆ.
ಹರ್ಷ ಭುವಿಯ ಹಿಂದೆ ಹಿಂದೆ ಬಿದ್ದಿದ್ರೆ ಅತ್ತ ವರುಧಿನಿ ಹರ್ಷನನ್ನು ಡಿನ್ನರ್‌ಗೆ ಕರೆದು ಪ್ರಪೋಸ್ ಮಾಡುವ ಪ್ಲಾನ್‌ನಲ್ಲಿದ್ದಾಳೆ.
ಸೂಪರ್ ಆಗಿ ರೆಡಿಯಾಗಿ ಡಿನ್ನರ್‌ಗೆ ಬರೋ ವರುಧಿನಿ ತನ್ನ ಅಲಂಕಾರದ ಬಗ್ಗೆಯೂ ಕೇರ್ ಮಾಡುತ್ತಾಳೆ.
ಇತ್ತ ಹರ್ಷ ಕ್ಯಾಶುವಲ್ ಡಿನ್ನರ್ ಎಂದು ಆರಾಮವಾಗಿ ಡಿನ್ನರ್‌ಗೆ ಬರುತ್ತಾನೆ. ಆದರೆ ಅಲ್ಲಿ ವರುಧಿನಿ ಪ್ರಪೋಸ್ ಮಾಡ್ತಾಳಾ..?
ಹಾಗೇನಾದ್ರೂ ವರುಧಿನಿ ಹರ್ಷನಿಗೆ ಐ ಲವ್ ಯು ಎಂದರೆ ಶಾಕ್ ಆಗುವ ಸರದಿ ಹರ್ಷನದ್ದಾಗುತ್ತದೆ.
ಇದಕ್ಕೆ ಹರ್ಷ ಹೇಗೆ ಪ್ರತಿಕ್ರಿಯಿಸಬಹುದು..? ನೋ ಎಂದರೆ ವರುಧಿನಿ ರಿಯಾಕ್ಷನ್ ಹೇಗಿರಬಹುದು, ಎಲ್ಲವೂ ಸಕ್ಸಸ್ ಆದರೆ ಭುವಿ ಕತೆ ಏನು..? ಇವೆಲ್ಲವೂ ಸದ್ಯ ಕುತೂಹಲ ಹೆಚ್ಚಿಸಿದೆ.