ಶ್ರೀ ದೇವಿ‌ಮಹಾತ್ಮೆ ಧಾರವಾಹಿಯಲ್ಲಿ ಶಿವನ ಅವತಾರ ಎತ್ತಿದ ತಾಂಡವ್ ರಾಮ್

Published : Feb 04, 2025, 08:36 PM ISTUpdated : Feb 05, 2025, 10:22 AM IST

ಜೋಡಿ ಹಕ್ಕಿ ಧಾರಾವಾಹಿ ಮೂಲಕ ಜನಮನ ಗೆದ್ದ ನಟ ತಾಂಡವ್ ರಾಮ್ ಇದೀಗ ಸ್ಟಾರ್ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀ ದೇವಿ‌ಮಹಾತ್ಮೆ ಧಾರವಾಹಿಯಲ್ಲಿ ಶಿವನ ಪಾತ್ರದಲ್ಲಿ ನಟಿಸುತ್ತಿದ್ದಾರೆ.   

PREV
17
ಶ್ರೀ ದೇವಿ‌ಮಹಾತ್ಮೆ ಧಾರವಾಹಿಯಲ್ಲಿ ಶಿವನ ಅವತಾರ ಎತ್ತಿದ ತಾಂಡವ್ ರಾಮ್

ನೀವು ಧಾರಾವಾಹಿ ಪ್ರಿಯರಾಗಿದ್ರೆ, ಖಂಡಿತವಾಗಿಯೂ ನಿಮಗೆ ಜೋಡಿ ಹಕ್ಕಿ ಧಾರಾವಾಹಿ ನೆನಪಿರುತ್ತೆ ಅಲ್ವಾ?  ಈ ಧಾರಾವಾಹಿಯಲ್ಲಿ ಮುಗ್ಧ ರಾಮಣ್ಣನ ಪಾತ್ರದ ಮೂಲಕ ಕನ್ನಡಿಗರ ಮನ ಗೆದ್ದಿದ್ದರು ತಾಂಡವ್ ರಾಮ್ (Thandav Ram). 
 

27

ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀದೇವಿ ಮಹಾತ್ಮೆ  (Sri Devi Mahatme) ಧಾರಾವಾಹಿಯಲ್ಲಿ ಶಿವನ ಪಾತ್ರದಲ್ಲಿ ತಾಂಡವ್ ನಟಿಸುತ್ತಿದ್ದಾರೆ. ಈಗಾಗಲೇ ಧಾರಾವಾಹಿಯಲ್ಲಿ ಇವರ ಪಾತ್ರ ಪ್ರಸಾರವಾಗಿದೆ. 
 

37

ಈ ಹಿಂದೆ ಶ್ರೀದೇವಿ ಮಹಾತ್ಮೆಯಲ್ಲಿ ಅರ್ಜುನ್ ರಮೇಶ್ ಅವರು ಮಹಾದೇವನ ಪಾತ್ರದಲ್ಲಿ ನಟಿಸುತ್ತಿದ್ದರು, ಆದರೆ ಕಾರಣಾಂತರಗಳಿಂದ ಅರ್ಜುನ್ ರಮೇಶ್ (Arjun Ramesh) ಆ ಧಾರಾವಾಹಿಯಿಂದ ಹೊರ ನಡೆದಿದ್ದರು. ಇದೀಗ ಅವರ ಜಾಗವನ್ನು ತಾಂಡವ್ ರಾಮ್ ತುಂಬಿದ್ದಾರೆ. 
 

47

ಅರ್ಜುನ್ ರಮೇಶರನ್ನು ಶಿವನ ಪಾತ್ರದಲ್ಲಿ ಜನರು ತುಂಬಾನೆ ಇಷ್ಟಪಟ್ಟಿದ್ದರು. ಕಳೆದ ಹಲವಾರು ವರ್ಷಗಳಲ್ಲಿ, ಹಲವಾರು ಧಾರಾವಾಹಿಗಳಲ್ಲಿ ಶಿವನ ಪಾತ್ರದಲ್ಲಿ ಅರ್ಜುನ್ ರಮೇಶ್ ನಟಿಸಿದ್ದು, ಶಿವ ಎಂದ ಕೂಡಲೇ ಅರ್ಜುನ್ ಮುಖವೇ ಬರುತ್ತೆ, ಹಾಗಾಗಿ ಅವರನ್ನೆ ಮತ್ತೆ ಶಿವನ ರೂಪದಲ್ಲಿ ನೋಡಲು ಜನ ಬಯಸುತ್ತಿದ್ದಾರೆ. 
 

57

ತಾಂಡವ್ ಭೂಮಿಗೆ ಬಂದ ಭಗವಂತ ಸೀರಿಯಲ್ (Bhoomige Bandha Bhagavanta) ನಲ್ಲೂ ನಟಿಸಿದ್ದರು. ಆದಾದ ನಂತರ ಇತ್ತೀಚೆಗೆ ಒಂದು ಸಿನಿಮಾದಲ್ಲೂ ನಟಿಸಿದ್ದರು. ಆದರೆ ನಿರ್ದೇಶಕರಾದ ಭರತ್ ಎನ್ನುವವರು ಸಿನಿಮಾ ಅರ್ಧದಲ್ಲೇ ನಿಲ್ಲಿಸಿದ ಕಾರಣ ಸಿಟ್ಟಾದ ತಾಂಡವ್ ಅವರ ಕೊಲೆ ಪ್ರಯತ್ನ ಮಾಡುವ ಮೂಲಕ ಸುದ್ದಿಯಾಗಿದ್ದರು. 
 

67

ನಿರ್ದೇಶಕರ ಮೇಲೆ ಲೈಸೆನ್ಸ್ಡ್ ಗನ್ ನಿಂದ ಶೂಟ್ ಮಾಡಿದ್ದು, ಬಳಿಕ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗೂ ಒಳಪಡಿಸಿದ್ದರು. ಇದೀಗ ತಾಂಡವ್ ರಾಮ್ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದು, ಶಿವನ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
 

77

ಭೂಮಿಯಲ್ಲಿರುವ ಪಾರ್ವತಿಯನ್ನು, ಮತ್ತೆ ಕೈಲಾಸಕ್ಕೆ ಕರೆದೊಯ್ಯಲು ಮನುಷ್ಯನ ರೂಪ ತಾಳಿ ಶಿವ ಭೂಮಿಗೆ ಬಂದಿದ್ದು, ಆ ದೃಶ್ಯಗಳಲ್ಲಿ ಸದ್ಯ ತಾಂಡವ್ ರಾಮ್ ನಟಿಸುತ್ತಿದ್ದು, ಇವರ ನಟನೆಯನ್ನು ಜನ ಒಪ್ಪಿಕೊಳ್ಳುತ್ತಾರೋ ಅನ್ನೊದನ್ನು ಕಾದು ನೋಡಬೇಕು. 
 

Read more Photos on
click me!

Recommended Stories