Bigg Boss ರಕ್ಷಿತಾ ಶೆಟ್ಟಿ ಮಾತಿಗೆ ವರ್ತೂರು ಸಂತೋಷ್​ ಸಿಕ್ಕಾಪಟ್ಟೆ ಅಸಮಾಧಾನ: 2 ಲಕ್ಷದ ಕಥೆ ಏನಾಯ್ತು

Published : May 06, 2026, 11:57 AM IST

ಬಿಗ್​ಬಾಸ್​ ರನ್ನರ್ ಅಪ್ ರಕ್ಷಿತಾ ಶೆಟ್ಟಿಗೆ ಹಣ ನೀಡುವುದಾಗಿ ವರ್ತೂರು ಸಂತೋಷ್ ಘೋಷಿಸಿದ್ದರು. ಆದರೆ ರಕ್ಷಿತಾ ಅವರ ಮಾತಿನ ವೈಖರಿಯಿಂದ ಅಸಮಾಧಾನಗೊಂಡಿದ್ದ ವರ್ತೂರು, ಕೊನೆಗೆ ಅವರಿದ್ದಲ್ಲಿಗೆ ಹೋಗಿ ಹಣ ನೀಡಿ ಮಾತು ಉಳಿಸಿಕೊಂಡಿದ್ದಾರೆ.

PREV
16
ಅರೆ ಬರೆ ಕನ್ನಡದಿಂದ ಫೇಮಸ್​

ಅರೆಬರೆ ಕನ್ನಡದಿಂದಲೇ ಲಕ್ಷಾಂತರ ಮಂದಿಗೆ ಹುಚ್ಚು ಹಿಡಿಸಿರುವ, ಅಪಾರ ಅಭಿಮಾನಿಗಳನ್ನು ಪಡೆದಿರುವ ಮಂಗಳೂರು ಪುಟ್ಟಿ ಎಂದೇ ಫೇಮಸ್​ ಆದವರು ಬಿಗ್​ಬಾಸ್​ ರಕ್ಷಿತಾ ಶೆಟ್ಟಿ (Bigg Boss Rakshita Shetty).

26
ರಕ್ಷಿತಾ ಮಾತು ವೈರಲ್​

ಈಕೆ ಮಾತನಾಡಲು ಶುರು ಮಾಡಿದ್ರು ಎಂದರೆ, ಅದನ್ನು ಜನರು ಫುಲ್​ ಕೇಳದೇ ಇರುವುದೇ ಇಲ್ಲ. ಏಕೆಂದರೆ, ಏನೋ ಹೇಳಲು ಹೋಗಿ ಇನ್ನೇನೋ ಹೇಳಿ, ಅಲ್ಲೊಂದು ತಮಾಷೆ ತಂದಿಡುವಲ್ಲಿ ರಕ್ಷಿತಾದು ಎತ್ತಿದ ಕೈ. ಕನ್ನಡ ಸರಿಯಾಗಿ ಬರದ ಕಾರಣದಿಂದಾಗಿ ರಕ್ಷಿತಾ ಆಡುವ ಮಾತುಗಳು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತದೆ.

36
ರಕ್ಷಿತಾ ಶೆಟ್ಟಿ ಹವಾ

ಬಿಗ್​ಬಾಸ್​ 12 (Bigg Boss 12) ಮುಗಿದರೂ ಕೆಲವು ಸ್ಪರ್ಧಿಗಳ ಹವಾ ಇನ್ನೂ ನಿಂತಿಲ್ಲ. ಅವರಲ್ಲಿ ಒಬ್ಬರು ರಕ್ಷಿತಾ ಶೆಟ್ಟಿ (Rakshita Shetty). ಈ ಬಾರಿಯ ಬಿಗ್​ಬಾಸ್​ನಲ್ಲಿ ಮೊದಲ ರನ್ನರ್​ ಅಪ್​ಗೆ ಎರಡು ಲಕ್ಷ ರೂಪಾಯಿ ನೀಡುವುದಾಗಿ, ಬಿಗ್​ಬಾಸ್​ 10ರ ಸ್ಪರ್ಧಿ ವರ್ತೂರು ಸಂತೋಷ್​ ಘೋಷಣೆ ಮಾಡಿದ್ದರು. ಅದರಂತೆ ಅವರು ಈಗ ರಕ್ಷಿತಾ ಶೆಟ್ಟಿ ಅವರಿಗೆ ಹಣ ನೀಡಬೇಕಿದೆ.

