Lakshmi Nivasa Serial: ಆಗ ಒಂದಾಗದೋರು ಈಗ ಪ್ಯಾನ್‌ ಇಂಡಿಯಾ ಲೆವೆಲ್‌ಗೆ ಜೊತೆಯಾದ ಧನಂಜಯ, ಪ್ರಕೃತಿ ಪ್ರಸಾದ್

Published : Aug 12, 2025, 07:02 AM ISTUpdated : Aug 12, 2025, 10:22 AM IST

‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಸಿದ್ದೇಗೌಡ್ರನ್ನು ಮದುವೆ ಆಗಬೇಕು ಅಂತ ಪೂರ್ವಿ ಕನಸು ಕಂಡಿದ್ದಳು. ಆದರೆ ಆಗಿರಲಿಲ್ಲ. ಈಗ ಈ ಜೋಡಿ ಒಂದಾಗಿದೆ. 

PREV
15

ಹೌದು, ಸಿದ್ದೇಗೌಡ್ರು ಅಂದ್ರೆ ತುಂಬ ಇಷ್ಟ ಅಂತ ಪೂರ್ವಿ ಸಾಕಷ್ಟು ಬಾರಿ ಹೇಳಿದ್ದಳು. ಅವರ ಜೊತೆ ಮದುವೆ ಆಗುವ ಕನಸು ಕಂಡಿದ್ದಳು. ನಿಶ್ಚಿತಾರ್ಥ ಆಗಿ ಮದುವೆವರೆಗೂ ಹೋಗಿದ್ದರೂ ಕೂಡ ಮದುವೆ ಆಗಲೇ ಇಲ್ಲ. ಸಿದ್ದೇಗೌಡ್ರು ಭಾವನಾಳನ್ನು ಇಷ್ಟಪಟ್ದಿದ್ದರು.

25

ಈಗ ಈ ಜೋಡಿ ಒಂದಾಗಿದೆ. ಹೌದು, ಪೂರ್ವಿ ಪಾತ್ರಧಾರಿ ಪ್ರಕೃತಿ ಪ್ರಸಾದ್‌ ಹಾಗೂ ಸಿದ್ದೇಗೌಡ್ರು ಪಾತ್ರಧಾರಿ ಧನಂಜಯ ಅವರು ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ರೆಡಿಯಾಗಿದೆ. ಈ ಬಗ್ಗೆ ಇವರಿಬ್ಬರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

35

ಈ ಸಿನಿಮಾಕ್ಕೆ ʼಶುಭ ನಾಮ ಸಂವತ್ಸರʼ ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರಕ್ಕೆ ವಿಶ್ವನಾಥ್‌ ನಾಯ್ಕ್‌ ಎನ್ನುವವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಪೋಸ್ಟರ್‌ ಜೊತೆಗೆ ಇಡೀ ಚಿತ್ರತಂಡ ಪೋಸ್‌ ನೀಡಿದೆ.

45

ಹೊಸ ಆರಂಭ, ಹೊಸ ಪ್ರಯಾಣ! ಅದ್ಭುತ ಪ್ರತಿಭಾನ್ವಿತ ಸಜ್ಜನ್ ಸರ್ ನಿರ್ದೇಶನದ ಈ ಅದ್ಭುತ ಸಿನಿಮಾದ ಭಾಗವಾಗಲು ರೋಮಾಂಚನಗೊಂಡಿರುವೆ. ನನ್ನ ಆತ್ಮೀಯ ಸ್ನೇಹಿತ ಧನಂಜಯ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳುತ್ತಿರುವುದು ಇನ್ನೂ ವಿಶೇಷವಾಗಿದೆ. ಇದಕ್ಕಿಂತ ಉತ್ತಮ ತಂಡವನ್ನು ನಾನು ಕೇಳಲು ಸಾಧ್ಯವೇ ಇರಲಿಲ್ಲ! ತುಂಬಾ ಧನ್ಯಳಾಗಿದ್ದೇನೆ! ಮುಂದೆ ಏನಾಗಲಿದೆ ಎಂದು ತಿಳಿದುಇಕೊಳ್ಳಲು ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಗಳು ಬೇಕು! ಎಂದು ನಟಿ ಪ್ರಕೃತಿ ಪ್ರಸಾದ್‌ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. 

55

ನಕ್ಷತ್ರಗಳ ಕೆಳಗೆ ಕನಸು ಕಾಣುವುದರಿಂದ ಹಿಡಿದು ಈಗ ಜನರ ಮನಸ್ಸಿನಲ್ಲಿ ನಿಲ್ಲುವವರೆಗೆ, ಈ ಪ್ರಯಾಣವು ಮ್ಯಾಜಿಕ್‌ ಆಗಿದೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ನಿಮ್ಮ ಪ್ರೀತಿಯೇ ನನ್ನ ದೊಡ್ಡ ಶಕ್ತಿ. ಇದು ನಿಜಕ್ಕೂ ಹೊಸ ಆರಂಭ, ಪ್ಯಾನ್‌ ಇಂಡಿಯಾ ವೇದಿಕೆಯಲ್ಲಿ ಮೊದಲ ಹೆಜ್ಜೆ ಇಡುತ್ತಿರುವ ಕನಸು. ನಾನು ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇಗೌಡ್ರು ಜೊತೆ ಮಾಡಿದಂತೆ ಈ ಪಾತ್ರಕ್ಕೂ ತುಂಬ ಕಷ್ಟಪಡುವೆ. ನನಗೆ ಈಗ ನಿಮ್ಮೆಲ್ಲರ ಆಶೀರ್ವಾದ ಮತ್ತು ಬೆಂಬಲ ಎಂದಿಗಿಂತಲೂ ಹೆಚ್ಚು ಬೇಕು ಎಂದು ನಟ ಧನಂಜಯ ಅವರು ಬರೆದುಕೊಂಡಿದ್ದಾರೆ.

Read more Photos on
click me!

Recommended Stories