ಜನಪ್ರಿಯ ಧಾರವಾಹಿ ಕನ್ನಡತಿಯಲ್ಲಿ ಭುವಿ ಜೊತೆ ತರಲೆ ಮಾಡೋ ತಂಗಿ ಬಿಂದು ಈಗ ಎಲ್ಲರ ನೆಚ್ಚಿನ ತಂಗಿ ಆಗಿಬಿಟ್ಟಿದ್ದಾರೆ.
ಧಾರವಾಹಿಯಲ್ಲಿ ತಂಗಿ ಪಾತ್ರ ಮಾಡ್ತಾ ತರಲೆ ಮಾಡ್ತಾ, ಎಲ್ಲ ತಂಗೀರು ಹಿಂಗೇ ಇರ್ತಾರೆ ಅನ್ನುವಷ್ಟು ನೀಟಾಗಿ ತಂಗಿಯನ್ನು ತೆರೆ ಮೇಲೆ ಅಭಿನಯಿಸೋದು ಇವರೇ ನೋಡಿ
ಹರ್ಷ-ಭುವಿಯನ್ನು ಒಂದು ಮಾಡುವುದಕ್ಕೆ ತಂಗಿ ಬಿಂದು ಮಾಡೋ ಐಡಿಯಾಗಳು ಚೆನ್ನಾಗಿರುತ್ತವೆ.
ಸಿಂಪಲ್ ಹಳ್ಳಿ ಹುಡುಗಿಯಾದ್ರೂ ಅಕ್ಕನಂತೆ ಮುಗ್ಧಳಾಗಿರದೆ ಎಲ್ಲವನ್ನೂ ಲೆಕ್ಕಾಚಾರ ಮಾಡಿ ನೋಡೋ ಬಿಂದುವಿನ ಸ್ಮಾರ್ಟ್‌ನೆಸ್ ಎಲ್ರಿಗೂ ಇಷ್ಟವಾಗುತ್ತೆ.
ಧಾರವಾಹಿಯಲ್ಲಿ ಭುವಿ ಪಾತ್ರಕ್ಕೆ ಸಪೋರ್ಟಿಂಗ್ ಆಗಿರೋ ಈ ಪಾತ್ರ ಸೂಪರ್ ಆಗಿ ಮುಂದುವರಿದಿದೆ.
ಬಿಂದುವಿನ ಪಾತ್ರ ಬದಲಾದರೂ ಈಗಿನ ಬಿಂದು ಕೂಡಾ ಪಾತ್ರಕ್ಕೆ ನ್ಯಾಯ ಕೊಡೋದ್ರಲ್ಲಿ ಯಶಸ್ವಿಯಾಗಿದ್ದಾರೆ.
ನಟಿ ಮೋಹಿರಾ ಆಚಾರ್ಯ ಇನ್‌ಸ್ಟಾಗ್ರಾಂನಲ್ಲಿ 15.3 ಸಾವಿರ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಆಕ್ಟಿವ್ ಇಲ್ಲದ ನಟಿ ಮಾಡಿರೋದು ಮಾತ್ರ ಇಪ್ಪತ್ತೇ ಪೋಸ್ಟ್