ಕಿರುತೆರೆ ನಟಿ ಮಾನ್ಸಿ ಜೋಶಿ ಕನ್ನಡಕ್ಕಿಂತ ತಮಿಳು ಧಾರಾವಾಹಿಯಲ್ಲೇ ಭಾರೀ ಫೇಮಸ್!

Published : Feb 18, 2025, 07:32 PM ISTUpdated : Feb 18, 2025, 08:05 PM IST

ಕನ್ನಡದ ಪಾರು ಧಾರಾವಾಹಿಯ ವಿಲನ್ ಪಾತ್ರದ ಮೂಲಕ ಖ್ಯಾತಿ ಪಡೆದ ನಟಿ ಮಾನ್ಸಿ ಜೋಶಿ ಅವರು ಇದೀಗ ಕನ್ನಡಕ್ಕಿಂತ ಹೆಚ್ಚಾಗಿ ತಮಿಳು ಧಾರಾವಾಹಿಯಲ್ಲಿಯೇ ಹೆಚ್ಚು ಪ್ರಸಿದ್ಧಿ ಹೊಂದಿದ್ದಾರೆ.  ವಿಜಯ್ ಟಿವಿಯ 'ಅನ್ಬುಡನ್ ಕುಶಿ' ಧಾರಾವಾಹಿಯಲ್ಲಿ ಮಾನ್ಸಿ ಜೋಶಿ ನಟಿಸಿದ್ದಾರೆ. ಇದೀಗ ಮಾನ್ಸಿ ಜೋಶಿ ಮದುವೆಗೆ ಹಲವು ತಮಿಳು ಕಿರುತೆರೆ ನಟ-ನಟಿಯರು ಆಗಮಿಸಿದ್ದು, ಫೋಟೋಗಳು ವೈರಲ್ ಆಗಿವೆ.

PREV
16
ಕಿರುತೆರೆ ನಟಿ ಮಾನ್ಸಿ ಜೋಶಿ ಕನ್ನಡಕ್ಕಿಂತ ತಮಿಳು ಧಾರಾವಾಹಿಯಲ್ಲೇ ಭಾರೀ ಫೇಮಸ್!
ಮಾನ್ಸಿ ಜೋಶಿ ಮದುವೆ ಫೋಟೋಗಳು

ಕನ್ನಡತಿ ನಟಿ ಮಾನ್ಸಿ ಜೋಶಿ ಅವರು ಇದೀಗ ಕನ್ನಡಕ್ಕಿಂತ ಹೆಚ್ಚಾಗಿ ತಮಿಳು ಧಾರಾವಾಹಿಯಲ್ಲಿಯೇ ಹೆಚ್ಚು ಪ್ರಸಿದ್ಧಿ ಹೊಂದಿದ್ದಾರೆ.  ವಿಜಯ್ ಟಿವಿಯ 'ಅನ್ಬುಡನ್ ಕುಶಿ' ಧಾರಾವಾಹಿಯಲ್ಲಿ ಮಾನ್ಸಿ ಜೋಶಿ ನಟಿಸಿದ್ದಾರೆ. ಇದೀಗ ಮಾನ್ಸಿ ಜೋಶಿ ಮದುವೆಗೆ ಹಲವು ತಮಿಳು ಕಿರುತೆರೆ ನಟ-ನಟಿಯರು ಆಗಮಿಸಿದ್ದು, ಫೋಟೋಗಳು ವೈರಲ್ ಆಗಿವೆ.

26

ಇತ್ತೀಚೆಗೆ ಸಿನಿಮಾದ ನಟ-ನಟಿಯರ ಮಾದರಿಯಲ್ಲಿಯೇ ತಮಿಳುನಾಡಿನಲ್ಲಿ ಧಾರಾವಾಹಿ ನಟ-ನಟಿಯರು ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ತಮಿಳಿನ ವಿಜಯ್ ಮತ್ತು ಸನ್ ಟಿವಿಯಲ್ಲಿ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ ಮಾನ್ಸಿ ಜೋಶಿ ಅವರ ವಿವಾಹದ ಫೋಟೋಗಳಿಗೆ ಅಲ್ಲಿನ ಜನರಿಂದ ದೊಡ್ಡ ಮಟ್ಟದಲ್ಲಿ ಶುಭ ಹಾರೈಕೆಗಳು ಬಂದಿವೆ

