ಮದುವೆ ಗುಸುಗುಸು ನಡುವೆ ಡಿನ್ನರ್ ಡೇಟ್ ಫೋಟೋ ಹಂಚಿಕೊಂಡ ನಮ್ರತಾ ಗೌಡ! ಯಾರು ಪ್ರಿಯಕರ?

Published : Feb 14, 2026, 10:08 AM IST

ಕಿರುತೆರೆ ನಟಿ ನಮ್ರತಾ ಗೌಡ ತಮ್ಮ ಡಿನ್ನರ್ ಡೇಟ್ ಫೋಟೋವನ್ನು ಹಂಚಿಕೊಂಡಿದ್ದು, ಮದುವೆ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದ್ದಾರೆ. ಪ್ರೇಮಿಗಳ ದಿನದಂದು ಈ ಪೋಸ್ಟ್ ಹಾಕಿದ್ದರೂ, ತಮ್ಮ ಪ್ರಿಯಕರ ಯಾರೆಂಬುದನ್ನು ಅವರು ಬಹಿರಂಗಪಡಿಸಿಲ್ಲ, ಇದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

PREV
15
ನಟಿ ನಮ್ರತಾ ಗೌಡ ಡಿನ್ನರ್ ಡೇಟ್ ಫೋಟೋ

ಕಿರುತೆರೆ ಲೋಕದ ಜನಪ್ರಿಯ ನಟಿ ನಮ್ರತಾ ಗೌಡ ಡಿನ್ನರ್ ಡೇಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ನಮ್ರತಾ ಗೌಡ ಮದುವೆಯಾಗ್ತಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ನಡುವೆ ಇಂದಿನ ಪೋಸ್ಟ್ ಅಭಿಮಾನಿಗಳಲ್ಲಿ ಕುತೂಹಲವನ್ನುಂಟು ಮಾಡಿದೆ.

25
ನಮ್ರತಾ ಗೌಡ ಮದುವೆ

ನಮ್ರತಾ ಗೌಡ ನಾಯಕ ನಟರೊಬ್ಬರನ್ನು ಪ್ರೀತಿಸುತ್ತಿದ್ದಾರೆ. ಅವರನ್ನೇ ಮದುವೆ ಆಗ್ತಾರೆ ಎಂಬ ಸುದ್ದಿ ಮುನ್ನಲೆಗೆ ಬಂದಿತ್ತು. ಆದರೆ ಆ ನಾಯಕ ನಟ ಯಾರು ಎಂಬುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಈ ಕುರಿತು ನಮ್ರತಾ ಗೌಡ ಸಹ ಯಾವುದೇ ಹೇಳಿಕೆಯನ್ನು ನೀಡಿಲ್ಲ.

35
ಪ್ರೇಮಿಗಳ ದಿನ

ಇಂದು ಬೆಳಗ್ಗೆ ಇನ್‌ಸ್ಟಾಗ್ರಾಂನಲ್ಲಿ ಡಿನ್ನರ್ ಡೇಟ್ ಫೋಟೋ ಹಂಚಿಕೊಂಡಿರುವ ನಮ್ರತಾ, ಪ್ರೇಮಿಗಳ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. ಆದ್ರೆ ತಮ್ಮ ಪ್ರಿಯಕರ ಯಾರು ಎಂಬ ವಿಷಯವನ್ನು ಹಂಚಿಕೊಂಡಿಲ್ಲ. ಈ ಪೋಸ್ಟ್‌ಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಯಾರೊಂದಿಗೆ ಡಿನ್ನರ್ ಡೇಟ್ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಪ್ರೇಮಿಗಳ ದಿನದ ಹೋಟೆಲ್ ಬುಕ್ಕಿಂಗ್‌ನಲ್ಲಿ ಶೇ.170ರಷ್ಟು ಹೆಚ್ಚಳ: ಭಾರತದ ಈ ತಾಣಗಳೇ ಹಾಟ್‌ ಫೇವರಿಟ್

45
1.1 ಮಿಲಿಯನ್ ಫಾಲೋವರ್ಸ್‌

ಸದ್ಯ ಕನ್ನಡ ಕಿರುತೆರೆಯ ನಂಬರ್ ಇನ್ ಕರ್ಣ ಸೀರಿಯಲ್‌ನಲ್ಲಿ ನಮ್ರತಾ ಗೌಡ ನಟಿಸುತ್ತಿದ್ದಾರೆ. ನಿತ್ಯಾ ಪಾತ್ರಕ್ಕೆ ಜೀವ ತುಂಬಿರುವ ನಮ್ರತಾ ಗೌಡ, ಇನ್‌ಸ್ಟಾಗ್ರಾಂನಲ್ಲಿ 1.1 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ನಮ್ರತಾ ಗೌಡ ಓರ್ವ ಉತ್ತಮ ಡ್ಯಾನ್ಸರ್ ಸಹ ಆಗಿದ್ದಾರೆ.

ಇದನ್ನೂ ಓದಿ: ಬೆಡ್‌ರೂಮ್ ಮಂಚಕ್ಕಾಗಿ ಕಾಲೇಜಿನಲ್ಲಿ ಕಿತ್ತಾಡಿಕೊಂಡ ಅಮೂಲ್ಯ-ವಲ್ಲಭ; ಬಯಲಾಯ್ತು ಬಚ್ಚಿಟ್ಟ ರಹಸ್ಯ!

55
ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ

ಕಳೆದ ಎರಡು ದಶಕಗಳಿಂದಲೂ ಕ್ಯಾಮೆರಾ ಫೇಸ್ ಮಾಡುತ್ತಿರುವ ನಮ್ರತಾ ಗೌಡ, ಬಾಲ ಕಲಾವಿದೆಯಾಗಿಯೂ ನಟಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ನಟನೆಯ ಮಿಲನ ಸಿನಿಮಾದಲ್ಲಿಯೂ ನಮ್ರತಾ ನಟಿಸಿದ್ದರು. ಪುಟ್ಟಗೌಡ ಧಾರಾವಾಹಿಯ ಹಿಮಾ ಮಾತ್ರ ನಮ್ರತಾ ಗೌಡರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿದ್ದರು.

ಇದನ್ನೂ ಓದಿ: Karna Serial ಸೆಟ್ ಹೇಗಿರತ್ತೆ? ಶೂಟಿಂಗ್​ನಲ್ಲಿ ಏನೇನಾಗತ್ತೆ? ತೆರೆಯ ಹಿಂದಿನ ರೋಚಕ ವಿಡಿಯೋ ಇಲ್ಲಿದೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories