ಮಾಲ್ಗುಡಿ ಡೇಸ್, ಪಲ್ಲವಿ ಅನುಪಲ್ಲವಿ ಮೂಲಕ ಮೋಡಿ ಮಾಡಿದ ಈ ಬಾಲ ನಟ ಈವಾಗ ಏನ್ ಮಾಡ್ತಿದ್ದಾರೆ ಗೊತ್ತಾ?

Published : Nov 29, 2024, 03:32 PM ISTUpdated : Nov 29, 2024, 04:11 PM IST

ಹೊಳೆಯುವ ಕಣ್ಣುಗಳ ಮೂಲಕವೇ ಬಾಲ್ಯದಲ್ಲಿ ಮೋಡಿ ಮಾಡಿದ ಮಾಸ್ಟರ್ ರೋಹಿತ್ ಶ್ರೀನಾಥ್ ನೆನಪಿದ್ದಾರಾ? ಅವರೀಗ ಏನ್ ಮಾಡ್ತಿದ್ದಾರೆ ಗೊತ್ತಾ?   

PREV
17
ಮಾಲ್ಗುಡಿ ಡೇಸ್, ಪಲ್ಲವಿ ಅನುಪಲ್ಲವಿ ಮೂಲಕ ಮೋಡಿ ಮಾಡಿದ ಈ ಬಾಲ ನಟ ಈವಾಗ ಏನ್ ಮಾಡ್ತಿದ್ದಾರೆ ಗೊತ್ತಾ?

ನಗು ಎಂದಿದೆ ಮಂಜಿನಾ ಬಿಂದು ಎನ್ನುತ್ತಾ ಲಕ್ಷ್ಮೀ ಜೊತೆಗೆ ಮುದ್ದು ಮುದ್ದಾಗಿ ಪಲ್ಲವಿ -ಅನುಪಲ್ಲವಿ (Pallavi Anupallavi) ಸಿನಿಮಾದಲ್ಲಿ ನಟಿಸಿದ್ದ ಆ ಹೊಳೆಯುವ ಕಣ್ಣುಗಳ ಮುದ್ದಾದ ಬಾಲ ನಟ ನೆನಪಿದ್ದಾರ? ನೆನಪಿರಲೇಬೇಕು ಅಲ್ವಾ? ಆ ಹಾಡು ಇಂದಿಗೂ ಜನರು ಕಾಡುತ್ತಿದೆ. 
 

27

ತಮ್ಮ ಹೊಳೆಯುವ ಬೆಕ್ಕಿನಂತಹ ಕಣ್ಣುಗಳ ಮೂಲಕ ಆ ಕಾಲದಲ್ಲಿ ವೀಕ್ಷಕರಿಗೆ ಮೋಡಿ ಮಾಡಿದ್ದ ಹುಡುಗ ರೋಹಿತ್ ಶ್ರೀನಾಥ್ (Rohit Srinath). ಇವರು ಬೇರಾರು ಅಲ್ಲ ಪ್ರಣಯ ರಾಜ ಅಂತಾನೆ ಜನಪ್ರಿಯತೆ ಗಳಿಸಿದ ನಟ ಶ್ರೀನಾಥ್ ಅವರ ಪುತ್ರ. 
 

37

ಅಷ್ಟೇ ಅಲ್ಲ ಇವರು ಮಾಲ್ಗುಡಿ ಡೇಸ್ ನಲ್ಲಿ (Malgudi Days)ರಾಜಂ ಆಗಿ ಸಹ ನಟಿಸಿದ್ದರು.  ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ನೋಡಿದ್ರೆ, ಖಂಡಿತವಾಗಿಯೂ ರಾಜಂ ಪಾತ್ರದ ನೆನಪಿರುತ್ತೆ ಅಲ್ವಾ? ಹೌದು ಅದೇ ಪುಟಾಣಿ ರೋಹಿತ್ ಶ್ರೀನಾಥ್. 
 

47

ರೋಹಿತ್ ಅವರು ಶ್ರೀನಾಥ್‌ ಹಾಗೂ ಗೀತಾ. ದಂಪತಿಗಳ ಪುತ್ರ. ಶ್ರೀನಾಥ್ ಗೆ ಹೆಣ್ಣು ಮಕ್ಕಳೆಂದರೇ ತುಂಬಾ ಇಷ್ಟವಂತೆ. ಅವರು ತಮ್ಮ ಪತ್ನಿ ಹೆರಿಗೆಗೆ ಹೋಗುವಾಗ ಗಂಡು ಮಗು ಜನಿಸಿದರೇ ನಾನು ಬರುವುದಿಲ್ಲ ಎಂದು ತಮಾಷೆ ಮಾಡಿದ್ರಂತೆ, ಆ ಸಮಯದಲ್ಲಿ ಹುಟ್ಟಿದ್ದು ರೋಹಿತ್. 
 

57

ರೋಹಿತ್ ಅವರು ಬಾಲ ನಟನಾಗಿ ಹಲವಾರು ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದಾರೆ. ಗಂಡ ಹೆಂಡತಿ, ಜನುಮ ಜನುಮದ ಅನುಬಂಧ, ಶಿಕಾರಿ, ಗರುಡ ರೇಖೆ, ಖದೀಮ ಕಳ್ಳರು, ಅಜ್ಞಾತ ವಾಸ, ತಾಯಿ ತಂದೆ, ಪಲ್ಲವಿ ಅನುಪಲ್ಲವಿ ಹಾಗೂ ಶಂಕರ್ ನಾಗ್ ಅವರ ಮಾಲ್ಗುಡಿ ಡೇಸ್‌ ಹೀಗೆ ಹಲವಾರು ಆಗಿನ ಹಿಟ್‌ ಸಿನಿಮಾಗಳಲ್ಲಿ ಅಭಿನಯಿಸಿ ರೋಹಿತ್ ಜನಪ್ರಿಯತೆ ಪಡೆದಿದ್ದರು. 
 

67

ಆದರೆ ನಂತರದ ದಿನಗಳಲ್ಲಿ ವಿಧ್ಯಾಭ್ಯಾಸದತ್ತ ಗಮನ ಹರಿಸಿದ ರೋಹಿತ್‌ ಶ್ರೀನಾಥ್‌ ಅವರು ನಂತರ ನಟನಾ ಕ್ಷೇತ್ರಕ್ಕೆ ಕಾಲಿಡದೇ ಉದ್ಯಮದಲ್ಲಿ ನಿರತರಾಗಿದ್ದರು. ಬಾಲ್ಯದ ಬಳಿಕ ಸಿನಿಮಾದಿಂದ ದೂರ ಉಳಿದು ಉದ್ಯಮ ಕ್ಷೇತ್ರದಲ್ಲೇ ಗುರುತಿಸಿಕೊಂಡಿದ್ದಾರೆ.
 

77

ಇದೀಗ ಒಂದೆರಡು ವರ್ಷಗಳಿಂದ ಸಿನಿಮಾ ಸೀರಿಯಲ್ ಗಳಲ್ಲಿ ರೋಹಿತ್ ಬ್ಯುಸಿಯಾಗಿದ್ದಾರೆ. ಈ ಹಿಂದೆ ಫಸ್ಟ್ ಡೇ ಫಸ್ಟ್ ಶೋ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೇ ತ್ರಿಪುರಾ ಸುಂದರಿ ಧಾರಾವಾಹಿಯಲ್ಲೂ ಇವರು ನಟಿಸಿದ್ದರು. ಸದ್ಯ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬ್ರಹ್ಮಗಂಟು (Bramhagantu serial) , ಗಂಗೆ ಗೌರಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 
 

click me!

Recommended Stories