36

ಮಾನ್ಸಿ ಜೋಶಿ, ವಿಜಯ್ ಟಿವಿಯ 'ಕಾದಲಿಕ್ಕ ನೇರಮಿಲ್ಲ' ಧಾರಾವಾಹಿಯ ಪ್ರಜಿನ್ ನಟಿಸಿದ್ದ 'ಅನ್ಬುಡನ್ ಕುಶಿ'ಯಲ್ಲಿ ಆರಂಭದಲ್ಲಿ ನಾಯಕಿಯಾಗಿದ್ದರು. ಆದರೆ ಕೆಲವು ಕಾರಣಗಳಿಂದ ಧಾರಾವಾಹಿಯಿಂದ ಹೊರನಡೆದರು. 2020ರಿಂದ 2022 ರವರೆಗೆ ಈ ಧಾರಾವಾಹಿ ಪ್ರಸಾರವಾಯಿತು. ನಂತರ, ಸನ್ ಟಿವಿಯ 'ಮಿಸ್ಟರ್ ಮನೈವಿ' ಧಾರಾವಾಹಿಯಲ್ಲಿ ಎರಡನೇ ನಾಯಕಿಯಾಗಿ ನಟಿಸಿದರು.

46

ಕಿರುತೆರೆಯ ವೃತ್ತಿಜೀವನದ ಆರಂಭದಲ್ಲಿ ಮಾನ್ಸಿ ಜೋಶಿ ಕನ್ನಡ ಧಾರಾವಾಹಿಗಳತ್ತ ಹೆಚ್ಚು ಒಲವು ಹೊಂದಿದ್ದರು. ಬಿಗ್ ಬಾಸ್ ಖ್ಯಾತಿಯ ಮೋಕ್ಷಿತಾ ಪೈ ನಾಯಕಿಯಾಗಿ ನಟಿಸಿದ್ದ 'ಪಾರು' ಧಾರಾವಾಹಿಯಲ್ಲಿ ಮಾನ್ಸಿ ಖಳನಾಯಕಿಯಾಗಿದ್ದಳು. 2024ರ ಅಕ್ಟೋಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದೀಗ ಮದುವೆ ಮಾಡಿಕೊಂಡಿದ್ದಾರೆ.

56

1994 ರಲ್ಲಿ ಜನಿಸಿದ ಮಾನ್ಸಿ ಜೋಶಿ ಬೆಂಗಳೂರಿನಲ್ಲಿ ಶಾಲೆ ಮತ್ತು ಮಂಗಳೂರಿನಲ್ಲಿ ಕಾಲೇಜು ಶಿಕ್ಷಣ ಪಡೆದರು. ಚಿಕ್ಕಂದಿನಿಂದಲೂ ನಟನೆಯಲ್ಲಿ ಆಸಕ್ತಿ ಹೊಂದಿದ್ದ ಅವರು, ಪದವಿ ಮುಗಿದ ನಂತರ ಧಾರಾವಾಹಿಗಳಲ್ಲಿ ನಟಿಸಲು ಆರಂಭಿಸಿದರು. ಧಾರಾವಾಹಿಗಳಲ್ಲದೆ, ಮಾಡೆಲಿಂಗ್ ಹಾಗೂ ರೀಲ್ಸ್‌ನಲ್ಲಿ ಸಕ್ರಿಯರಾಗಿದ್ದ ಮಾನ್ಸಿ, ಕನ್ನಡ ಮತ್ತು ತಮಿಳು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.

66
ಧಾರಾವಾಹಿಗಳಲ್ಲಿ ಆಸಕ್ತಿ

ಮಾನ್ಸಿ ಜೋಶಿ ಅವರು ಮೂಲತಃ ಬ್ರಾಹ್ಮಣ ಸಮುದಾಯದವರಾಗಿದ್ದು, ಅವರ ಬಹುಕಾಲದ ಗೆಳೆಯ ರಾಘವ್ ಅವರೊಂದಿಗೆ ಬ್ರಾಹ್ಮಣ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದಾರೆ.  ಈಗ ಮದುವೆಯಾಗಿರುವ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

click me!

Recommended Stories