ಬಿಳಿ ಲೆಹೆಂಗಾದಲ್ಲಿ ನಟಿ ಸಾರಾ ಅಣ್ಣಯ್ಯ… ಅಪ್ಸರೆಯನ್ನೇ ಕಂಡಂತಾಯ್ತು ಎಂದ ಅಭಿಮಾನಿ
ಕನ್ನಡ ಕಿರುತೆರೆ ನಟಿ ಸಾರಾ ಅಣ್ಣಯ್ಯ ಬಿಳಿ ಬಣ್ಣದ ಲೆಹೆಂಗಾದಲ್ಲಿ ಪೋಸ್ ನೀಡಿದ್ದು, ನಟಿಯ ಸೌಂದರ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಕನ್ನಡ ಕಿರುತೆರೆ ನಟಿ ಸಾರಾ ಅಣ್ಣಯ್ಯ ಬಿಳಿ ಬಣ್ಣದ ಲೆಹೆಂಗಾದಲ್ಲಿ ಪೋಸ್ ನೀಡಿದ್ದು, ನಟಿಯ ಸೌಂದರ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಕನ್ನಡ ಕಿರುತೆರೆ ನಟಿ ಸಾರಾ ಅಣ್ಣಯ್ಯ (Sara Annaiah) ಸೀರಿಯಲ್ ಗಳಿಂದ ದೂರ ಉಳಿದರೂ ಸಹ ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿರುವ ಮೂಲಕ ಯಾವಾಗಲೂ ತಮ್ಮ ಅಭಿಮಾನಿಗಳ ಜೊತೆ ಕನೆಕ್ಟ್ ಆಗಿರುತ್ತಾರೆ ಈ ನಟಿ. ಈ ಸಲವು ಹೊಸ ಫೋಟೊ ಶೂಟ್ ಮೂಲಕ ಸದ್ದು ಮಾಡ್ತಿದ್ದಾರೆ.
ಒಮ್ಮೊಮ್ಮೆ ಟ್ರೆಡಿಶನ್ ಲುಕ್ ನಲ್ಲಿ, ಮತ್ತೊಮ್ಮೆ ಸಖತ್ ಮಾಡರ್ನ್ ಆಗಿ ಫೋಟೊ ಶೂಟ್ ಮಾಡಿಸಿಕೊಳ್ಳುವ ಸಾರಾ, ಒಟ್ಟಲ್ಲಿ ಹೊಸ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಈ ಬಾರಿ ಮಾಡರ್ನ್ ಟಚ್ ಇರುವ ಟ್ರೆಡಿಶನಲ್ ಲುಕ್ ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.
ಇದೀಗ ಸಾರಾ ಅಣ್ಣಯ್ಯ ಇನ್’ಸ್ಟಾಗ್ರಾಂ ನಲ್ಲಿ ತಮ್ಮ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದಾರೆ. ಶುಭ್ರ ಬಿಳಿ ಬಣ್ಣದ ಲಂಗ, ಬ್ಲೌಸ್ ಅಂದ್ರೆ ಲೆಹೆಂಗಾ ಧರಿಸಿ, ದೊಡ್ಡ ಗಾತ್ರದ ಮೆಟಲ್ ಜುಮುಕಿ ಧರಿಸಿರುವ ಸಾರಾ, ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದಾರೆ. ಇವರ ಅಂದ, ಚಂದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಸಾರಾ ಫೋಟೊ ನೋಡಿರುವ ಅಭಿಮಾನಿಗಳು, ಬ್ಯೂಟಿಫುಲ್, ಸುಂದರಿ, ಏಂಜಲ್, ದೇವಲೋಕದ ಅಪ್ಸರೆ ಎಂದಿದ್ದಾರೆ. ಒಬ್ಬ ಮಹಿಳಾ ಅಭಿಮಾನಿ ಕೂಡ, ನಾನೊಬ್ಬ ಹೆಣ್ಣು ಆದರೆ, ನಿಮ್ಮ ಅಂದ ನೋಡಿದ್ರೆ ನೋಡುತ್ತಲೇ ಇರಬೇಕು ಎಂದಿದ್ದಾರೆ. ಇನ್ನೂ ಕೆಲವರು ಅಮೃತಧಾರೆ ಸೀರಿಯಲ್ (Amruthadhare Serial) ನಲ್ಲಿ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.