46
ಕರೆ ಮಾಡಿದ್ದ ವರ್ತೂರು

ಅದರಂತೆಯೇ, ವರ್ತೂರು ಅವರು ರಕ್ಷಿತಾ ಶೆಟ್ಟಿ ಕೆಲ ದಿನಗಳ ಹಿಂದೆ ಅವರು ಕರೆ ಮಾಡಿ ಹಣವನ್ನು ನೀಡುವುದಾಗಿ ಹೇಳಿದ್ದರು. ಕೊನೆಗೆ ರಕ್ಷಿತಾ ತಾವು ಇನ್ನೂ ಹಣ ಪಡೆದಿಲ್ಲ. ಅವರ ಮನೆಗೆ ಹೋಗಿಲ್ಲ ಎಂದಿದ್ದರು.

56
ಸಿಕ್ಕಾಪಟ್ಟೆ ಅಸಮಾಧಾನ

ಇದೀಗ ಮತ್ತೊಮ್ಮೆ ವರ್ತೂರು ಅವರಿಗೆ ಇದೇ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ವರ್ತೂರು ಅವರು ರಕ್ಷಿತಾ ಬಗ್ಗೆ ಸಿಕ್ಕಾಪಟ್ಟೆ ಅಸಮಾಧಾನ ಹೊರಹಾಕಿದ್ದಾರೆ. ಅವಳು ಏನ್​ ಮಾತಾಡ್ತಾಳೋ ಗೊತ್ತಾಗಲ್ಲ. ಅವಳೇನು ಚಿಕ್ಕ ಹುಡುಗಿಯಲ್ಲ. ಮೆಚ್ಯೂರ್​ ಆಗಿದ್ದಾಳೆ. ನಾನು ಹೇಳಿದ್ದು ಅವಳಿಗೆ ಗೊತ್ತಾಗಲ್ಲ, ಅವಳು ಹೇಳಿದ್ದು ನನಗೆ ಗೊತ್ತಾಗಲ್ಲ. ಏನೇನೋ ಮಾತಾಡ್ತಾಳೆ ಎಂದು ಅಸಮಾಧಾನ ಹೊರಹಾಕಿದ್ದಾರೆ ವರ್ತೂರು.

66
ಹಣ ಕೊಟ್ಟಾಯ್ತು

ಅವಳು ಇನ್ನೂ ಇಲ್ಲಿಗೆ ಬಂದಿರಲಿಲ್ಲ. ಅದಕ್ಕಾಗಿ ದುಡ್ಡು ಕೊಟ್ಟಿರಲಿಲ್ಲ. ಬೆಂಗಳೂರಿಗೆ ಬಂದಾಗ, ಮನೆಗೆ ಕರೆದಿದ್ದೆ. ಅವಳಿಗೆ ನಾನು ಹೇಳಿದ್ದು ಅರ್ಥ ಆಗತ್ತೋ ಇಲ್ವೋ ಗೊತ್ತಾಗಲ್ಲ. ಏನೇನೋ ಮಾತಾಡ್ತಾಳೆ. ಅದಕ್ಕಾಗಿಯೇ ನಾನು ನನ್ನ ಮಾತು ಈಡೇರಿಸಲು ಅವಳು ಇದ್ದಲ್ಲಿಯೇ ಹೋಗಿ ಹಣ ಕೊಟ್ಟು ಬಂದಿದ್ದೇನೆ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories