ಪ್ರಸಿದ್ಧ ಕಿರುತೆರೆ ನಟಿ ಚಿತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದು, ಕೆಲವೇ ತಿಂಗಳ ಹಿಂದೆ ಅವರ ನಿಶ್ಚಿತಾರ್ಥ ನಡೆದಿತ್ತು.
ಇದೀಗ ನಟಿಯ ಫೋಟೋಗೆ ಅಭಿಮಾನಿಗಳ RIP ಕಮೆಂಟ್ಸ್ ಹರಿದು ಬರುತ್ತಿವೆ
ತಮಿಳು ನಟಿ, ನಿರೂಪಕಿ ಚಿತ್ರಾ ಆತ್ಮಹತ್ಯೆ ಪ್ರಕರಣ ಸುದ್ದಿಯಾಗಿದೆ. 28 ವರ್ಷದ ಯುವನಟಿ ಸಾವಿಗೆ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಚೆನ್ನೈನ ನಝರೆತ್‌ಪೆಟ್ಟೈ ಹೋಟೆಲ್‌ನಲ್ಲಿ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಾಂಡಿಯನ್ ಸ್ಟೋರ್ಸ್ ಸೀರಿಯಲ್ ಮೂಲಕ ಹಿಟ್ ಆಗಿರುವ ನಟಿ ಕೆಲವೇ ತಿಂಗಳ ತಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಅರೇಂಜ್ಡ್ ಮ್ಯಾರೇಜ್ ಸೆಟ್‌ಅಪ್‌ನಲ್ಲಿ ವರ ಹೇಮಂತ್‌ನನ್ನು ಭೇಟಿಯಾದ ಚಿತ್ರಾ ಆಗಸ್ಟ್ 25ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ನಟಿ ಆತ್ಮಹತ್ಯೆ ಮಾಡಿದಾಗ ಅವರ ಜೊತೆಗಿದ್ದದ್ದು ಭಾವೀ ಪತಿ ಉದ್ಯಮಿ ಹೇಮಂತ್.
ಒಂದೇ ರೂಮಿನಲ್ಲಿ ಉಳಿದು ಕೊಂಡಿದ್ದರು ಈ ಜೋಡಿ. ಸ್ನಾನಕ್ಕೆಂದು ಹೋಗಿದ್ದ ನಟಿ ಬಹಳ ಹೊತ್ತಾಗಿಯೂ ತಿರುಗಿ ಬಾರದೆ ಇದ್ದಾಗ ಬಾಗಿಲು ಬಡಿದರೂ ತೆಗೆಯದೇ ಇದ್ದಾಗ ಹೋಟೆಲ್ ಸ್ಟಾಫ್‌ಗೆ ಮಾಹಿತಿ ನೀಡಿದ್ದಾರೆ ಹೇಮಂತ್
ಸೀರಿಯಲ್ ಶೂಟಿಂಗ್ ಮುಗಿಸಿ ಬೆಳಗ್ಗೆ 2.30ರ ಜಾವ ರೂಮ್ ಸೇರಿದ ನಟಿ ಸ್ವಲ್ಪ ಹೊತ್ತಿನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.