ಅಮ್ಮ - ಅಪ್ಪನ ವಿವಾಹ ವಾರ್ಷಿಕೋತ್ಸವಕ್ಕೆ ವಿಶೇಷ ಫೋಟೊ ಜೊತೆಗೆ ಸ್ಪೆಷಲ್ ವಿಶ್ ಮಾಡಿದ ನಟಿ ವೈಷ್ಣವಿ ಗೌಡ

Published : Nov 29, 2024, 08:50 PM ISTUpdated : Nov 30, 2024, 09:01 AM IST

ಸೀತಾ ರಾಮ ಸೀರಿಯಲ್ ನಟಿ ವೈಷ್ಣವಿ ಗೌಡ ಪೋಷಕರು ಇಂದು ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, ನಟಿ ವಿಶೇಷ ಫೋಟೊಗಳ ಜೊತೆಗೆ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ.   

PREV
15
ಅಮ್ಮ - ಅಪ್ಪನ ವಿವಾಹ ವಾರ್ಷಿಕೋತ್ಸವಕ್ಕೆ ವಿಶೇಷ ಫೋಟೊ ಜೊತೆಗೆ ಸ್ಪೆಷಲ್ ವಿಶ್ ಮಾಡಿದ ನಟಿ ವೈಷ್ಣವಿ ಗೌಡ

ಕನ್ನಡ ಕಿರುತೆರೆಯಲ್ಲಿ (Kannada serial actress) ಮಿಂಚುತ್ತಿರುವ ನಟಿ ಸೀತಮ್ಮನ ಪಾತ್ರದ ಮೂಲಕ ಸೀತಾ ರಾಮ ಸೀರಿಯಲ್ ಮೂಲಕ ಕನ್ನಡಿಗರ ಮನ ಗೆಲ್ಲುತ್ತಿದ್ದಾರೆ. ಅಗ್ನಿ ಸಾಕ್ಷಿ ಸೀರಿಯಲ್ ನಲ್ಲಿ ಸನ್ನಿಧಿಯಾಗಿ ಎಷ್ಟು ಮೋಡಿ ಮಾಡಿದ್ರೋ ಅದಕ್ಕಿಂತಲೂ ಹೆಚ್ಚಾಗಿ ಇದೀಗ ಸೀತಾ ಪಾತ್ರದ ಮೂಲಕ್ ಮೋಡಿ ಮಾಡ್ತಿದ್ದಾರೆ ನಟಿ. 
 

25

ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿರುವ ವೈಷ್ಣವಿ (Vaishnavi Gowda) ಹೆಚ್ಚಾಗಿ ತಮ್ಮ ವಿವಿಧ ಫೋಟೊ ಶೂಟ್ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಜೊತೆಗೆ ವಿವಿಧ ಹಾಡಿಗೆ ರೀಲ್ಸ್ ಮಾಡ್ತಾ, ಡ್ಯಾನ್ಸ್ ಮಾಡ್ತಾ, ಸೀರಿಯಲ್ ಸೆಟ್ ನಲ್ಲಿ ಜೋಕ್ ಮಾಡ್ತಾ ವಿಡಿಯೋಗಳನ್ನು ತಮ್ಮ ಇನ್’ಸ್ಟಾಗ್ರಾಂ ನಲ್ಲಿ ಶೇರ್ ಮಾಡುತ್ತಿರುತ್ತಾರೆ. ಇದೀಗ ನಟಿ ವಿಶೇಷ ಫೋಟೊಗಳನ್ನು ಹಂಚಿಕೊಂಡಿದ್ದಾರೆ. 
 

35

ಹೌದು, ವೈಷ್ಣವಿ ಗೌಡ ತಂದೆ ಮತ್ತು ತಾಯಿ ಇಂದು ವಿವಾಹ ವಾರ್ಷಿಕೋತ್ಸವವನ್ನು (wedding anniversary) ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ನಟಿ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಅಮ್ಮ -ಅಮ್ಮನ ಜೊತೆಗಿನ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿ ಶುಭಾಷಯಗಳನ್ನು ತಿಳಿಸಿದ್ದಾರೆ. 
 

45

ಅಪ್ಪ ಮತ್ತು ಅಮ್ಮನ ಮದುವೆಯ ಫೋಟೊದಿಂದ ಹಿಡಿದು, ಅಣ್ಣನ ಮದುವೆಗೆ ತೆಗೆಸಿಕೊಂಡಂತಹ ಫೋಟೊ, ಅತ್ತಿಗೆ ಸೀಮಂತ ದಿನ ತೆಗೆಸಿಕೊಂಡ ಫೋಟೊ ಸೇರಿ ಅಮ್ಮ- ಅಪ್ಪನ ಜೊತೆ ನಿಂತಿರುವ ಹಲವು ಫೋಟೊಗಳನ್ನು ವೈಷ್ಣವಿ ಗೌಡ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ನಟಿ ಅದ್ಭುತವಾದ ಪೋಷಕರಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ಎಲ್ಲಾದಕ್ಕೂ ಥ್ಯಾಂಕ್ಯೂ ಎಂದಿದ್ದಾರೆ. ಅಭಿಮಾನಿಗಳು ಸಹ ನಟಿಯ ಪೋಷಕರಿಗೆ ವಾರ್ಷಿಕೊತ್ಸವದ ಶುಭಶಾಯ ಕೋರಿದ್ದಾರೆ. 
 

55

ನಟಿ ವೈಷ್ಣವಿ ಗೌಡ ಹಲವಾರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಇವರಿಗೆ ಸಾಕಷ್ಟು ಅಭಿಮಾನಿ ಬಳಗವೂ ಇದೆ. ಸೀರಿಯಲ್ ಗಳಲ್ಲಿ ಮಾತ್ರವಲ್ಲದೇ ಬಿಗ್ ಬಾಸ್ ಸೀಸನ್ 8 ರಲ್ಲೂ ವೈಷ್ಣವಿ ಭಾಗವಹಿಸಿದ್ದರು. ಆ ಮೂಲಕವೂ ಕನ್ನಡಿಗರ ಮನಸ್ಸು ಗೆದ್ದಿದ್ದರು. ಸದ್ಯ ಸೀತಾ -ರಾಮದ (Seetha Raama) ಸೀತೆಯಾಗಿ, ರಾಮನ ಮುದ್ದಿನ ಹೆಂಡ್ತಿಯಾಗಿ, ಸಿಹಿ ಮುದ್ದಿನ ಸೀತಮ್ಮ ಆಗಿ ಅದ್ಭುತವಾಗಿ ಅಭಿನಯಿಸುತ್ತಿದ್ದಾರೆ. 
 

Read more Photos on
click me!

Recommended Stories