ಅಂದ ಹಾಗೇ ನಟಿ ಸಾರಾ ಅಣ್ಣಯ್ಯ ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುವ ಜನಪ್ರಿಯ ಧಾರಾವಾಹಿಯಾಗಿರುವ ಅಮೃತಧಾರೆಯಲ್ಲಿ ಗೌತಮ್ ದಿವಾನ್ ಮುದ್ದಿನ ತಂಗಿ ಮಹಿಮಾ ಪಾತ್ರದಲ್ಲಿ ನಟಿಸುತ್ತಿದ್ದರು. ಮಹಿಮಾ ಪಾತ್ರ ಆರಂಭದಲ್ಲಿ ತುಂಬಾನೆ ಡಾಮಿನೆಟಿಂಗ್ ಆಗಿದ್ದು, ಬಳಿಕ ಬದಲಾಗಿ, ಅತ್ತೆ, ಮಾವನ ಪ್ರೀತಿಯ ಸೊಸೆಯಾಗಿ, ಜೀವನಾ ಮುದ್ದಿನ ಹೆಂಡ್ತಿಯಾಗಿ, ವೀಕ್ಷಕರಿಗೂ ಫೇವರಿಟ್ ಆಗಿದ್ದರು.
ಆದರೆ ಸಾರಾ ದಿಢೀರ್ ಆಗಿ ಸೀರಿಯಲ್ ಬಿಟ್ಟಿದ್ದು ಮಾತ್ರ ವೀಕ್ಷಕರಿಗೆ ಇಷ್ಟವಾಗಿರಲಿಲ್ಲ. ಮಹಿಮಾ ಹಾಗೂ ಜೀವಾ ಇಬ್ಬರ ಪಾತ್ರಗಳು ಸಹ ಬದಲಾಗಿದ್ದು, ಸದ್ಯ ಮಹಿಮಾ ಪಾತ್ರದಲ್ಲಿ ಇಶಿತಾ ವರ್ಷ (Ishitha Varsha) ನಟಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ಕಡಿಮೆ ಸ್ಕ್ರೀನ್ ಸ್ಪೇಸ್ ಇರೋ ಕಾರಣ ಸೀರಿಯಲ್ ನಿಂದ ಸಾರಾ ಹೊರ ನಡೆದಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಸಾರಾ ಎಲ್ಲೂ ಮಾತನಾಡಿಲ್ಲ.
ಇನ್ನು ಸಾರಾ ಅಣ್ಣಯ್ಯ ಕಿರುತೆರೆ ಜನರಿಗೆ ಚಿರಪರಿಚಿತರಾಗಿದ್ದು, ಕನ್ನಡತಿ ಧಾರಾವಾಹಿಯ (Kannadathi serial) ಸೈಕೋ ವರುಧಿನಿ ಪಾತ್ರದ ಮೂಲಕ. ಭುವಿಯ ಬೆಸ್ಟ್ ಫ್ರೆಂಡ್ ಆಗಿರುವ ವರೂ ಪಾತ್ರ ನೆಗೆಟೀವ್ ಶೇಡ್ ಆಗಿದ್ದರೂ ಸಹ ಜನರು ಆ ಪಾತ್ರವನ್ನು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಇವತ್ತಿಗೂ ಸಾರಾ ಅಣ್ಣಯ್ಯ ಅವರನ್ನು ವರು ಆಗಿ ನೋಡೋದಕ್ಕೇನೆ ಜನ ಇಷ್ಟ ಪಡ್ತಾರೆ. ಇದಲ್ಲದೇ ನಟಿ ಒಂದು ತಮಿಳು ವೆಬ್ ಸೀರೀಸ್ ನಲ್ಲೂ ಕೂಡ ನಟಿಸಿದ್ದರು.